Chamarajanagar: ಟಿಕೆಟ್‌ ಯಾರಿಗೆಂದು ಹೈಕಮಾಂಡ್‌ ತೀರ್ಮಾನಿಸುತ್ತೆ: ಶಾಸಕ ಮಹೇಶ್‌

ಮಾಜಿ ಶಾಸಕ ಜಿ. ಎನ್‌ ನಂಜುಂಡಸ್ವಾಮಿ ಅವರಿಗೂ ಮತ್ತು ನನಗೂ ಯಾವುದೆ ಮನಸ್ತಾಪ, ಭಿನ್ನಾಭಿಪ್ರಾಯವಿಲ್ಲ, ಅವರು ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಪಕ್ಷದ ಕೆಲಸ ಮಾಡುತ್ತಿದ್ದಾರೆ, ನಾನು ಶಾಸಕನಾಗಿ ಜನರ ಹಾಗೂ ಪಕ್ಷ ನಿರ್ದೇಶನ ನೀಡುವ ಕೆಲಸ ಮಾಡುತ್ತಿದ್ದೇನೆ.

High Command decides who gets the Ticket Says MLA N Mahesh gvd

ಕೊಳ್ಳೇಗಾಲ (ಜ.20): ಮಾಜಿ ಶಾಸಕ ಜಿ. ಎನ್‌ ನಂಜುಂಡಸ್ವಾಮಿ ಅವರಿಗೂ ಮತ್ತು ನನಗೂ ಯಾವುದೆ ಮನಸ್ತಾಪ, ಭಿನ್ನಾಭಿಪ್ರಾಯವಿಲ್ಲ, ಅವರು ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಪಕ್ಷದ ಕೆಲಸ ಮಾಡುತ್ತಿದ್ದಾರೆ, ನಾನು ಶಾಸಕನಾಗಿ ಜನರ ಹಾಗೂ ಪಕ್ಷ ನಿರ್ದೇಶನ ನೀಡುವ ಕೆಲಸ ಮಾಡುತ್ತಿದ್ದೇನೆ, ವಿಧಾನಸಭೆ ಟಿಕೆಟ್‌ ಯಾರಿಗೆ ಎಂಬುದನ್ನ ಹೈಕಮಾಂಡ್‌ ನಿರ್ಧರಿಸುತ್ತೆ , ಹೈಕಮಾಂಡ್‌ ನಿರ್ಧಾರವನ್ನು ನಾನು ಸ್ವಾಗತಿಸುವೆ, ಒಪ್ಪಿಕೊಂಡು ಕೆಲಸ ಮಾಡುವೆ ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು. 

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜಿ ಎನ್‌ ನಂಜುಂಡಸ್ವಾಮಿ ಜೊತೆ ಮನಸ್ತಾಪ ಇದೆ ಎಂಬುದು ಉಹಾಪೋಹ, ಶಾಸಕನಾಗಿ ಏನೇನು ಕೆಲಸ ಮಾಡಬೇಕು ಅದನ್ನ ಮಾಡುತ್ತೇನೆ, ಅಲ್ಲಿ ಅವರು ಕಾಣಿಸಿಕೊಳ್ಳಬೇಕು ಎಂಬ ನಿಯಮವಿಲ್ಲ, ಅವರು ಪಾಲ್ಗೊಂಡರು ಅಚ್ಚರಿ ಇಲ್ಲ.  ಶಾಸಕನಾಗಿ ನನ್ನ ಕೆಲಸವನ್ನ, ಅವರು ಎಸ್ಸಿ ಮೋರ್ಚಾ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆ ಕೆಲಸ ಮಾಡುತ್ತಿದ್ದಾರೆ. 

ಶಿಕ್ಷೆ ಕಡಿತ ಅಧಿಕಾರ ಪೋಕ್ಸೋ ನ್ಯಾಯಾಲಯಕ್ಕಿಲ್ಲ: ಹೈಕೋರ್ಟ್‌ ಆದೇಶ

ಯಾರು ಸಹಾ ಪಕ್ಷ ಬಿಟ್ಟು ಹೋಗಲ್ಲ, ಬಿಜೆಪಿ ಕಟ್ಟಾಬೆಂಬಲಿಗರು, ನಿಷ್ಟಾವಂತರಾರು ಪಕ್ಷ ಬಿಡಲ್ಲ, ಲೋಕಸಭೆ ಚುನಾವಣೆಗೆ ಇನ್ನು ದಿನಗಳಿವೆ, ಆದರೆ, ವಿಧಾನಸಭೆ ಚುನಾವಣೆಗೆ ಹೈಕಮಾಂಡ್‌ ನನಗೆ ಟಿಕೆಟ್‌ ಘೋಷಿಸಿದರೆ ಪಕ್ಷದ ಉಳಿದ ಮುಖಂಡರು ಹಾಗೂ ನಂಜುಂಡಸ್ವಾಮಿ ನನ್ನ ಪರ ಕೆಲಸ ಮಾಡಬೇಕು, ಒಂದು ವೇಳೆ ಅವರಿಗೆ ಘೋಷಣೆಯಾದರೆ ನಾನು ಮತ್ತು ಉಳಿದವರು ಅವರ ಪರ ಕೆಲಸ ಮಾಡಬೇಕಾಗುತ್ತದೆ. ಒಟ್ಟಾರೆ ಹೈಕಮಾಂಡ್‌ ತೀರ್ಮಾನವೇ ಅಂತಿಮ, ಆ ತೀರ್ಮಾನವನ್ನು ನಾನು ಗೌರವಿಸುವೆ ಎಂದರು.

