Asianet Suvarna News Asianet Suvarna News

Nomination Rejected: ಬಿಜೆಪಿ ರಿಟ್‌ ವಜಾಗೊಳಿಸಿದ ಹೈಕೋರ್ಟ್‌

*  ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಎಂದ ಏಕಸದಸ್ಯ ಪೀಠ
*  ಶೋಭಿತಾ ಶೆಟ್ಟರ್‌ ಸಲ್ಲಿಸಿದ್ದ ನಾಮಪತ್ರ
*  ಬಿಜೆಪಿ ಪರ ಅರ್ಜಿ ಸಲ್ಲಿಸಿದ್ದ ವಕೀಲ ಅಮರೇಗೌಡ ಮಾಲಿ ಪಾಟೀಲ್‌ 
 

High Court Dismissed the Writ Petition by BJP grg
Author
Bengaluru, First Published Dec 18, 2021, 9:04 AM IST

ಕಾರಟಗಿ(ಡಿ.18): ಇಲ್ಲಿನ ಪುರಸಭೆ(Municipality) 7ನೇ ವಾರ್ಡ್‌ನ ಬಿಜೆಪಿ(BJP) ಅಭ್ಯರ್ಥಿ ನಾಮಪತ್ರ(Nomination) ತಿರಸ್ಕೃತವಾಗಿರುವ ಕುರಿತು ಧಾರವಾಡದ ಹೈಕೋರ್ಟ್‌(Dharwad High Court) ಪೀಠಕ್ಕೆ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ. ಶೋಭಿತಾ ಶೆಟ್ಟರ್‌ ಸಲ್ಲಿಸಿದ್ದ ನಾಮಪತ್ರವನ್ನು ಪರಿಶೀಲಿಸಿದ ಚುನಾವಣಾಧಿಕಾರಿಗಳು(Electoral officers) ಗುರುವಾರ ವಿವಿಧ ಕಾರಣಗಳನ್ನು ನೀಡಿ ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಶೋಭಿತಾ ಧಾರವಾಡ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದರು.

ನಾಮಪತ್ರ ಸಲ್ಲಿಸಲು ನಿಗದಿಪಡಿಸಿದ ಸಮಯದೊಳಗೆ ದಾಖಲೆಗಳೊಂದಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲವೆಂದು ಮೇಲ್ನೊಟಕ್ಕೆ ಕಂಡುಬಂದಿದೆ. ಆದ್ದರಿಂದ ಚುನಾವಣಾಧಿಕಾರಿ ನಾಮಪತ್ರ ತಿರಸ್ಕೃತಗೊಳಿಸಿದ್ದಾರೆ. ನೀವು ಚುನಾವಣಾ ಆಯೋಗಕ್ಕೆ(Election Commission) ಹೋಗಬಹುದು ಎಂದು ನ್ಯಾಯಾಧೀಶ(Judge) ಸಂಜಯಗೌಡ ಇವರಿದ್ದ ಏಕಸದಸ್ಯ ಪೀಠ ರಿಟ್‌ ಅರ್ಜಿಯನ್ನು ವಜಾಗೊಳಿಸಿದೆ. ಬಿಜೆಪಿ ಪರ ವಕೀಲ ಅಮರೇಗೌಡ ಮಾಲಿ ಪಾಟೀಲ್‌ ಅರ್ಜಿ ಸಲ್ಲಿಸಿದ್ದರು.

Karnataka High Court : ಕನ್ನಡ ಕಲಿಕೆಗೆ ಒತ್ತಾಯ ಬೇಡ

ಮತ್ತೊಂದಡೆ ಕಾಂಗ್ರೆಸ್‌(Congress) ಅಭ್ಯರ್ಥಿ ಸೌಮ್ಯ ಮಹೇಶ ಕಂದಗಲ್‌ ಪರ ವಕೀಲ ಕೆ.ಎಸ್‌. ಪಾಟೀಲ್‌ ಕೇವಿಯೆಟ್‌ ಅರ್ಜಿ ದಾಖಲಿಸಿ ಈ ಪ್ರಕರಣದಲ್ಲಿ ತಮ್ಮ ಕಕ್ಷಿದಾರರ ವಾದ ಮಂಡಿಸಲು ಅನುಮತಿ ನೀಡುವಂತೆ ಕೋರಿದ್ದರು. ಆದರೆ, ನ್ಯಾಯಾಧೀಶರು ಬಿಜೆಪಿ ಅಭ್ಯರ್ಥಿಯ ರಿಟ್‌ ಅರ್ಜಿ ವಜಾಗೊಳಿಸಿದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿಯ ಅನುಮತಿಯನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ನಿರಾಕರಿಸಿದರು.

