ಸುತ್ತೂರು (ಅ.11): ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಮೈಸೂರು ತಾಲೂಕು ಮಾರ್ಬಳ್ಳಿ ಗ್ರಾಮದಲ್ಲಿ ರೈತರು ಬೆಳೆದ ಬೆಳೆಗಳು ನೆಲಕಚ್ಚಿವೆ.

ಗ್ರಾಮದ ರೈತರಾದ ಲೋಕೇಶ್‌, ಪುಟ್ಟತಾಯಮ್ಮ, ಕುಮಾರ, ಯಲ್ಲಪ್ಪ ಸೇರಿದಂತೆ ಹಲವಾರು ರೈತರು ನೂರಾರು ಎಕರೆ ಜಮೀನುಗಳಲ್ಲಿ ಬೆಳೆದ ಬೀನ್ಸ್‌, ಟೊಮಾಟೋ, ಬೆಂಡೆಕಾಯಿ, ನುಗ್ಗೇಕಾಯಿ ಸೇರಿದಂತೆ ಇನ್ನಿತರ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ.

ವರುಣನ ಅಬ್ಬರಕ್ಕೆ ನಡುಗಿದ ಬೆಂಗಳೂರು: ಹೈರಾಣಾದ ಜನತೆ ..

ಕಳೆದ ಮೂರ್ನಾಲ್ಕು ವರ್ಷಗಳಿಂದ ಸಕಾಲಕ್ಕೆ ಮಳೆಯಾಗದೇ ರೈತರು ನಷ್ಟಅನುಭವಿಸಿದ್ದು, ಈ ಬಾರಿ ಕಳೆದ ವರ್ಷಗಳಿಗಿಂತ ಉತ್ತಮವಾಗಿ ಮಳೆಯಾದರೂ ಬಿರುಗಾಳಿ ಸಹಿತ ಮಳೆ ಬಿದ್ದರಿಂದ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ನಾಶಗೊಂಡಿದ್ದು, ಲಕ್ಷಾಂತರ ರು. ನಷ್ಟವಾಗಿದ್ದು, ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಕಂಗಾಲಾಗಿದ್ದಾರೆ.

ರೈತರು ಮಾತನಾಡಿ, ಈ ಬಾರಿ ಉತ್ತಮವಾಗಿ ಬೆಳೆ ಬಂದಿತ್ತು, ಆದರೆ ಶುಕ್ರವಾರ ಸುರಿದ ಈ ಬಿರುಗಾಳಿ ಮಳೆಯಿಂದ ಬೆಳೆಗಳು ಸಂಪೂರ್ಣ ನಾಶವಾಗಿದೆ, ಸಾಲ ಸೋಲ ಮಾಡಿ ಬೆಳೆ ಬೆಳೆದು ನಷ್ಟಹೊಂದಿರುವ ರೈತರು ಸರ್ಕಾರ ಸೂಕ್ತ ಬೆಳೆನಷ್ಟಪರಿಹಾರ ಕೊಡಬೇಕೆಂದು ಮನವಿ ಮಾಡಿದರು.