Vijayapura Floods: ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
ನಗರದಲ್ಲಿ ಶನಿವಾರ ಸಂಜೆ ಧಾರಾಕಾರ ಮಳೆ ಬಿದ್ದಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆ, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ವಿಜಯಪುರ ನಗರದ ರಸ್ತೆಗಳ ತುಂಬೆಲ್ಲಾ ನೀರು ಭಾರಿ ಪ್ರಮಾಣದಲ್ಲಿ ನೀರು ಹರಿದು ವಾಹನ ಸಂಚಾರಕ್ಕೂ ತೀವ್ರ ವ್ಯತ್ಯಯ ಉಂಟಾಯಿತು.
ವಿಜಯಪುರ (ಸೆ.11) : ನಗರದಲ್ಲಿ ಶನಿವಾರ ಸಂಜೆ ಧಾರಾಕಾರ ಮಳೆ ಬಿದ್ದಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆ, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಬೆಳಗ್ಗೆಯಿಂದಲೇ ನಗರದಲ್ಲಿ ನೆತ್ತಿ ಸುಡುವ ಬಿಸಿಲು ಇತ್ತು. ಸಂಜೆ 5.30 ಗಂಟೆ ಸುಮಾರಿಗೆ ಆರಂಭವಾದ ಮಳೆಯು ಸುಮಾರು 3 ಗಂಟೆವರೆಗೆ ಧಾರಾಕಾರ ಮಳೆ ಸುರಿಯಿತು. ನಗರದ ತಗ್ಗು ಪ್ರದೇಶಗಳಲ್ಲಿನ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಧವಸ-ಧಾನ್ಯ, ಕಿರಾಣಿ ವಸ್ತುಗಳು ಹಾಳಾಗಿವೆ. ವಿಜಯಪುರ ನಗರದ ರಸ್ತೆಗಳ ತುಂಬೆಲ್ಲಾ ನೀರು ಭಾರಿ ಪ್ರಮಾಣದಲ್ಲಿ ನೀರು ಹರಿದು ವಾಹನ ಸಂಚಾರಕ್ಕೂ ತೀವ್ರ ವ್ಯತ್ಯಯ ಉಂಟಾಯಿತು.
Vijayapura ವರುಣನ ಆರ್ಭಟಕ್ಕೆ ಬೈಕ್ ಸವಾರರ ಮೇಲೆ ಬಿದ್ದ ಮರ
ಮೀನಾಕ್ಷಿ ಚೌಕ್, ಸರ್ಕಾರಿ ಹೈಸ್ಕೂಲ್ ರಸ್ತೆ, ಕಿತ್ತೂರ ರಾಣಿ ಚನ್ನಮ್ಮ, ಗಚ್ಚಿನಕಟ್ಟಿಕಾಲೊನಿ, ಕಾವಿ ಪ್ಲಾಟ್, ಗಾಂಧಿನಗರ ಸೇರಿದಂತೆ ತಗ್ಗುಪ್ರದೇಶದ ವಿವಿಧ ಬಡಾವಣೆಗಳಲ್ಲಿ ಮೊಳಕಾಲವರೆಗೆ ನೀರು ಹರಿದಿದೆ. ಮನೆಗಳಿಗೆ ನೀರು ನುಗ್ಗಿ ಪಾತ್ರೆಗಳು, ಧವಸ-ಧಾನ್ಯಗಳು ಹಾನಿಗೀಡಾಗಿವೆ. ವಿಜಯಪುರ ನಗರದಲ್ಲಿ ತಗ್ಗುಪ್ರದೇಶದಲ್ಲಿ ಇರುವ ಅಪ್ಸರಾ ಚಿತ್ರಮಂದಿರಕ್ಕೂ ನೀರು ನುಗ್ಗಿದೆ. ಚಿತ್ರಮಂದಿರದ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರು, 20ಕ್ಕೂ ಹೆಚ್ಚು ಬೈಕ್‌ಗಳು ನೀರಲ್ಲಿ ಮುಳುಗಿವೆ. ಧಾರಾಕಾರ ಮಳೆಯಿಂದಾಗಿ ನಗರದಲ್ಲಿ ಹಲವಾರು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜನರು ಕತ್ತಲೆಯಲ್ಲಿಯೇ ಗೋಳಾಡುವಂತಾಯಿತು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಉಪವಿಭಾಗಾಧಿಕಾರಿ, ತಹಸೀಲ್ದಾರ, ಕಂದಾಯ ಅಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ವಿಜಯಪುರ ನಗರ ಅಲ್ಲದೆ ಜಿಲ್ಲೆಯ ಹಲವೆಡೆಯೂ ಸಂಜೆ ಹೊತ್ತಿನಲ್ಲಿ ಧಾರಾಕಾರ ಮಳೆ ಬಿದ್ದ ವರದಿಯಾಗಿದೆ.
