ಕಲ್ಲಡ್ಕ: ಮನೆ ಆವರಣ ಕುಸಿದು ಶ್ರೀರಾಮ ಶಾಲೆ ಆಟದ ಮೈದಾನ ಕಂಪೌಂಡ್‌ ಹಾನಿ

  ತಾಲೂಕಿನಲ್ಲಿ ಗುರುವಾರವೂ ಮಳೆ ಆರ್ಭಟ ಮುಂದುವರಿದಿದ್ದು, ಮಳೆಯ ಅಬ್ಬರಕ್ಕೆ ಅಪಾರ ಹಾನಿ ಸಂಭವಿಸಿದೆ.

Heavy rains bantwal House  collapsed and Sriram school playground compound was damaged rav

ಬಂಟ್ವಾಳ (ಜು7) :  ತಾಲೂಕಿನಲ್ಲಿ ಗುರುವಾರವೂ ಮಳೆ ಆರ್ಭಟ ಮುಂದುವರಿದಿದ್ದು, ಮಳೆಯ ಅಬ್ಬರಕ್ಕೆ ಅಪಾರ ಹಾನಿ ಸಂಭವಿಸಿದೆ.

ಬಾಳ್ತಿಲ ಗ್ರಾಮದ ಕಲ್ಲಡ್ಕ ಎಂಬಲ್ಲಿ ವಸಂತ ಆಚಾರ್ಯ ಮನೆಯ ಕಂಪೌಂಡ್‌ ಶ್ರೀರಾಮ ಶಾಲೆಯ ಆಟದ ಮೈದಾನದ ಆವರಣಕ್ಕೆ ಬಿದ್ದು ಹಾನಿಯಾಗಿದೆ. ನಾವೂರು ಗ್ರಾಮದ ಪೂಪಾಡಿಕಟ್ಟೆಎಂಬಲ್ಲಿ ಪಿಡಬ್ಲ್ಯುಡಿ ರಸ್ತೆ ಬದಿ ಧರೆ ಕುಸಿದಿದ್ದು ಲೋಕೋಪಯೋಗಿ ಇಲಾಖೆಯೊಂದಿಗೆ ಸ್ಥಳ ತನಿಖೆ ನಡೆಸಿ ಅಪಾಯದ ಸ್ಥಿತಿಯಲ್ಲಿರುವ ಮನೆ ಗೆ ಸ್ಥಳಾಂತರ ದ ಬಗ್ಗೆ ತಿಳಿವಳಿಕೆ ಪತ್ರ ನೀಡಲಾಯಿತು ಎಂದು ಕಂದಾಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Karwar floods:; ಚರಂಡಿ ಅವ್ಯವಸ್ಥೆ, ನಗರದಲ್ಲಿ ಕೃತಕ ನೆರೆ!

ಭಾರೀ ಮಳೆಯಿಂದಾಗಿ ವಿಟ್ಲ- ಮಂಗಳೂರು ರಸ್ತೆಯ ವೀರಕಂಭ ಸಮೀಪ ಗುಡ್ಡವೊಂದು ರಸ್ತೆಗೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ವೀರಕಂಭ ಶಾಲೆ ಸಮೀಪ ಇರುವ ಗುಡ್ಡ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಮಣ್ಣೆಲ್ಲಾ ರಸ್ತೆಗೆ ಬಿದ್ದಿತ್ತು. ತಹಸೀಲ್ದಾರ್‌ ಸಹಿತ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಬಡಗಕಜೆಕಾರು ಗ್ರಾಮದ ಕೋಮಿನಡ್ಕ ಎಂಬಲ್ಲಿರುವ ಇಸುಬು ಬ್ಯಾರಿ ಅವರ ಮನೆಗೆ ಆವರಣದ ಗೋಡೆ ಕುಸಿದು ಬಿದ್ದಿರುವುದರಿಂದ ಮನೆಗೆ ಹಾನಿಯಾಗಿದೆ. ಕೊಳ್ನಾಡು ಗ್ರಾಮದ ತಾಮರಾಜೆ ಎಂಬಲ್ಲಿ ಉಮಾವತಿ ಎಂಬವರ ಮನೆಗೋಡೆಗೆ ಕಂಪೌಂಡ್‌ ಕುಸಿದು ತೀವ್ರ ಹಾನಿಯಾಗಿರುತ್ತದೆ.

ಪುದು ಗ್ರಾಮದ ಕಬೆಲ ಎಂಬಲ್ಲಿ ಶರ್ಮಿಳಾ ಎಂಬವರ ಮನೆ ತಡೆಗೋಡೆ ಆವರಣ ಕುಸಿದುಬಿದ್ದಿದ್ದು, ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕರಿಯಂಗಳ ಗ್ರಾಮದ ಸಲಾಂ ಎಂಬವರ ಮನೆಯ ಹಿಂಬದಿಯ ಮಣ್ಣು ಕುಸಿದು ಮನೆಗೆ ಬಾಗದ ಹಾನಿಯಾಗಿದೆ.

ಸಂಗಬೆಟ್ಟು ಗ್ರಾಮದ ಕುಮರೊಟ್ಟು ಎಂಬಲ್ಲಿ ದೇಜಪ್ಪ ಮೂಲ್ಯ ಅವರ ಮನೆಗೆ ತೀವ್ರ ಹಾನಿಯಾಗಿದೆ. ಮನೆಯವರನ್ನು ಹತ್ತಿರದ ಮನೆಗೆ ಸ್ಥಳಾಂತರಿಸಲಾಗಿದೆ.ಕೊಳ್ಳಾಡು ಗ್ರಾಮದ ಪಂಜರಕೋಡಿ ಎಂಬಲ್ಲಿ ಜೈನಾಭ ಅವರ ಮನೆ ಪಕ್ಕದಲ್ಲಿನ ತಡೆಗೋಡೆ ಕುಸಿದು ಪಕ್ಕದ ಮನೆಯವರಾದ ಅಲಿಮ ಅವರ ಮನೆ ಗೋಡೆ ಮೇಲೆ ಬಿದ್ದು ಎರಡೂ ಮನೆಗಳು ತೀವ್ರ ಹಾನಿಯಾಗಿದೆ. ಎರಡೂ ಮನೆಯವರು ಪಕ್ಕದ ಸಂಬಂಧಿಕರ ಮನೆಗೆ ಸ್ಥಳಾಂತರವಾಗಿದ್ದಾರೆ.

Uttara kannada rains: ಭಾರೀ ಮಳೆಗೆ ತತ್ತರಿಸಿದ ಭಟ್ಕಳ, ಎಲ್ಲಿ ನೋಡಿದರೂ ನೀರೇ ನೀರು!

ಮನೆಗಳ ಸಂಪರ್ಕ ಕಡಿತ:

ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಬೋಳಂಗಡಿಯಲ್ಲಿ ನೆಲಕಚ್ಚುವ ಆತಂಕದಲ್ಲಿ ಮನೆಯವರಿದ್ದಾರೆ. ಬೋಳಂಗಡಿಯ ನಿವಾಸಿ ಇಬ್ರಾಹೀಂ ಎಂಬವರಿಗೆ ಸೇರಿದ ಮನೆಯ ಮುಂಭಾಗದಲ್ಲಿ ಕುಸಿತವಾಗಿದೆ. ಇದರಿಂದಾಗಿ ಸುಮಾರು ನಾಲ್ವರು ಮನೆಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ.

Latest Videos
Follow Us:
Download App:
  • android
  • ios