ಫೆಬ್ರವರಿಯಲ್ಲಿ ಬಸ್‌ ನಿಲ್ದಾಣ ಉದ್ಙಾಟನೆ: ಈಗಾಗಲೇ ಕೊಳ್ಳೇಗಾಲ ಹೈಟೆಕ್‌ ಬಸ್‌ ನಿಲ್ದಾಣವನ್ನು ಫೆಬ್ರವರಿ ಕೊನೆಗೆ ಉದ್ಘಾಟಿಸುವ ಚಿಂತನೆ ನಡೆಸಿದ್ದು ಅಗತ್ಯ ಅನುಧಾನ ಇತ್ಯಾದಿ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಪರಿಶೀಲಿಸಿದ್ದಾರೆ, ಈಗಾಗಲೇ 6ಕೋಟಿ ಹಣ ಬಿಡುಗಡೆಯಾಗಿದೆ, ಇನ್ನುಳಿದ 4ಕೋಟಿ ಈ ತಿಂಗಳಲ್ಲೆ ಬಿಡುಗಡೆ ಆಗುತ್ತೆ ಎಂದರು.

ವಿಜಯ ಸಂಕಲ್ಪ ಅಭಿಯಾನ: ಬೂತ್‌ ಮಟ್ಟದ ಮೊದಲ ಹಂತದ ವಿಜಯ ಅಭಿಯಾನ ಕಾರ್ಯಕ್ರಮ ಈಗಾಗಲೇ ಯಶಸ್ವಿಯಾಗಿರುವ ಹಿನ್ನೆಲೆ 21ರಿಂದ 28ರತನಕ ವಿಜಯ ಸಂಕಲ್ಪ ಅಭಿಯಾನ ಎಂ ವಿಶೇಷ ಕಾರ್ಯಕ್ರವನ್ನು ಪಕ್ಷ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಖುದ್ದು ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರೇ ಸಿಂದರಿ ತಾಲೂಕಿಗೆ ಆಗಮಿಸುತ್ತಿರುವುದು ವಿಶೇಷ. ಕೊಳ್ಳೇಗಾಲದಲ್ಲೂ 21ರಂದು ನಾರಾಯಣಸ್ವಾಮಿ ದೇಗುಲದ ಮುಂಭಾಗದ ಚಾಲನೆ ನೀಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ, ಶಾಸಕರ ಸಾಧನೆಯನ್ನೊಳಗೊಂಡ ಕರಪತ್ರ ವಿತರಿಸುವುದು, ಪಕ್ಷಕ್ಕೆ ಹೆಚ್ಚು ನೂತನ ಸದಸ್ಯರ ಸೇರ್ಪಡೆಗೊಳಿಸುವುದು ಇದರ ಪ್ರಮುಖ ಉದ್ದೇಶ ಎಂದು ಶಾಸಕರು ತಿಳಿಸಿದರು.

ಅಭಿಯಾನದಲ್ಲಿ ಬೂತ್‌ ಕಮಿಟಿ ಸದಸ್ಯರು, ವಿವಿಧ ಮೋರ್ಚಾ ಸದಸ್ಯರು 21ರಿಂದ 28ದಿನಗಳ ಕಾಲ ಮನೆ ಮನೆಗೆ ತೆರಳಿ ಕೇಂದ್ರ, ರಾಜ್ಯದ ಸಾಧನೆ ಹೇಳುವ ಕರಪತ್ರ ನೀಡುವುದು, ಯಾರು ಈ ವೇಳೆ ಒಪ್ಪಿಗೆ ನೀಡುತ್ತಾರೋ ಅವರ ಮನೆ ಮನೆಗೆ ಬಿಜೆಪಿ ಚಿನ್ಹೆಯ ಗುರುತನ್ನು ಬರೆಸುವುದು, ಸ್ಪೀಕರ್‌ ಅಂಟಿಸಲಾಗುವುದು ಎಂದು ಹೇಳಿದರು. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ 982 ಬೂತ್‌ಗಳಿವೆ, ಬೂತ್‌ ವಿಜಯ ಅಭಿಯಾನದಲ್ಲಿ 946 ಬೂತ್‌ ಕಮಿಟಿ ರಚಿಸಲಾಗಿದ್ದು, ಸ್ಥಳದಲ್ಲಿ ಜನರನ್ನು ಸೇರಿಸಿ ಬೂತ್‌ ಕಮಿಟಿ ರಚಿಸಿ ಯಾರನ್ನ ನೇಮಿಸಲಾಗಿದೆ. 

