Chikkaballpura; ಪ್ರವಾಹದಲ್ಲಿ ಸಿಲುಕಿ ಜಾಲಿ ಮರ ಹಿಡಿದು ಬದುಕುಳಿದ ವ್ಯಕ್ತಿ!
ಗೌರಿಬಿದನೂರಿನ ರಾಮಾಪುರದಲ್ಲಿ ಹರಿಯುತ್ತಿದ್ದ ಕುಮದ್ವತಿ ನದಿ ಬಳಿ ಕೃಷ್ಣಪ್ಪ ಎಂಬಾತವಾಹದಲ್ಲಿ ಸಿಲುಕಿದ್ದಾನೆ. ಬಳಿಕ ಸುಮಾರು 3 ಕಿ.ಮೀ ದೂರ ಸಾಗಿ ಜಾಲಿ ಮರ ಹಿಡಿದು ಪ್ರಾಣ ರಕ್ಷಣೆಗೆ ಅಂಗಲಾಚಿದ್ದಾನೆ. ಬೆಳಗ್ಗೆ ರೈತರು ಹೊಲ ಗದ್ದೆಗಳಿಗೆ ಬಂದವರಲ್ಲಿ ಸತತ 2 ಗಂಟೆ ಕಾರ್ಯಚರಣೆ ನಡೆಸಿ ರಕ್ಷಿಸಿದ್ದಾರೆ.
ಚಿಕ್ಕಬಳ್ಳಾಪುರ (ಅ.15): ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಮಳೆಯ ರುದ್ರನರ್ತನಕ್ಕೆ ಜಿಲ್ಲೆಯ ಜೀವ ನದಿಗಳು ಮತ್ತಷ್ಟು ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೆ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ ತಾಲೂಕುಗಳಲ್ಲಿ ಕೆಲವು ಗ್ರಾಮಗಳಿಗೆ ರಸ್ತೆ ಸಂಪರ್ಕವೇ ಬಂದ್ ಆಗಿ ಜನ ಹೈರಣಾಗಿದ್ದಾರೆ. ಕಳೆದ ರಾತ್ರಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು ಪರಿಣಾಮ ಕೆರೆ, ಕುಂಟೆಗಳು ತುಂಬಿ ಹರಿದಿದ್ದರೆ ಜಿಲ್ಲೆಯ ಗೌರಿಬಿದನೂರಿನಲ್ಲಿ ಉತ್ತರ ಪಿನಾಕಿನಿ ನದಿ ಹರಿವು ಹೆಚ್ಚಳ ಆಗಿದ್ದರೆ ಕುಮದ್ವತಿ ನದಿ ಕೂಡ ಪ್ರವಾಹದ ರೀತಿಯಲ್ಲಿ ಹರಿದಿದೆ. ಗೌರಿಬಿದನೂರಿನ ರಾಮಾಪುರದಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 6 ಗಂಟೆ ಸಮಯದಲ್ಲಿ ಹರಿಯುತ್ತಿದ್ದ ಕುಮದ್ವತಿ ನದಿ ಬಳಿ ಕೃಷ್ಣಪ್ಪ ಎಂಬುವರು ಪ್ರವಾಹದಲ್ಲಿ ಸಿಲುಕಿದ್ದಾನೆ. ಬಳಿಕ ಸುಮಾರು 3 ಕಿ.ಮೀ ದೂರ ಸಾಗಿ ಜಾಲಿ ಮರ ಹಿಡಿದು ಪ್ರಾಣ ರಕ್ಷಣೆಗೆ ಅಂಗಲಾಚಿದ್ದಾನೆ. ಬೆಳಗ್ಗೆ ರೈತರು ಹೊಲ ಗದ್ದೆಗಳಿಗೆ ಬಂದವರಲ್ಲಿ ಸತತ 2 ಗಂಟೆ ಕಾರ್ಯಚರಣೆ ನಡೆಸಿ ಆತನನ್ನು ಟೈರ್, ಹಗ್ಗದ ಸಹಾಯರಿಂದ ರಕ್ಷಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ.