ವಿಕಲಚೇತನರು, ವಿಧವೆಯರಿಗೆ ಸೈಟ್‌ ಹಂಚದ ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ವಿಶೇಷ ಆಶ್ರಯ ಯೋಜನೆಯಡಿ ವಿಕಲಚೇತನರು(Physical Disability), ಮಾಜಿ ಯೋಧರು ಮತ್ತು ವಿಧವೆಯರು ಸೇರಿದಂತೆ 202 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಕಳೆದ ಒಂಬತ್ತು ವರ್ಷಗಳಿಂದಲೂ ಸತಾಯಿಸುತ್ತಿರುವ ಸರ್ಕಾರ(Government of Karnataka) ವಿರುದ್ಧ ಹೈಕೋರ್ಟ್‌(High Court) ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಈ ಕುರಿತು ರಾಜೇಶ್ವರಿ ಸೇರಿದಂತೆ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ವಿಶೇಷ ಆಶ್ರಯ ಯೋಜನೆಯಡಿ 71 ಅಂಗವಿಕಲರು, ಇಬ್ಬರು ಮಾಜಿ ಯೋಧರು ಮತ್ತು 129 ನಿರಾಶ್ರಿತರು ಹಾಗೂ ವಿಧವೆಯರು(Widows) ಸೇರಿದಂತೆ ಒಟ್ಟು 202 ಫಲಾನುಭವಿಗಳನ್ನು ಗುರುತಿಸಲಾಗಿದೆ. ಆದರೆ, ಕಳೆದ 9 ವರ್ಷಗಳಿಂದ ಯೋಜನೆಯ ಸೌಲಭ್ಯವನ್ನು ಫಲಾನುಭವಿಗಳಿಗೆ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸೌಲಭ್ಯಕ್ಕಾಗಿ ಫಲಾನುಭವಿಗಳು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಇನ್ನೂ ನಿವೇಶನಗಳನ್ನು(Site) ಯಾಕೆ ಫಲಾನುಭವಿಗಳಿಗೆ ನೀಡಿಲ್ಲ ಎಂದು ಪ್ರಶ್ನಿಸಿತ್ತು.

ಆಸ್ತಿಗಾಗಿ ಕಿತ್ತಾಡುತ್ತಿರುವ ಅಣ್ಣ- ತಂಗಿಗೆ ಹೈಕೋರ್ಟ್‌ ಬುದ್ಧಿಮಾತು

ನಿವೇಶನ ಹಂಚಿಕೆ ಕುರಿತಂತೆ ಫಲಾನುಭವಿಗಳಿಗೆ ಈಗಾಗಲೇ ಹಕ್ಕುಪತ್ರ ವಿತರಿಸಲಾಗಿದೆ ಎಂದು ಸರ್ಕಾರಿ ವಕೀಲರು(Advocate) ಹೇಳಿದ್ದಾರೆ. ಹಾಗಾಗಿ ಸರ್ಕಾರಕ್ಕೆ ಕೊನೆಯದಾಗಿ ನಾಲ್ಕು ವಾರ ಕಾಲಾವಕಾಶ ನೀಡಲಾಗುವುದು. ಈಗಾಗಲೇ ಗುರುತಿಸಲಾಗಿರುವ ಫಲಾನುಭವಿಗಳಿಗೆ ಈ ಯೋಜನೆಯ ಸೌಲಭ್ಯ ಕಲ್ಪಿಸಿ ವರದಿ ಸಲ್ಲಿಸಬೇಕು. ತಪ್ಪಿದರೆ ಪ್ರತಿವಾದಿ ವಸತಿ ಇಲಾಖೆ ಕಾರ್ಯದರ್ಶಿ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಅರ್ಜಿಯ ಮುಂದಿನ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ತಾಕೀತು ಮಾಡಿತ್ತು. 

ಡೀಸಿ ಮೇಲ್ವಿಚಾರಣೆ:

ಇದಕ್ಕೂ ಮುನ್ನ ಸರ್ಕಾರಿ ವಕೀಲರು, ವಿಶೇಷ ಆಶ್ರಯ ಯೋಜನೆಯಡಿ 202 ಫಲಾನುಭವಿಗಳನ್ನು ಗುರುತಿಸಲಾಗಿದೆ. 154 ಫಲಾನುಭವಿಗಳಿಗೆ(Beneficiaries) ಈಗಾಗಲೇ ಹಕ್ಕು ಪತ್ರ ವಿತರಿಸಲಾಗಿದೆ. ನಿವೇಶನ ವಿತರಿಸಲು ಸರ್ಜಾಪುರ ಹೋಬಳಿಯ ಆನೇಕಲ್‌ ತಾಲೂಕಿನಲ್ಲಿ ಭೂಮಿ ಗುರುತಿಸಲಾಗಿದೆ. ಬಡಾವಣೆ ರಚನೆ ಕಾರ್ಯ ಪ್ರಗತಿಯಲ್ಲಿದ್ದು, ಅದನ್ನು ಖುದ್ದು ಬೆಂಗಳೂರು ನಗರ ಜಿಲ್ಲಾಧಿಕಾರಿಯೇ ಮೇಲ್ವಿಚಾರಣೆ ವಹಿಸಿದ್ದಾರೆ. ಎಂಟು ವಾರ ಕಾಲಾವಕಾಶ ನೀಡಿದರೆ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದರು. 
 

Follow Us:
Download App:
  • android
  • ios