ಈ ಪೈಕಿ ಅವರನ್ನೊಳಗೊಂಡಂತೆ ನೂರು ಮಂದಿಯ ವ್ಯಾಟ್ಸಪ್‌ ತಂಡ ರಚಿಸಬೇಕು. ಕೊಳ್ಳೇಗಾಲದಲ್ಲಿ 243ಬೂತ್‌ಗಳಿದ್ದು ನಿನ್ನೆಯವರಿಗೂ ನಗರ, ಮಂಡಲ ಗ್ರಾಮಾಂತರ ಮಂಡಲದಿಂದ 222 ಬೂತ್‌ ಕಮಿಟಿ ಸಂಪೂರ್ಣವಾಗಿದ್ದು ಎಲ್ಲಾ ಕಡೆ ವ್ಯಾಟ್ಯಾಪ್‌ ಗ್ರೂಪ್‌ ರಚಿಸಲಾಗಿದೆ ಎಂದು ವಿವರಣೆ ನೀಡಿದರು. ನಗರ ಮಂಡಲ ಅಧ್ಯಕ್ಷ ರಮೇಶ್‌ ಮುರಾರಿ, ಜಿಲ್ಲಾ ವಕ್ತಾರ ಬಸವರಾಜಪ್ಪ, ನಗರಸಭೆ ಸದಸ್ಯೆ ಕವಿತಾ, ಸೋಮಣ್ಣ, ಮಧುಚಂದ್ರ, ಮಾಜಿ ಸದಸ್ಯ ಗಿರೀಶ್‌, ಎಸ್‌ಟಿ ಮೋರ್ಚಾದ ಶಂಕರ್‌, ವಿಜಯ ಇನ್ನಿತರರು ಇದ್ದರು.

ರಾಜ್ಯದಲ್ಲಿರುವುದು ಬಿ-ರಿಪೋರ್ಟ್‌ ಸರ್ಕಾರ: ಡಿ.ಕೆ.ಶಿವಕುಮಾರ್‌ ವಾಗ್ದಾಳಿ

ನಾರಾಯಣಸ್ವಾಮಿ ದೇಗುಲದಲ್ಲಿ 21ರಂದು 1ಸಾವಿರ ಮಂದಿ ಕಾರ್ಯಕರ್ತರನ್ನು ಒಗ್ಗೂಡಿಸಿ ಚಾಲನೆ ನೀಡಿ, ಪಕ್ಷದ ಸಾಧನೆಯ ಕರಪತ್ರ ಮನೆ ಮನೆಗೂ ಹಂಚಿ ಬಿಜೆಪಿ ಜನಪ ಕೆಲಸ ಕಾರ್ಯಗಳನ್ನು ವಿವರಿಸಲಾಗುವುದು, ಅಭಿಯಾನದಲ್ಲಿ ರಾಜ್ಯಾದ್ಯಂತ 1ಕೋಟಿ ಸದಸ್ಯತ್ವ ಗುರಿ ಇದೆ. ಬಿಜೆಪಿ ಪಾರ್ಟಿ ಸಂಖ್ಯೆ ನೀಡಿದ್ದು, ಆ ಸಂಖ್ಯೆಗೆ ಮಿಸ್‌ ಕಾಲ್ ನೀಡಿದರೆ ಸದಸ್ಯರಾದಂತೆ. 29ರಂದು ಪ್ರಧಾನಿಗಳ ಮನ್‌ ಕಿ ಬಾತ್‌ ಬಹಳ ವಿಶೇಷ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಪ್ರತಿ ತಿಂಗಳು ಕನೆಕ್ಟ್ ಆಗುವ ನೇರ ಪ್ರಧಾನಿ ಎಂದರೆ ಮೋದಿಯವರು. ಮನ್‌ ಕಿ ಬಾತ್‌ನಿಂದಾಗಿ ಅನೇಕ ಸಾಧಕರನ್ನು ಪ್ರಧಾನಿಗಳು ಗುರುತಿಸುವಂತಾಗಿದೆ. ಮನ್‌ ಕಿ ಬಾತ್‌ನ್ನು ಪ್ರತಿಯೊಬ್ಬರು ಆಲಿಸುವಂತಾಗಬೇಕು.
-ಎನ್‌ ಮಹೇಶ್‌. ಶಾಸಕರು. ಕೊಳ್ಳೇಗಾಲ ಮೀಸಲು ಕ್ಷೇತ್ರ

Latest Videos
Follow Us:
Download App:
  • android
  • ios