ಬಾಗೇಪಲ್ಲಿ ತಾಲೂಕಿನಲ್ಲಿ ಕೂಡ ನಿನ್ನೆ ರಾತ್ರಿ ದೊಡ್ಡ ಪ್ರಮಾಣ ಮಳೆ ಆಗಿದ್ದು ಗ್ರಾಮೀಣ ಪ್ರದೇಶದಲ್ಲಿ ಕೆರೆ, ಕುಂಟೆ, ಕಾಲುವೆಗಳಲ್ಲಿ ನೀರು ಹರಿದಿದೆ. ಕೆಲವು ಗ್ರಾಮೀಣ ರಸ್ತೆಗಳು ಮಳೆಯ ಅರ್ಭಟಕ್ಕೆ ಕೆಸರು ಗದ್ದೆಗಳಾಗಿ ಮಾರ್ಪಟ್ಟು ಜನ ಹಾಗೂ ವಾಹನ ಸಂಚಾರಕ್ಕೆ ತೀವ್ರ ಆಡಚಣೆ ಉಂಟಾಗಿದೆ. ಬಾಗೇಪಲ್ಲಿಯಲ್ಲಿ ಕೆಲ ಕೆರೆಗಳು ದಶಕಗಳ ಬಳಿಕ ಕೋಡಿ ಹರಿದಿದ್ದು ಆ ಭಾಗದ ರೈತಾಪಿ ಜನರಲ್ಲಿ ತೀವ್ರ ಸಂತಸಕ್ಕೆ ಕಾರಣವಾಗಿದೆ.
Heavy rains Hubballi: ಮಳೆ ಬಂದರೆ ಹೊಳೆಯಾಗುವ ಹು-ಧಾ ರಸ್ತೆ
ಬಂಗಾರಪೇಟೆ ತಾಲೂಕಿನಲ್ಲಿ ಉತ್ತಮ ಮಳೆ: ಬಂಗಾರಪೇಟೆ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಹಲವು ಕೆರೆಗಳು ಭರ್ತಿಯಾಗಿ ಕೋಡಿ ಹರಿದ ನೀರು ಮೇಲ್ಸೇತುವೆ ಮೇಲೆ ಹರಿದು ಹಲವು ಬೆಳೆಗಳು ನಾಶವಾಗಿದೆ. ತಾಲ್ಲೂಕಿನಲ್ಲಿ ಇತ್ತೀಚೆಗೆ ಮಳೆ ಇಲ್ಲದೆ ರಾಗಿ, ನೆಲಗಡಲೆ ಸೇರಿ ಹಲವು ಬೆಳೆಗಳು ಒಣಗುತ್ತಿದ್ದವು. ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದ ಬೆಳೆಗಳಿಗೆ ಜೀವ ಬಂದಂತಾದರೂ ಹಲವು ಬೆಳೆಗಳು ಮುಳುಗಡೆಯಾಗಿವೆ. ಗುರುವಾರ ರಾತ್ರಿ ಸುರಿದ ಮಳೆಗೆ ಮಾಕಂರ್‍ಡೇಯ ಡ್ಯಾಂ ಮತ್ತು ಯರಗೋಳ್ ಡ್ಯಾಂ ಪುನಃ ಭರ್ತಿಯಾಗಿ ಕೋಡಿ ಹರಿಯುತ್ತಿದ್ದು, ಕೋಡಿಯನ್ನು ನೋಡಲು ಪ್ರವಾಸಿಗರು ಬರಲಾರಂಬಿಸಿದ್ದಾರೆ.
Chikkaballapura; ಗುಡಿಬಂಡೆ ಜನತೆಗೆ ಮತ್ತೆ ಜಲದಿಗ್ಬಂಧನದ ಭೀತಿ
ಬೂದಿಕೊಟೆ ಹಾಗೂ ಕಾಮಸಮುದ್ರ ಹೋಬಳಿ ವ್ಯಾಪ್ತಿಯಲ್ಲಿ ಅಧಿಕವಾಗಿ ಸುರಿಮ ಮಳೆಯಿಂದಾಗಿ ಟೊಮ್ಯಾಟೊ, ಎಲೆಕೋಸು, ನೆಲಗಡಲೆ ಸೇರಿ ಇತರೆ ಬೆಳೆಗಳು ಮುಳುಗಡೆಯಾಗಿದ್ದು, ರೈತರಿಗೆ ಸಂಕಷ್ಟ ತಂದೊಡ್ಡಿದೆ. ಬೂದಿಕೋಟೆಯ ರಾಮಚಂದ್ರರಾಯನ ಕೆರೆ ಸೇರಿ ಹಲವು ಕೆರೆಗಳು ತುಂಬಿ ಯಥೇಚ್ಚವಾಗಿ ನೀರು ಕೋಡಿ ಹರಿಯುತ್ತಿರುವ ಕಾರಣ ನೀರು ಮೇಲ್ಸೇತುವೆ ಮೇಲೆ ಹರಿಯುತ್ತಿದ್ದು, ಕೆಲವು ಗಂಟೆಗಳ ಕಾಲ ಜನ ಹಾಗೂ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೆರೆ ಕುಂಟೆಗಳು ಕೋಡಿ ಹರಿಯುತ್ತಿರುವ ನೀರಿನಲ್ಲಿ ಮೀನುಗಾರರು ಬಲೆ ಬೀಸಿ ಮೀನು ಹಿಡಿಯಲು ಮುಂದಾದರು.‘