ತಿಪಟೂರು(ಆ.08): ತಾಲೂಕಿನ ಹೊನ್ನವಳ್ಳಿ ಭಾಗದ ಪ್ರಮುಖ ಕೆರೆಯಾದ ಹಾಲ್ಕುರಿಕೆ ಕೆರೆ ಸುತ್ತಮುತ್ತಲ ಹತ್ತಾರು ಹಳ್ಳಿಗಳಿಗೆ ಜೀವನಾಡಿಯಾಗಿದ್ದು, ಮುಂದಿನ ಒಂದು ವರ್ಷದೊಳಗೆ ಹಾಲ್ಕುರಿಕೆ ಕೆರೆಗೆ ಹೇಮಾವತಿ ನೀರನ್ನು ಹರಿಸಲಾಗುವುದು ಎಂದು ಶಾಸಕ ಬಿ.ಸಿ. ನಾಗೇಶ್‌ ತಿಳಿಸಿದರು.

ತಾಲೂಕಿನ ಹಾಲ್ಕುರಿಕೆಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ನಾನು ಈ ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ ಚಿ.ನಾಹಳ್ಳಿ ಕುಡಿವ ನೀರಿನ ಯೋಜನೆ ವ್ಯಾಪ್ತಿಯಲ್ಲಿ ಹಾಲ್ಕುರಿಕೆ ಮೂಲಕ ಹೇಮೆ ನಾಲೆಯಿಂದ ಕೆರೆ ತುಂಬಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಈ ಯೋಜನೆ ತಾಂತ್ರಿಕ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದು, ಗುತ್ತಿಗೆದಾರರು ನ್ಯಾಯಾಲಯದಲ್ಲಿ ಪ್ರಕರಣ ಹೂಡಿದ್ದರಿಂದ ಯೋಜನೆ ಮುಂದುವರೆಸಲು ಸಾಧ್ಯವಾಗಿರಲಿಲ್ಲ ಎಂದರು.

ಸುವರ್ಣ ನ್ಯೂಸ್‌ ಪ್ರವಾಹ ಪರಿಹಾರ ಅಭಿಯಾನಕ್ಕೆ ದಾರಿ

ಪರ್ಯಾಯ ಭೂಮಿ ಗುರುತು:

ಯೋಜನೆಗೆ ಉಪಯೋಗಿಸಿಕೊಳ್ಳುವ ಭೂಮಿಗೆ ಪರ್ಯಾಯವಾಗಿ ತಾಲೂಕಿನ ರಜತಾದ್ರಿಪುರದ ಬಳಿ ಅರಣ್ಯ ಇಲಾಖೆ ಕಂದಾಯ ಭೂಮಿ ನೀಡಲು ಸ್ಥಳ ಗುರ್ತಿಸಲಾಗಿದೆ. ಭೂಮಿ ವರ್ಗಾವಣೆಯಾದ ನಂತರ ಭೂಸ್ವಾಧೀನಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನೇರ ಖರೀದಿ ಪದ್ಧತಿ ಮೂಲಕ ಭೂಮಿ ವಶಪಡಿಸಿಕೊಳ್ಳಲಾಗುವುದು. ನಂತರ ಯೋಜನೆಯ ಮುಂದುವರಿದ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಂದಿನ ಒಂದು ವರ್ಷದೊಳಗೆ ಹಾಲ್ಕುರಿಕೆ ಕೆರೆ ನೀರು ಹರಿಸಲಾಗುವುದು ಎಂದರು.

ಹಾಸನ: ತುಂಬಿ ಹರಿದ ಹೇಮೆ, ಕೃಷಿಕರಲ್ಲಿ ಉತ್ಸಾಹ

ತಾಪಂ ಅಧ್ಯಕ್ಷ ಜಿ.ಎಸ್‌. ಶಿವಸ್ವಾಮಿ, ಜಿಪಂ ಸದಸ್ಯೆ ಮಮತಾ ಉಮೇಶ್‌, ತಾಪಂ ಸದಸ್ಯೆ ಜಯಂತಿ ಕುಮಾರ್‌, ಗ್ರಾಪಂ ಅಧ್ಯಕ್ಷೆ ಲೋಲಾಕ್ಷಮ್ಮ, ಸದಸ್ಯ ಎಚ್‌.ವಿ. ನಾಗರಾಜು, ಬೀರಪ್ಪ, ಜಿಪಂ ಮಾಜಿ ಸದ್ಯ ಗಂಗಾಧರಪ್ಪ, ಪಿಡಿಒ ಶಿವಲಿಂಗಯ್ಯ, ಮುಖಂಡ ನಾಗಭೂಷಣ್‌, ಉಮಾಮಹೇಶ್‌, ಶಿವಣ್ಣ ಮತ್ತಿತರರಿದ್ದರು.