ಕಾದಿದೆಯಾ ಮಂಗಳೂರಿಗೆ ಗಂಡಾಂತರ : ದೇಶದಲ್ಲೇ ಅತ್ಯಧಿಕ ಮಳೆ- ರೆಡ್ ಅಲರ್ಟ್
ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮಂಗಳೂರಿನಲ್ಲಿ ದೇಶದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದೆ.
ಮಂಗಳೂರು (ಸೆ.20): ದೇಶದಲ್ಲೇ ಕರ್ನಾಟದಕ್ಕಿ ದಾಖಲೆ ಮಳೆ ಮಂಗಳೂರಿನಲ್ಲಿ ಸುರಿದಿದೆ. ಕಳೆದ 24 ಗಂಟೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ದೇಶದಲ್ಲೇ ಅತ್ಯಧಿಕ ಮಳೆಯಾದ ಪ್ರದೇಶ ಎಂದು ಹವಾಮಾನ ಇಲಾಖೆ ಹೇಳಿದೆ.
"
ಭಾರೀ ಮಳೆ : ಕೃಷ್ಣ ಮಠಕ್ಕೆ ನುಗ್ಗಿದ ನೀರು, ಪ್ರವಾಹ ಸದೃಶ ವಾತಾವರಣ
ಮಂಗಳೂರಿನ ಬಜ್ಪೆ ಹಾಗೂ ಪಣಂಬೂರಿನಲ್ಲಿ ಅತ್ಯಧಿಕ ಮಳೆಯಾಗಿದೆ. ಬಜ್ಪೆಯಲ್ಲಿ ಒಟ್ಟು 217 ಮಿಲಿ ಮೀಟರ್ ಮಳೆ ಸುರಿದಿದೆ. ಪಣಂಬೂರಿನಲ್ಲಿ 181 ಮಿಲಿ ಮೀಟರ್ ಮಳೆಯಾಗಿದೆ. ಇಂದು ಅತ್ಯಧಿಕ ಮಳೆ ಸುರಿದ ಪ್ರದೇಶ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ.
ರೆಡ್ ಅಲರ್ಟ್
ಭಾರತೀಯ ಹವಾಮಾನ ಇಲಾಖೆ ಹವಾಮಾನ ಮುನ್ಸೂಚನೆ ವಿವರ ಬಿಡುಗಡೆ ಮಾಡಿದ್ದು, ರಾಜ್ಯ ಏಳು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಗೋಷಣೆ ಮಾಡಿದೆ. ಇನ್ನು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಕ್ಕೆ ನಾಳೆ ನಾಡಿದ್ದು ಕೂಡ ರೆಡ್ ಅಲರ್ಟ್ ಘೋಷಣೆ ಮಾಡಿದೆ.
"
ರೆಡ್ ಅಲರ್ಟ್ : ಅಂದರೆ 204 ಮಿಮೀ ಗಿಂತ ಹೆಚ್ಚು ಮಳೆ ಅಗುವ ಮುನ್ಸೂಚನೆ. ಕೊಪ್ಪಳ, ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ
"