ಸಿಕ್ಕವರಿಗೆ ಸೀರುಂಡೆಯಾದ ಈರುಳ್ಳಿ, ಕೊಳ್ಳೋಕೆ ಮುಗಿಬೀಳ್ತಾರೆ ವ್ಯಾಪಾರಿಗಳು

ಈರುಳ್ಳಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ವಿಡಿಯೋಗಳು ವೈರಲ್‌ ಆಗುತ್ತಿರುವ ಬೆನ್ನಲ್ಲೇ ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಗಾಗಿ ವ್ಯಾಪಾರಿಗಳು ಮುಗಿಬಿದ್ದ ಘಟನೆ ಶನಿವಾರ ನಡೆದಿದೆ.

high demand for onions from chikkaballapur merchants

ಚಿಕ್ಕಬಳ್ಳಾಪುರ(ಡಿ.08): ಈರುಳ್ಳಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ವಿಡಿಯೋಗಳು ವೈರಲ್‌ ಆಗುತ್ತಿರುವ ಬೆನ್ನಲ್ಲೇ ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಗಾಗಿ ವ್ಯಾಪಾರಿಗಳು ಮುಗಿಬಿದ್ದ ಘಟನೆ ಶನಿವಾರ ನಡೆದಿದೆ.

ಗುಡಿಬಂಡೆ ತಾಲೂಕಿನ ದಿನ್ನಹಳ್ಳಿ ಗ್ರಾಮದ ಲಕ್ಷ್ಮೀನಾರಾಯಣರೆಡ್ಡಿ ಎಂಬ ರೈತ ಎರಡು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದು, ಪ್ರಸ್ತುತ ಇದು ಕೊಯ್ಲಿಗೆ ಬಂದಿದೆ. ಸುಮಾರು 100 ಕ್ವಿಂಟಲ್‌ಗೂ ಹೆಚ್ಚು ಫಸಲು ಬಂದಿದ್ದು, ಇದರ ಸ್ಯಾಂಪಲ್‌ ಮಾರಾಟಕ್ಕಾಗಿ ಶನಿವಾರ 15 ಮೂಟೆ ಈರುಳ್ಳಿಯನ್ನು ಮಾರುಕಟ್ಟೆಗೆ ತಂದಿದ್ದರು. ಈರುಳ್ಳಿ ಮಾರುಕಟ್ಟೆಗೆ ಬಂದಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮುಗಿ ಬಿದ್ದ ವ್ಯಾಪಾರಸ್ಥರು ಪೈಪೋಟಿಗೆ ಬಿದ್ದು ಈರುಳ್ಳಿ ಖರೀದಿಸಿ ಕೊಂಡೊಯ್ದರು.

ಪೊಲೀಸರ ಮೇಲೆ ಕೂಗಾಡಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ವಿರುದ್ಧ FIR

50 ಕೆಜಿ ತೂಗುವ ಈರುಳ್ಳಿ ಮೂಟೆಗೆ 6 ಸಾವಿರ ರುಪಾಯಿಯಂತೆ ಶನಿವಾರ ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟವಾಗಿದ್ದು, ಇನ್ನೂ ಉಳಿದಿರುವ 100 ಮೂಟೆ ಈರುಳ್ಳಿ ಇದೇ ಬೆಲೆಗೆ ಮಾರಾಟವಾದರೆ ಉತ್ತಮ ಲಾಭ ಸಿಗಲಿದೆ ಎಂದು ರೈತ ಲಕ್ಷ್ಮೀನಾರಾಯಣರೆಡ್ಡಿ ಖುಷಿ ವ್ಯಕ್ತಪಡಿಸಿದ್ದಾರೆ.

ಉಳ್ಳಾಗಡ್ಡಿ ಮಹಾತ್ಮೆ; ಈರುಳ್ಳಿಗೆ ಸರ್ಕಾರವನ್ನೇ ಬೀಳಿಸುವ ತಾಕತ್ತಿದೆ!

ಎರಡು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿರುವ ಲಕ್ಷ್ಮೀನಾರಾಯಣರೆಡ್ಡಿ ಅವರಿಗೆ ಇದೇ ಬೆಲೆಯಲ್ಲಿ ಎಲ್ಲ ಫಸಲು ಮಾರಾಟವಾದರೆ 6 ಲಕ್ಷಕ್ಕೂ ಹೆಚ್ಚು ಲಾಭ ಸಿಗಲಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ 10 ರುಪಾಯಿಗೆ ಮಾರಾಟವಾಗುತ್ತಿದ್ದ ಈರುಳ್ಳಿ ಪ್ರಸ್ತುತ 150 ರಿಂದ 170 ರುಪಾಯಿವರೆಗೂ ಮಾರಾಟವಾಗುತ್ತಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದ್ದರೆ, ಬೆಳೆಗಾರನ ಕಣ್ಣಲ್ಲಿ ಸಂಸತ ಮೂಡಿಸಿದೆ ಎಂದರೆ ತಪ್ಪಾಗಲಾರದು.

ವಿಜ​ಯ​ಪು​ರ​ದಲ್ಲಿ ಹನಿ​ಟ್ರ್ಯಾಪ್‌: ವ್ಯಾಪಾರಿ ವಿವ​ಸ್ತ್ರ​ಗೊ​ಳಿಸಿ 15 ಲಕ್ಷ ದೋಚಿದರು!

Latest Videos
Follow Us:
Download App:
  • android
  • ios