ಬರದ ಊರು ವಿಜಯಪುರದಲ್ಲಿ ಭಾರೀ ಮಳೆ: ಕೊಚ್ಚಿ ಹೋಯ್ತು ಸೇತುವೆ, ನೆಲಕಚ್ಚಿದ ಲಕ್ಷಾಂತರ ಮೌಲ್ಯದ ದ್ರಾಕ್ಷಿ!

ಕಳೆದ ರಾತ್ರಿ ಸೇರಿದಂತೆ ವಿಜಯಪುರದಲ್ಲಿ ಭಾರೀ ಮಳೆಯಾಗ್ತಿದೆ. ಏಕಾಏಕಿ ಸುರಿದ ಮಳೆಗೆ ಒಂದೆಡೆ ರೈತರು ಖುಷ್ ಆಗಿದ್ದರೆ, ಕೆಲವಡೆ ಬೆಳೆ ಹಾನಿ, ಸೇತುವೆ ಹಾನಿಯಿಂದಾಗಿ ಜನರು ಕಂಗಾಲಾಗಿದ್ದಾರೆ‌. 

Heavy rains in drought stricken Vijayapura A grape crop worth millions was destroyed gvd

ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಆ.22): ಕಳೆದ ರಾತ್ರಿ ಸೇರಿದಂತೆ ವಿಜಯಪುರದಲ್ಲಿ ಭಾರೀ ಮಳೆಯಾಗ್ತಿದೆ. ಏಕಾಏಕಿ ಸುರಿದ ಮಳೆಗೆ ಒಂದೆಡೆ ರೈತರು ಖುಷ್ ಆಗಿದ್ದರೆ, ಕೆಲವಡೆ ಬೆಳೆ ಹಾನಿ, ಸೇತುವೆ ಹಾನಿಯಿಂದಾಗಿ ಜನರು ಕಂಗಾಲಾಗಿದ್ದಾರೆ‌. 

ಮಳೆ‌ ಹೊಡೆತಕ್ಕೆ ಕೊಚ್ಚಿ ಹೋದ ಸೇತುವೆ: ಜಿಲ್ಲೆಯ ಹಲವೆಡೆ ಭಾರಿ ಮಳೆಯಾದ ಪರಿಣಾಮ ಮುದ್ದೇಬಿಹಾಳ ತಾಲೂಕಿನ ಅಡವಿ ಹುಲಗಬಾಳ ಗ್ರಾಮದಲ್ಲಿ ಕೆಳ ಹಂತದ ಸೇತುವೆಯೆ ಮಳೆ ನೀರಲ್ಲಿ ಕೊಚ್ಚಿ ಹೋಗಿದೆ. ಅಡವಿ ಹುಲಗಬಾಳದಿಂದ ತಾಂಡಾಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದು ಸ್ಥಳೀಯರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಸೇತುವೆ ಕೊಚ್ಚಿ ಹೋದ ಪರಿಣಾಮ ತಾಂಡಾ ಹಾಗೂ ಅಡವಿ ಹುಲಗಬಾಳ ಗ್ರಾಮದ ನಡುವೆ ಸಂಪರ್ಕ ಕಟ್‌ ಆಗಿದೆ. ಗ್ರಾಮ ಹಾಗೂ ತಾಂಡಾ ನಡುವಿನ ಸಂಪರ್ಕ ಕಟ್ ಆದ ಪರಿಣಾಮ ಜನರು ಕೆಲಸ ಕಾರ್ಯಗಳಿಗೆ ಅಡ್ಡಾಡಲು ತೊಂದರೆಯುಂಟಾಗಿದೆ. ಇನ್ನೂ ಕೂಡಲೇ ಗುಣಮಟ್ಟದ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.‌

ಮಳೆಗೆ ನೆಲ ಕಚ್ಚಿದ ದ್ರಾಕ್ಷಿ: ಏಕಾಏಕಿ ಸುರಿದ ಭಾರೀ ಮಳೆಗೆ ದ್ರಾಕ್ಷಿ ಬೆಳೆ ನೆಲಕಚ್ಚಿದೆ. ಏಕಾಏಕಿ ಮಳೆ ಸುರಿದಿದ್ದು ಮಳೆಯ ಹೊಡೆತಕ್ಕೆ ಲೋಗಾಂವಿ ಗ್ರಾಮದಲ್ಲಿ ದ್ರಾಕ್ಷಿ ನೆಲಕಚ್ಚಿದೆ. ರಾಜು ಹುನ್ನೂರ್‌ ಎಂಬುವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದ್ರಾಕ್ಷಿ ಬೆಳೆದಿದ್ದರು. ಆದ್ರೆ ದ್ರಾಕ್ಷಿಗೆ ಹಾಕಿದ್ದ ಕಲ್ಲಿನ ಕಂಬಗಳ ಸಮೇತವಾಗಿ ಬೆಳೆ ನೆಲ ಕಚ್ಚಿದ್ದು ಈಗ ರಾಜು ಕಂಗಾಲಾಗಿದ್ದಾರೆ. ಸಂಪೂರ್ಣ ದ್ರಾಕ್ಷಿ ಹಾನಿಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು ಪರಿಹಾರ ನೀಡಿದಲ್ಲಿ ಅನುಕೂಲವಾಗಲಿದೆ ಎಂದಿದ್ದಾರೆ.

ದಸರಾ ದೀಪಾಲಂಕಾರಕ್ಕೆ ಹೊಸ ಮೆರುಗು ನೀಡಲು ಚಿಂತನೆ: ಶಾಸಕ ರಮೇಶ್ ಬಂಡಿಸಿದ್ದೇಗೌಡ

ಉಕ್ಕಿ ಹರಿಯುವ ಹಳ್ಳದಲ್ಲೆ ಜನರ ಓಡಾಟ: ಜಿಲ್ಲೆಯ ಕೋಲ್ಹಾರ ತಾಲೂಕಿನಾದ್ಯಂತ ಭಾರೀ ಮಳೆ ಸುರಿದ ಪರಿಣಾಮ ಯಾವ ಮಟ್ಟಿಗೆ ಇದೆ ಎಂದರೆ ತಾಲೂಕಿನ ಬಹುತೇಕ ಹಳ್ಳಗಳು ಉಕ್ಕಿ ಹರಿದಿವೆ. ರೋಣಿಹಾಳ, ಗರಸಂಗಿ, ಆಸಂಗಿ ಸೇರಿದಂತೆ ಅನೇಕ ಹಳ್ಳಗಳು ಉಕ್ಕಿ ಹರಿದಿವೆ. ಅದ್ರಲ್ಲೂ ರೋಣಿಹಾಳ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ರಸ್ತೆ ಸಂಪೂರ್ಣ ಬಂದ್ ಆಗಿದೆ. ಆದ್ರೆ ಅಪಾಯದ ನಡುವೆಯೂ ಗ್ರಾಮಸ್ಥರು ಹಳ್ಳದಲ್ಲಿ ನಡೆದು ಬಂದು ಹಳ್ಳ ದಾಟುತ್ತಿದ್ದ ದೃಶ್ಯಗಳು ಕಂಡು ಬಂದವು. ಒಟ್ಟಿನಲ್ಲಿ ಜಿಲ್ಲೆಯಾದ್ಯಂತ ಸುರಿದ ಮಳೆ ರೈತರಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ್ರೆ, ಇನ್ನೊಂದೆಡೆ ಅವಾಂತರಗಳನ್ನ ಸೃಷ್ಟಿಸಿದೆ.

Latest Videos
Follow Us:
Download App:
  • android
  • ios