Asianet Suvarna News Asianet Suvarna News

ಲೈಸೆನ್ಸ್ ಪಡೆದು ಮೈಕ್ ಬಳಸಿ : ಮಸೀದಿಗಳಿಗೆ ಹೈ ಕೋರ್ಟ್ ತಾಕೀತು

  • ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಅನ್ವಯ ಪರವಾನಿಗೆ ಅಗತ್ಯ
  • ಪರವಾನಿಗೆ ಪಡೆಯದ ಹೊರತು ಧ್ವನಿವರ್ಧಕಗಳನ್ನು ಉಪಯೋಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚನೆ
  • ಥಣಿಸಂದ್ರ ಹಾಗು ಸುತ್ತಲಿನ 16 ಮಸೀದಿಗಳಿಗೆ ಹೈ ಕೊರ್ಟ್ ಸೂಚಿಸಿದೆ. 
High court warns masques for using loudspeakers snr
Author
Bengaluru, First Published Aug 11, 2021, 9:08 AM IST
  • Facebook
  • Twitter
  • Whatsapp

ಬೆಂಗಳೂರು (ಆ.11): ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಅನ್ವಯ ಪರವಾನಿಗೆ ಪಡೆಯದ ಹೊರತು ಧ್ವನಿವರ್ಧಕಗಳನ್ನು ಉಪಯೋಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ನಗರದ ಥಣಿಸಂದ್ರ ಹಾಗು ಸುತ್ತಲಿನ 16 ಮಸೀದಿಗಳಿಗೆ ಹೈ ಕೊರ್ಟ್ ಸೂಚಿಸಿದೆ. 

ಮಸೀದಿಗಳು ಅನಧಿಕೃತವಾಗಿ ಧ್ವನಿವರ್ಧಕಗಳನ್ನು ಬಳಸುತ್ತಿರುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆಕ್ಷೇಪಿಸಿ ಪಿಸಿ ರಾಕೇಶ್ ಮತ್ತು ಅಯ್ಯಪ್ಪ ದಾಸ್,  ಬಾಲ ಗೋಪಾಲ್ ಸೇರಿದಂತೆ ಥಣಿಸಂದ್ರ ಮುಖ್ಯರಸ್ತೆಯ ಐಕಾನ್ ಅಪಾರ್ಟ್‌ಮೆಂಟ್‌ನ 32 ಮಂದಿ ನಿವಾಸಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಬಕ್ರೀದ್‌ ನಮಾಜ್‌ ನಿಯಮ ಸಡಿಲಿಕೆ: ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ 

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮುರ್ತಿ ಎ ಎಸ್ ಓಕ ಅವರ ನೇತೃತ್ವದ ವಿಭಾಗೀಯ  ನ್ಯಾಯಪೀಠ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು 2000ರ ಪ್ರಕಾರ ಸಂಬಂಧಪಟ್ಟ ಪ್ರಾಧಿಕಾರದಿಂದ ಲಿಖಿತ ಪರವಾನಿಗೆ ಪಡೆಯದ ಹೊರತು ಸಾರ್ವಜನಿಕರನ್ನು ಉದ್ದೇಶಿಸಿ  ವ್ಯವಸ್ಥೆಗೆ ಧ್ವನಿವರ್ಧಕಗಳನ್ನು ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಪ್ರತಿವಾದಿಗಳಾಗಿರುವ ಥಣಿಸಂದ್ರ ಹಾಗು ಸುತ್ತಲಿನ 16 ಮಸೀದಿಗಳ ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಿತು. 

ಮಸೀದಿಗಳಲ್ಲಿ ದ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ವಕ್ಫ್ ಮಂಡಳಿ ಸುತ್ತೋಲೆ ಹೊರಡಿಸಿರುವ ವಿಚಾರವನ್ನು ಅರ್ಜಿದಾರರ ಪರ ವಕೀಲ ಶ್ರೀಧರ ಪ್ರಭು ನ್ಯಾಯಪೀಠದ ಗಮನಕ್ಕೆ ತಂದರು. ಅದಕ್ಕೆ ಸಮಾಧಾನಗೊಂಡ ನ್ಯಾಯಪೀಠ, ದ್ವನಿವರ್ಧಕಗಳ ಬಳಕೆ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಅಡಿ ನಿರ್ವಹಿಸಲ್ಪಡಬೇಕಾದ ವಿಚಾರ. ಇದರಲ್ಲಿ ವಕ್ಫ್ ಮಂಡಳಿಗೆ ಯಾವ ಕೆಲಸವೂ ಇಲ್ಲ. ಮಂಡಳಿ ಹೊರಡಿಸಿದ ಸುತ್ತೋಲೆಯನ್ನು  ಪರಿಗಣಿಸಲಾಗುವುದಿಲ್ಲ ಎಂದಿತು.

Follow Us:
Download App:
  • android
  • ios