ಬೆಳೆಹಾನಿ ಕೂಡಲೇ ನೆರವು ನೀಡಲು ಆಗ್ರಹ
ಬಬಲೇಶ್ವರ ಕ್ಷೇತ್ರದಲ್ಲಿ ಸುಮಾರು 500 ಎಕರೆಗಿಂತಲೂ ಹೆಚ್ಚಿಗೆ ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿದೆ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಸಮೀಕ್ಷೆ ನಡೆಸಿ ಕಷÜ್ಟದಲ್ಲಿರುವ ರೈತರ ನೆರವಿಗೆ ಬರಬೇಕು ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಹೊನವಾಡ ಒತಾಯಿಸಿದರು. ಬಬಲೇಶ್ವರ ಮತಕ್ಷೇತ್ರದಲ್ಲಿ ಬೆಳೆ ಹಾನಿಯ ಪರಿವೀಕ್ಷಣೆ ನಡೆಸಿ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು ಅತಿವೃಷ್ಟಿಯಿಂದ ರೈತರ ಬೆಳೆಗಳು ಹಾಳಾಗುತ್ತಿವೆ. ಬಬಲೇಶ್ವರ ಕ್ಷೇತ್ರದ ಕಾಖಂಡಕಿ, ದಾನ್ಯಳ, ಕೋಟ್ಯಾಳ, ದಾಶ್ಯಾಳ, ಹರನಾಳ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳ, ತೊಗರಿ, ಬಾಳೆ ಬೆಳೆಗಳು ಸಂಪೂರ್ಣ ನೀರಿನಲ್ಲಿ ನಿಂತಿದ್ದರಿಂದ ರೈತರಿಗೆ ಸಾಕಷÜು್ಟಹಾನಿಯಾಗಿದೆ ಸರ್ಕಾರ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ಸರ್ಕಾರ ಜನರ ಪರವಾಗಿದೆ ಎಂದು ಹೇಳಿದರೆ ಸಾಲದು. ಕಷÜ್ಟದಲ್ಲಿರುವ ರೈತರ ನೆರವಿಗೆ ಬರಬೇಕು. ರೈತರು ಸಾಕಷ್ಟುಖರ್ಚು ಮಾಡಿ ಗೊಬ್ಬರ, ಬೀಜ ಹಾಕಿ ಕಷÜ್ಟಪಟ್ಟು ಬೆಳೆದ ಬೆಳೆಗಳು ನೀರಲ್ಲಿ ನಿಂತು ಹಾಳಾಗುತ್ತಿವೆ. ರೈತರು ಪರಿಹಾರದ ನಿರೀಕ್ಷೆಯಲ್ಲಿ ಇದ್ದಾರೆ ಅಧಿಕಾರಿಗಳು ಮಾತ್ರ ಇತ್ತ ಕಣ್ಣು ಹಾಯಿಸಿಲ್ಲ. ಈಗಲಾದರೂ ಅಧಿಕಾರಿಗಳು ಜನಪ್ರತಿನಿದಿಗಳು ಬೆಳೆಹಾನಿ ಸಮೀಕ್ಷೆ ನಡೆಸಿ ರೈತರಿಗೆ ಕನಿಷÜ್ಠ ಎಕರೆಗೆ .25,000 ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಭೀಮಾ ನದಿ ಪ್ರವಾಹದಲ್ಲಿ ಈಜಿ ಆಂಜನೇಯನಿಗೆ ಪೂಜೆ ಸಲ್ಲಿಸಿದ ಅರ್ಚಕ
ಈ ಸಂದರ್ಭದಲ್ಲಿ ರೈತ ಮುಖಂಡರಾದ ನಾಗಪ್ಪ ಹಳ್ಳಿ, ಹಣಮಂತ ಶಿವಗೊಂಡ, ಶ್ರೀಕಾಂತ ಹಳ್ಳಿ, ಹಣಮಂತ ಸಿಗೊಂಡ, ಸೋಮು ಇಂಡಿ, ಶ್ರೀಕಾಂತ ಕಡತಗಾರ,ಮಾದಪ್ಪ ಹಳ್ಳಿ,ಪರಸಪ್ಪ ಕಡತಗಾರ, ಮಾಳಪ್ಪ ಮದಗುಣಕಿ , ಮುಜಾವರ, ಗೊಲ್ಲಾಳಪ್ಪ ಜೋಗುರ ಮಾಳಪ್ಪ ಸಿದ್ನಾತ ಮುಂತಾದವರು