ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಹೈಕಮಾಂಡ್‌ ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ದೆಹಲಿಗೆ ಹೋಗಿ ಓಡಿ ಬರುವುದನ್ನು ನೋಡಿದರೆ ಅಯ್ಯೋ ಅನ್ನಿಸುತ್ತದೆ  ಮಾಜಿ ಸಂಸದ ಎಲ್‌.ಆರ್‌ .ಶಿವರಾಮೇಗೌಡ ಹೇಳಿಕೆ

ನಾಗಮಂಗಲ (ಆ.04): ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಹೈಕಮಾಂಡ್‌ ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. 

ಅವರು ದೆಹಲಿಗೆ ಹೋಗಿ ಓಡಿ ಬರುವುದನ್ನು ನೋಡಿದರೆ ಅಯ್ಯೋ ಅನ್ನಿಸುತ್ತದೆ ಎಂದು ಮಾಜಿ ಸಂಸದ ಎಲ್‌.ಆರ್‌ .ಶಿವರಾಮೇಗೌಡ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್‌ ಬೊಮ್ಮಾಯಿ ಅವರನ್ನು ರಾಜ್ಯದಿಂದ ದೆಹಲಿಗೆ, ದೆಹಲಿಯಿಂದ ರಾಜ್ಯಕ್ಕೆ ಅಲೆದಾಡಿಸುತ್ತಿದೆ ಎಂದು ಟೀಕಿಸಿದರು. 

ಕರ್ನಾಟಕ ಸಂಪುಟ ರಚನೆಗೆ 9+9+8 ಸೂತ್ರ; ವರ್ಕೌಟ್ ಆಗುತ್ತಾ ಬೊಮ್ಮಾಯಿ, ಹೈಕಮಾಂಡ್ ತಂತ್ರ?

ಇನ್ನು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಶಾಸಕರಬಗ್ಗೆ ‘ಸಿಜೆರಿಯನ್‌ ಆಗಿ ಇನ್ನೂ ಹೊಲಿಗೇನೇ ಹಾಕಿಲ್ಲ. ಆಗಲೇ ಖುಲಾವಿ ಹಾಕಿಕೊಂಡು ತಿರುಗಿದರೆ ಹೇಗೆ?’ ಎಂದು ವ್ಯಂಗ್ಯವಾಡಿದರು.

ಇದೇವೇಳೆ ಮಂಡ್ಯ ಜಿಲ್ಲೆಯಿಂದ ಶಾಸಕ ಕೆ.ಸಿ.ನಾರಾಯಣಗೌಡರಿಗೆ ಸಚಿವ ಸ್ಥಾನ ನೀಡಬೇಕು. ಜಿಲ್ಲೆಯಿಂದ ಸಚಿವರಾಗಲು ಅವರೊಬ್ಬರಿಗೆ ಮಾತ್ರ ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು