ಸಿಎಂ ಯಾರು ಆಗ್ಬೇಕು ಅಂತ ಹೈಕಮಾಂಡ್‌ ತೀರ್ಮಾನ ಮಾಡುತ್ತೆ: ಕರಿವೃಷಭ ದೇಶಿಕೇಂದ್ರ ಶ್ರೀಗಳು

ಶ್ರೀ ಮಠ ಸರ್ವೆ ಜನೋ ಸುಖಿನು ಭವಂತು ಅನ್ನುತ್ತೆ. ದೇಶಕ್ಕೆ ಒಳ್ಳೆಯದನ್ನ ಮಾಡಲಿ. ಬಾರದು ಬಪ್ಪದು, ಬಪ್ಪದು ತಪ್ಪದು. ಸೋಮಣ್ಣ ಕೂಡ ಶ್ರೀ ಮಠದ ಮಗನೆ, ಶಿವಕುಮಾರ್ ಕೂಡ ಶ್ರೀ ಮಠದ ಮಗನೆ. ಸೋಮಣ್ಣ ಎರಡೂ ಕಡೆನೂ ಸೋತಿದ್ದಾರೆ. ಅಂದ ಮಾತ್ರಕ್ಕೆ ಸ್ವಾಮಿಗಳು ಸೋಮಣ್ಣಗೆ ಸರಿಯಾಗಿ ಆಶೀರ್ವಾದ ಮಾಡಲಿಲ್ಲ ಅಂತಾ ಅರ್ಥನಾ? ಅಂತ ಪ್ರಶ್ನೆ ಮಾಡಿದ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ 

High Command Decides Who Should be the CM of Karnataka Says Karivrishabha Desikendra Swamiji grg

ತುಮಕೂರು(ಮೇ.14): ರೈತರು ಏನು ಬೆಳೆದರೂ ಅದಕ್ಕೆ ಬೆಲೆ ಸಿಗದೇ ಪರದಾಡುತ್ತಿದ್ದಾರೆ. ಎಲ್ಲಾ ನ್ಯೂನತೆಯನ್ನ ಸರಿಪಡಿಸುವ ನಾಯಕ ಬೇಕಾಗಿದೆ. ಅವರ ಯೋಗಾಯೋಗ ಏನಿರುತ್ತೆ ಅದನ್ನ ಅವರು ಪಡೆಯುತ್ತಾರೆ. ಅವರೇ ಆಗ್ತಾರೆ ಅಂತಾ ಹೇಳೋಕೆ ನಾವೇನು ಭಗವಂತ ಅಲ್ಲ. ಸಿಎಂ ಆಗಲಿ ಅಂತಾ ಆಶೀರ್ವಾದ ಮಾಡೋಕೆ ನಾವೇನು ಹೈ ಕಮಾಂಡ್ ಅಲ್ಲ ಅಂತ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ಅವರು ತಿಳಿಸಿದ್ದಾರೆ. 

ಇಂದು(ಭಾನುವಾರ) ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿರುವ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ‌‌‌.ಕೆ. ಶಿವಕುಮಾರ್‌ ಅವರು ಭೇಟಿ ನೀಡಿದ್ದರು. ಡಿಕೆಶಿ ಭೇಟಿ ಬಳಿಕ ಮಾತನಾಡಿದ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ಅವರು, ಶ್ರೀ ಮಠ ಸರ್ವೆ ಜನೋ ಸುಖಿನು ಭವಂತು ಅನ್ನುತ್ತೆ. ದೇಶಕ್ಕೆ ಒಳ್ಳೆಯದನ್ನ ಮಾಡಲಿ. ಬಾರದು ಬಪ್ಪದು, ಬಪ್ಪದು ತಪ್ಪದು. ಸೋಮಣ್ಣ ಕೂಡ ಶ್ರೀ ಮಠದ ಮಗನೆ, ಶಿವಕುಮಾರ್ ಕೂಡ ಶ್ರೀ ಮಠದ ಮಗನೆ. ಸೋಮಣ್ಣ ಎರಡೂ ಕಡೆನೂ ಸೋತಿದ್ದಾರೆ. ಅಂದ ಮಾತ್ರಕ್ಕೆ ಸ್ವಾಮಿಗಳು ಸೋಮಣ್ಣಗೆ ಸರಿಯಾಗಿ ಆಶೀರ್ವಾದ ಮಾಡಲಿಲ್ಲ ಅಂತಾ ಅರ್ಥನಾ? ಅಂತ ಪ್ರಶ್ನೆ ಮಾಡಿದ್ದಾರೆ. 

Tumakuru: ತಿಪಟೂರಿನ ಕಾಡಸಿದ್ದೇಶ್ವರ ಮಠಕ್ಕೆ ಡಿಕೆಶಿ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ದೇನೇವಾಲಾ ಭಗವಾನ್ ಹೇ, ಜನರ ಅಪೇಕ್ಷೆಯಂತೆ ಬಹುಮತದ ಸರ್ಕಾರ ಬಂದಿದೆ. ಈಗ ಯಾರು ಸಿಎಂ ಆಗ್ಬೇಕು ಅಂತಾ ಹೈ ಕಮಾಂಡ್‌ನವರು ನಿರ್ಧಾರ ಮಾಡುತ್ತಾರೆ ಅಂತ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ಅವರು ಹೇಳಿದ್ದಾರೆ. 

Latest Videos
Follow Us:
Download App:
  • android
  • ios