ಬಂಟ್ವಾಳ (ಸೆ.20): ಗುಡ್ಡ ಕುಸಿದ ಪರಿಣಾಮ ಮನೆಯೊಂದು ಸಂಪೂರ್ಣ ಧಾರಾಶಾಯಿಯಾಗಿದ್ದು ಮನೆಯಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬಾಬಟ್ಟ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ. 

ಭಾರಿ ಮಳೆಯ ನಂತರ ಗುಡ್ಡ ಕುಸಿತವಾಗಿದೆ. ಆರಂಭದಲ್ಲಿ ಗುಡ್ಡ ಕುಸಿದು ಅಡುಗೆ ಮನೆಗೆ ಮಣ್ಣು ಬಿದ್ದಿತ್ತು. ಈ ಶಬ್ದ ಕೇಳಿದ ತಕ್ಷಣವೇ ಮನೆಯಲ್ಲಿದ್ದವರು ಹೊರಗೆ ಓಡಲು ಪ್ರಯತ್ನಿಸಿದಾರೆ. ಆದರೆ ಗುಡ್ಡದ ಮಣ್ಣು ಮನೆಯ ಸುತ್ತಲು ಬಿದ್ದಿತ್ತು. ಮನೆಯಲ್ಲಿ 6 ಮಂದಿ ಇದ್ದರು.

ನಾಲ್ಕು ದಿನದ ಬಳಿಕ ಬೆಂಗಳೂರಲ್ಲಿ ಭಾರೀ ಮಳೆ ...

 ಸ್ಥಳೀಯರು 6 ಮಂದಿಯನ್ನು ರಕ್ಷಿಸಿದ್ದಾರೆ. ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ನಾಲ್ವರನ್ನು ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈಗಾಗಲೇ ರಾಜ್ಯದ ಹಲವು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹಲವೆಡೆ ಮಳೆಯಿಂದ ಅನಾಹುತ ಸಂಭವಿಸಿದೆ. ಮನೆಗಳು ಮುಳುಗು ನಿರಾಶ್ರಿತರಾಗಿದ್ದಾರೆ.

"