ಉಡುಪಿ(ಆ.17): ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನದವರೆಗೆ ಬಿಡುವು ನೀಡಿದ್ದ ಮಳೆ ಮಧ್ಯಾಹ್ನ ನಂತರ ಧಾರಕಾರವಾಗಿ ಸುರಿದಿದೆ. ಹಲವೆಡೆ ರಾತ್ರಿಯೂ ಮಳೆ ಮುಂದುವರಿದಿದೆ.

ಗುರುವಾರ ರಾತ್ರಿ ಮತ್ತು ಬೆಳಗ್ಗೆ ಸಾಧಾರಣ ಮಳೆ ಸುರಿದಿದ್ದು, ಬಳಿಕ ಬಿಸಿಲು ಕಾಣಿಸಿಕೊಂಡಿತ್ತು. ಮಧ್ಯಾಹ್ನದವರೆಗೆ ಜಿಲ್ಲೆಯ ಹಲವೆಡೆಗಳಲ್ಲಿ ಬಿಸಿಲಿನ ವಾತಾವರಣವಿದ್ದು, ಬಳಿಕ ಕಾರ್ಮೋಡಗಳು ಕವಿಯಲಾರಂಭಿಸಿದ್ದವು. ಕೆಲವು ಕಡೆಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗಿದ್ದು, ಸಂಜೆಯ ನಂತರ ನಿರಂತರ ಮಳೆ ಸುರಿಯುತ್ತಿದೆ.

ಉಡುಪಿ: ಪೌರಕಾರ್ಮಿಕರಿಗೆ ರಾಖಿ ಕಟ್ಟಿದ ಬಿಜೆಪಿ ಸದಸ್ಯರು

ಗುರುವಾರ ಸುರಿದ ಮಳೆ ಜಿಲ್ಲೆಯಲ್ಲಿ 4 ಮನೆಗಳಿಗೆ ಹಾನಿಯಾಗಿದೆ. ಉಡುಪಿ ತಾಲೂಕಿನ ಉದ್ಯಾವರ ಗ್ರಾಮದ ರಿರ್ಚಡ್‌ ಡಿಸೋಜ ಅವರ ಮನೆಯ ಮಾಡು ಕುಸಿದು ತೀವ್ರ ಹಾನಿಯಾಗಿದೆ. ಇದರಿಂದ 80ಸಾವಿರ ರು. ನಷ್ಟವಾಗಿದೆ. ಅದೇ ಗ್ರಾಮದ ಆನಂದ ಬೆಳ್ಚಡ ಮತ್ತು ಕ್ಯಾತ್ರಿನ್‌ ವಾಜ್‌ ಅವರ ಮನೆಗಳ ಮಾಡು ಕುಸಿದು ಹಾನಿಯಾಗಿ ತಲಾ 40 ಸಾವಿರ ರು. ನಷ್ಟವಾಗಿದೆ. ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಪುಟ್ಟಿಅವರ ಮನೆಗೆ ಭಾಗಶಃ ಹಾನಿಯಾಗಿ 30ಸಾವಿರ ರು. ನಷ್ಟಅಂದಾಜಿಸಲಾಗಿದೆ.

ಮಂಗಳೂರು: ಬೀಟ್‌ ಪೊಲೀಸ್ ಜೊತೆ ಬೀಟ್‌ ನಡೆಸಿದ ಕಮಿಷನರ್‌!

ಉಡುಪಿ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳಲ್ಲಿ ಸರಾಸರಿ 43 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 44 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 38 ಮಿ.ಮೀ. ಮತ್ತು ಕಾರ್ಕಳ ತಾಲೂಕಿನಲ್ಲಿ 48 ಮಿ.ಮೀ. ಮಳೆ ಬಿದ್ದಿದೆ.