ತುಮಕೂರು(ಆ.18): ಬೆಂಗಳೂರಿನಲ್ಲಿ ಹೈ ಅಲರ್ಟ್‌ ಘೋಷಣೆ ಬೆನ್ನಲ್ಲೇ ಸರ್ಕಾರದ ಸೂಚನೆ ಮೇರೆಗೆ ತುಮಕೂರು ಜಿಲ್ಲೆಯಲ್ಲಿಯೂ ಕೂಡ ಪೊಲೀಸರು ಭಾರಿ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಂಶಿಕೃಷ್ಣ ಆದೇಶಿಸಿದ್ದಾರೆ.

ನಗರದ ಬಸ್‌ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ರೈಲ್ವೆ ನಿಲ್ದಾಣ, ಕಾಲೇಜು ಮೈದಾನ, ಕ್ರೀಡಾಂಗಣ ಸುತ್ತಮುತ್ತ ನಿರಂತರವಾಗಿ ಪೊಲೀಸರು ಗಸ್ತಿನಲ್ಲಿದ್ದಾರೆ. 10 ಮಂದಿ ಪೊಲೀಸ್‌ ಸಿಬ್ಬಂದಿ ಒಳಗೊಂಡಿರುವ ಕ್ವಿಕ್‌ ರೆಸ್ಪಾನ್ಸ್‌ ಟೀಂ ನಿರಂತರವಾಗಿ ನಗರದಲ್ಲಿ ತಪಾಸಣೆ ನಡೆಸುತ್ತಿದೆ.

ಮದ್ವೆ ಈಗ ಬೇಡ ಅಂದಿದ್ದಕ್ಕೆ ಕೊಲೆಗೆ ಯತ್ನಿಸಿದ ಪಾಗಲ್ ಪ್ರೇಮಿ..!

ಎಂಜಿ ರಸ್ತೆ ಶಾಪಿಂಗ್‌ ಕಾಂಪ್ಲೆಕ್ಸ್‌ಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಇದಲ್ಲದೆ ಕ್ಯಾತ್ಸಂದ್ರ, ಕರಜೀವನಹಳ್ಳಿ, ಶಿರಾಗೇಟ್‌ ಬಳಿ ಚೆಕ್‌ ಪೋಸ್ಟ್‌ ತೆರೆಯಲಾಗಿದೆ. ಎಲ್ಲಾ ವಾಹನಗಳ ತಪಾಸಣೆ ನಡೆಸಿ ಬಿಡಲಾಗುತ್ತಿದೆ. ಲಾಡ್ಜ್‌ಗಳ ತಪಾಸಣೆಯನ್ನೂ ನಡೆಸಿದ್ದೇವೆ. ಈವರೆಗೂ ಯಾವುದೇ ರೀತಿಯ ಶಂಕಿತರು ಪತ್ತೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.