ಚಿಕ್ಕಮಗಳೂರು(ಸೆ.08): ಕಳೆದ ಆಗಸ್ಟ್‌ ಮಾಹೆಯಲ್ಲಿ ಅತಿ ಹೆಚ್ಚು ಮಳೆಯಾಗಿ 10 ಮಂದಿಯನ್ನು ಬಲಿ ತೆಗೆದುಕೊಂಡಿರುವ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್‌, ಅಲೇಖಾನ್‌ ಹೊರಟ್ಟಿ, ಬಾಳೂರು ಹೊರಟ್ಟಿ, ಮಲೆಮನೆ, ದುರ್ಗದಹಳ್ಳಿ, ಕಳಸ ಸೇರಿದಂತೆ ದಾರದಹಳ್ಳಿ, ಭೈರಾಪುರ ಸುತ್ತಮುತ್ತ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.

ಮಳೆಯಿಂದಾಗಿ ಕೆಲವೆಡೆ ಭೂ ಕುಸಿತ ಉಂಟಾಗಿದೆ. ಹಂಡುಗುಳಿ ಗ್ರಾಮದಲ್ಲಿ ಸುಧೀರ್‌ ಎಂಬುವವರ ಕಾಫಿ ತೋಟದಲ್ಲಿ ಸುಮಾರು 15 ಅಡಿಯಷ್ಟುಆಳಕ್ಕೆ ಭೂಮಿ ಕುಸಿದಿದೆ. ಭಾರೀ ಮಳೆಯಿಂದ ಧರೆ ಕುಸಿದು ಅಪಾರ ನಷ್ಟಕಣ್ಣಾರೆ ಕಂಡಿರುವ ಮಲೆನಾಡಿನ ಜನರಿಗೆ ಭೂಮಿ ಕುಸಿದಿರುವುದು ಆತಂಕ ಇನ್ನಷ್ಟುಜಾಸ್ತಿ ಮಾಡಿದೆ.

ಚಿಕ್ಕಮಗಳೂರು: ಎಡೆಬಿಡದೆ ಸುರಿಯುತ್ತಿದೆ ಮಳೆ, ಆತಂಕದಲ್ಲಿ ಜನ!

ಹೇಮಾವತಿ ನದಿಯ ನೀರಿನ ಪಾತ್ರದಲ್ಲಿ ಮಳೆ ಮುಂದುವರಿದಿದ್ದರಿಂದ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಹೇಮಾವತಿ ಜಲಾಶಯದ ಒಳ ಹರಿವು ಹೆಚ್ಚಳವಾಗಲಿದೆ. ಶೃಂಗೇರಿ ತಾಲೂಕಿನಲ್ಲೂ ಬಿಡುವಿಲ್ಲದೇ ಮಳೆ ಸುರಿಯುತಿದೆ. ಬಸ್‌ ನಿಲ್ದಾಣದ ಬಳಿ ಇರುವ ಸುಮತಿ ಎಂಬವರ ಮನೆಯ ಸಮೀಪದಲ್ಲಿ ಗುಡ್ಡ ಜರಿದುಕೊಂಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಲವಾಗಿ ಬೀಸುತ್ತಿರುವ ಗಾಳಿಗೆ ಹಲವೆಡೆ ವಿದ್ಯುತ್‌ ಕಂಬಗಳು ಬಿದ್ದಿವೆ. ಇದರಿಂದ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಭಾರಿ ಮಳೆ ಮತ್ತು ಗಾಳಿಗೆ ಜನಜೀವನ ಅಸ್ತವ್ಯಸ್ತವಾಗಿದೆ. ಈ ಭಾಗದಲ್ಲಿ ಹರಿಯುತ್ತಿರುವ ತುಂಗಾನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಹರಿಹರಪುರ ಸೇರಿದಂತೆ ಸುತ್ತಮುತ್ತ ಮಳೆಯಾಗಿದೆ. ಇದರಿಂದಾಗಿ ಮುಂದಿನ 24 ಗಂಟೆಗಳಲ್ಲಿ ತುಂಗಾ ಜಲಾಶಯದ ಒಳಹರಿವು ಹೆಚ್ಚಳವಾಗಲಿದೆ. ಭದ್ರಾನದಿಯಲ್ಲೂ ನೀರಿನ ಪ್ರಮಾಣ ಅಧಿಕವಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಭತ್ತದ ನಾಟಿ ಹಾಗೂ ಇತರೆ ಕೃಷಿ ಚಟುವಟಿಕೆಗೆ ಅಡ್ಡಿಪಡಿಸಿದೆ.

'ತನ್ನ ಅವನತಿಯ ಪುಟಗಳನ್ನು ಬಿಜೆಪಿ ತಾನೇ ಬರೆಯುತ್ತಿದೆ'..!

ಮೂಡಿಗೆರೆ ಹಾಗೂ ಚಿಕ್ಕಮಗಳೂರು, ಎನ್‌.ಆರ್‌.ಪುರ ತಾಲೂಕುಗಳಲ್ಲಿ ಮಳೆ ಮುಂದುವರಿದಿದ್ದರಿಂದ ಕಾಫಿ ತೋಟಗಳಲ್ಲಿ ಕಾಫಿ ಮತ್ತು ಎಲೆಗಳು ಉದುರುತ್ತಿವೆ. ಶೀತ ಹೆಚ್ಚಾಗಿದ್ದರಿಂದ ಕಾಯಿಕೊರಕ ರೋಗ ಹೆಚ್ಚಾಗುತ್ತಿದೆ. ಕಡೂರು ಹಾಗೂ ತರೀಕೆರೆ ತಾಲೂಕುಗಳಲ್ಲೂ ಮಳೆ ಮುಂದುವರಿದಿದೆ. ಇದೇ ರೀತಿಯ ವಾತಾವರಣ ಇನ್ನಷ್ಟುದಿನ ಇದ್ದರೆ, ತರಕಾರಿ ಬೆಳೆಗೆ ಹಾನಿಯಾಗಲಿದೆ.