Yadagiri Rains: ಸಿಡಿಲು ಬಡಿದು ಇಬ್ಬರು ದುರ್ಮರಣ
- ಮಳೆ ಅಬ್ಬರಕ್ಕೆ ನಲುಗಿದ ಯಾದಗಿರಿ ಜಿಲ್ಲೆ
- ಸಿಡಿಲು ಬಡಿದು ಇಬ್ಬರ ದುರ್ಮರಣ, ಭೀಮಾ ನದಿಯಲ್ಲಿ ಪ್ರವಾಹ ಭೀತಿ
- ಹೊಲಗದ್ದೆಗಳಿಗೆ ನುಗ್ಗಿದ ನೀರು, ರಸ್ತೆ ಸೇತುವೆಗಳು ಜಲಾವೃತ, ಗ್ರಾಮೀಣ ಪ್ರದೇಶದಲ್ಲಿ ಸಂಪರ್ಕ ಕಡಿತ
ಯಾದಗಿರಿ (ಸೆ.11) : ಸತತ ಸುರಿಯುತ್ತಿರುವ ಮಳೆಯ ಅಬ್ಬರ ಜಿಲ್ಲೆಯ ಜನ ಜೀವನವನ್ನು ನಲುಗಿಸಿದೆ. ಅತಿವೃಷ್ಟಿಹಾಗೂ ನೆರೆಯ ಭೀತಿ ಜನರ ತಲ್ಲನಗೊಳಿಸಿದೆ. ಅತಿವೃಷ್ಟಿಯಿಂದಾದ ಹಾನಿ ವೀಕ್ಷಿಸಿ, ಕೇಂದ್ರ ನೆರೆ ಅಧ್ಯಯನ ಅಧಿಕಾರಿಗಳ ತಂಡ ಶುಕ್ರವಾರವಷ್ಟೇ ಮರಳಿದ್ದ ಬೆನ್ನಲ್ಲೇ, ಶನಿವಾರ ವಾರವು ಸುರಿದ ಧಾರಾಕಾರ ಮಳೆ ಮತ್ತಷ್ಟುಜೀವ ಹಾನಿ ಆಸ್ತಿಪಾಸ್ತಿ ನಷ್ಟಕ್ಕೆ ಸಾಕ್ಷಿಯಾಗಿದೆ. ಶನಿವಾರ ಸುರಪುರ ತಾಲೂಕಿನಲ್ಲಿ ಸಿಡಿಲು ಬಡಿದು ಇಬ್ಬರು ದುರ್ಮರಣಕ್ಕಿದಾದರೆ, ಎರಡು ಮೇಕೆಗಳು ಸಹ ಬಲಿಯಾಗಿವೆ. ಈ ಜೊತೆಗೆ, ಮಹಾರಾಷ್ಟ್ರ ಹಾಗೂ ರಾಜ್ಯದ ಭೀಮಾ ಪಾತ್ರದಲ್ಲಿ ಹೆಚ್ಚಿನ ಮಳೆಯಿಂದಾಗಿ ಯಾದಗಿರಿಯ ವಿಮಾನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
Yadgir: ಕೃಷಿ ಹೊಂಡದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
ಯಾದಗಿರಿಯ ಭೀಮಾ ಬ್ರಿಜ್ ಕಮ್ ಬ್ಯಾರೇಜಿನ ಮಟ್ಟಕಾಯ್ದಿಟ್ಟುಕೊಂಡು, ಸುಮಾರು 90 ಸಾವಿರ ಕ್ಯುಸೆಕ್ ನಷ್ಟುನೀರನ್ನು ಭೀಮ ನದಿಗೆ ಹೊರ ಬಿಡಲಾಗಿದೆ. ಭೀಮಾ ನದಿ ಪಾತ್ರದ ಗ್ರಾಮಗಳಿಗೆ ಮುಂಜಾಗ್ರತೆ ವಹಿಸುವಂತೆ, ನದಿಯೊಳಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಸಿಡಿಲು ಬಡಿದು ಇಬ್ಬರ ದುರ್ಮರಣ: ಶನಿವಾರ ಸಿಡಿಲು ಬಡಿದು ಓರ್ವ ಮಹಿಳೆ ಹಾಗೂ ವ್ಯಕ್ತಿಯೊಬ್ಬ ದುರ್ಮರಣಕ್ಕೀಡಾದ ದುರ್ಘಟನೆ ಸಂಭವಿಸಿದೆ. ಸುರಪುರ ತಾಲೂಕಿನ ಚಿಕ್ಕನಹಳ್ಳಿಯ ನಂದಮ್ಮ (35) ಹಾಗೂ ದೇವತ್ಕಲ್ ಗ್ರಾಮದ ಹಾಗೂ ರಾಜು ಸಿಂಗ್ (38) ಮೃತರು. ತಮ್ಮ ಭತ್ತದ ಜಮೀನಿನಲ್ಲಿನ ಕಳೆ ತೆಗೆದು ಬರುವಾಗ ಸಿಡಿಲು ಬಡಿದು ನಂದಮ್ಮ ಮೃತಪಟ್ಟರೆ, ಮನೆ ಮುಂದೆ ನಿಂತಿದ್ದ ವೇಳೆ ಸಿಡಿಲು ಬಡಿದು ರಾಜು ಸಿಂಗ್ ದುರ್ಮರಣಕ್ಕೀಡಾಗಿದ್ದಾರೆ. ಜೊತೆಗೆ ಇವರ ಎರಡು ಮೇಕೆಗಳು ಕೂಡ ಮೃತಪಟ್ಟಿವೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಭೀಮಾ ನದಿಯಲ್ಲಿ ಪ್ರವಾಹ ಭೀತಿ: ಮಹಾರಾಷ್ಟ್ರ ಹಾಗೂ ರಾಜ್ಯದ ಭೀಮಾ ನದಿ ಪಾತ್ರಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಭೀತಿ ಎದುರಾಗಿದೆ. ಯಾದಗಿರಿಯ ಭೀಮಾ ಬ್ರಿಡ್ಜ್ ಕಂ ಬ್ಯಾರೇಜ್‌ನ ಮೂಲಕ 90 ಸಾವಿರ ಕ್ಯುಸೆಕ್ ಪ್ರಮಾಣದಷ್ಟುನೀರನ್ನು ನದಿಗೆ ಹೊರ ಬಿಡಲಾಗಿದೆ. ನದಿ ಪಾತ್ರ ತಿಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ನದಿ ಪಾತ್ರದ ಹತ್ತಿರದ ಗ್ರಾಮಗಳ ಜನ ಜಾನುವಾರುಗಳ ಸುರಕ್ಷತೆಯ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಇದೇ 9 ರಿಂದ 12 ರ ವರೆಗೆ, ನಾಲ್ಕು ದಿನಗಳ ಕಾಲ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ. ಭೀಮಾ ನದಿಯ ತೀರದ ಅಕ್ಕಪಕ್ಕದ ಗ್ರಾಮಗಳ ಸಾರ್ವಜನಿಕರು ನದಿಯ ಕಡೆಗೆ ಹೋಗದಂತೆ ಹಾಗೂ ಜಾನುವಾರುಗಳನ್ನು ನದಿಯ ತೀರಕ್ಕೆ ಬಿಡದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಜಿಲ್ಲಾ ವಿಪತ್ತು ನಿರ್ವಾಹಣಾ ಸಹಾಯವಾಣಿಯು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ಸಹಾಯವಾಣಿ 08473-253800 ಈ ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Yadagiri: ಮಳೆ ನಿಂತು ಹೋದ ಮೇಲೆ ಪ್ರವಾಹ ಭೀತಿ!
ಹೊಲಗದ್ದೆಗಳಲ್ಲಿ ನುಗ್ಗಿದ ನೀರು: ಜಿಲ್ಲೆಯಲ್ಲಿ ಮಳೆಯ ಅಬ್ಬರ ರೈತರ ಸಂಕಷ್ಟದಲ್ಲಿದ್ದಾರೆ. ಜುಲೈ, ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ 14 ಸಾವಿರ ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿ ಅಂದಾಜಿಸಲಾಗಿದೆ. ಭಾರೀ ಪ್ರಮಾಣದ ಮಳೆಯ ಅಬ್ಬರಕ್ಕೆ ಬೆಳೆಗಳು ನೀರು ಪಾಲಾಗುತ್ತಿರುವುದು ರೈತರಲ್ಲಿ ಮತ್ತೊಮ್ಮೆ ಆತಂಕ ಮೂಡಿಸಿದೆ. ಮಳೆಯ ಅಬ್ಬರಕ್ಕೆ ಗುರುಮಠಕಲ್ನ ಬದ್ದೆಪಲ್ಲಿ ರಸ್ತೆ ಜಲಾವೃತಗೊಂಡರೆ, ಬದ್ದೆಪಲ್ಲಿ-ತೆಲಂಗಾಣದ ಬೈರಂಪಳ್ಳಿಯ ರಸ್ತೆ ಜಲಾವೃತ ಗೊಂಡು, ಸಂಚಾರ ಕಡಿತಗೊಂಡಿದೆ. ಊರಿಗೆ ತೆರಳಲು ಜನರ ಪರದಾಡುತ್ತಿದ್ದಾರೆ. ಉಕ್ಕಿ ಹರಿಯುವ ನೀರಿನಲ್ಲಿ ಅಪಾಯದ ನಡುವೆ ಸಂಚಾರ ಮಾಡುತ್ತಿರುವುದು ಆತಂಕ ಮೂಡಿಸಿದೆ. ಬದ್ದೆಪಲ್ಲಿ ಗ್ರಾಮದಲ್ಲಿ ಅಪಾರ ಪ್ರಮಾಣದ ಬೆಳೆ ನೀರು ಪಾಲಾಗಿದೆ. ಹತ್ತಿ, ಭತ್ತ ಬೆಳೆ ಹಾನಿ ರೈತರಲ್ಲಿ ಸಂಕಷ್ಟಮೂಡಿಸಿದೆ.