ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಕ್ಯಾಂಟರ್, ಬೈಕ್ ಮತ್ತು ಎಕ್ಸ್‌ಯುವಿ ಕಾರಿನ ನಡುವಿನ ಡಿಕ್ಕಿಯಿಂದಾಗಿ, ಕಾರಿನಲ್ಲಿದ್ದ ಆರು ಮಂದಿ ಹಾಗೂ ಬೈಕ್ ಸವಾರ ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ವ್ಯಾಪ್ತಿಯ ಎಂ. ಸತ್ಯವರ ಗ್ರಾಮದ ಸಮೀಪ ಇಂದು ಶುಕ್ರವಾರ ಬೆಳಗ್ಗೆ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕಾರಿನಲ್ಲಿದ್ದ ಆರು ಮಂದಿ ಹಾಗೂ ಓರ್ವ ಬೈಕ್ ಸವಾರ ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲಿಯೇ ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ.
ಈ ದುರ್ಘಟನೆ ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕ್ಯಾಂಟರ್ ವಾಹನ, ಬೈಕ್ ಹಾಗೂ ಮಹೀಂದ್ರಾ ಎಕ್ಸ್‌ಯುವಿ 700 ಕಾರಿನ ನಡುವೆ ಸಂಭವಿಸಿದ ಸರಣಿ ಡಿಕ್ಕಿಯಿಂದ ಈ ಅಪಘಾತ ಸಂಭವಿಸಿದೆ. ಮಾತ್ರವಲ್ಲ ಕ್ಯಾಂಟರ್ ವಾಹನದ ವೀಲ್ ಕಟ್ ಆಗಿ ರೋಡ್ ಗೆ ಬಂದಾಗ ಎದುರಿನಿಂದ ಬರುತ್ತಿದ್ದ ಬ್ರೀಜಾ ಕಾರು ಕೂಡ ಅದಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ಭೀಕರತೆಯನ್ನು ಸ್ಥಳದಲ್ಲಿನ ಚಿತ್ರಣಗಳೇ ಬಿಚ್ಚಿಡುತ್ತಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಹೊಸಕೋಟೆಯಿಂದ ದೇವನಹಳ್ಳಿ ಕಡೆಗೆ ಅತೀವೇಗವಾಗಿ ಚಲಿಸುತ್ತಿದ್ದ ಎಕ್ಸ್‌ಯುವಿ 700 ಕಾರು ಮೊದಲು ಕಾರಿನಿಂದ ಮುಂದೆ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆ ಮೇಲೆ ಎಸೆಯಲ್ಪಟ್ಟಿದ್ದು, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ನಂತರ ನಿಯಂತ್ರಣ ತಪ್ಪಿದ ಕಾರು ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ವಾಹನಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಎಲ್ಲಾ ಏರ್‌ಬ್ಯಾಗ್‌ಗಳು ಕೂಡ ಬ್ಲಾಸ್ಟ್ ಆಗಿ ಧ್ವಂಸ
ಕ್ಯಾಂಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರ್ ನ ಎಲ್ಲಾ ಏರ್ ಬ್ಯಾಗ್ ಗಳು ಓಪನ್ ಆಗಿದೆ. ಕ್ಯಾಂಟರ್ ನ ವೀಲ್ ಕಟ್ ಆಗಿ ರಸ್ತೆಗೆ ಉರುಳಿದೆ. ಅಪಘಾತದ ತೀವ್ರತೆ ಎಷ್ಟರ ಮಟ್ಟಿಗೆ ಇತ್ತು ಎಂಬುದನ್ನು ಕಾರಿನಿಂದ ಓಪನ್ ಆಗಿರುವ ಏರ್ ಬ್ಯಾಗ್‌ಗಳು ಬಿಚ್ಚಿಡುತ್ತಿವೆ. ಡಿಕ್ಕಿಯ ರಭಸಕ್ಕೆ ಕಾರಿನ ಎಲ್ಲಾ ಏರ್ ಬ್ಯಾಗ್‌ಗಳು ಓಪನ್ ಆಗಿದ್ದು, ಎಲ್ಲಾ ಏರ್‌ಬ್ಯಾಗ್‌ಗಳು ಕೂಡ ಬ್ಲಾಸ್ಟ್ ಆಗಿ ಧ್ವಂಸವಾಗಿದೆ.
ಅಪಘಾತದ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತಕ್ಕೀಡಾದ ಎಕ್ಸ್‌ಯುವಿ 700 ಕಾರಿನ ನೋಂದಣಿ ಸಂಖ್ಯೆ KA 03 NW 0138 ಆಗಿದ್ದು, ಕಾರಿನ ಗುರುತೇ ಸಿಗದಂತಾಗಿದೆ. ಸರಣಿ ಅಪಘಾತಕ್ಕೆ ಕಾರಿನ ಅತೀವೇಗ ಮತ್ತು ನಿರ್ಲಕ್ಷ್ಯ ಚಾಲನೆಯೇ ಕಾರಣವಾಗಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಮೃತಪಟ್ಟವರ ಮಾಹಿತಿ ಇಂತಿದೆ:
- ಅಶ್ವಿನ್ ನಾಯರ್ 17 ವರ್ಷ ಆರ್ ವಿ ಪಿಯು ಕಾಲೇಜ್ , ಕೊತ್ತನೂರು ನಿವಾಸಿ
- ಅರ್ಹನ್ ಶರೀಫ್, ಸಿಎಂಆರ್ ಶಾಲೆ ವಿದ್ಯಾರ್ಥಿ, ಹೆಚ್ ವಿ ಆರ್ ಲೇಔಟ್ ನಿವಾಸಿ
- ಅಯನ್ ಅಲಿ 17 ವರ್ಷ ಸಿ ಎಂ ಆರ್ ಸ್ಕೂಲ್
- ಭರತ್ 18 ವರ್ಷ , ಸಿಎಂಆರ್ ಕಾಲೇಜ್, ಫ್ರೇಜನ್ ಟೌನ್ ನಿವಾಸಿ.
- ಈತನ್ ಜಾರ್ಜ್ 17 ವರ್ಷ. ಆರ್ ವಿ 1st ಪಿಯು ಕಾಲೇಜ್( ಹುಳಿಮಾವು ನಿವಾಸಿ)
- ಫರ್ಹಾನ್, 17 ವರ್ಷ
- ಗಗನ್ 26 ವರ್ಷ ( ಬೈಕ್ ಸವಾರ ) ಸಫಲ್ ನಲ್ಲಿ ಕೆಲಸ


