Asianet Suvarna News Asianet Suvarna News

ಗುಮ್ಮಟನಗರಿ ವಿಜಯಪುರದಲ್ಲಿ ನಿಲ್ಲದ ಸಿಡಿಲಾರ್ಭಟ: ಮೂವರು ಬಲಿ!

ಜಿಲ್ಲೆಯ ವಿವಿಧ ಭಾಗಗಳಲ್ಲಿ ಶುಕ್ರವಾರ ಸಂಜೆ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಈ ವೇಳೆ ಸಿಡಿಲಿಗೆ ಓರ್ವ ಮಹಿಳೆ ಬಲಿಯಾಗಿ 3 ಮೇಕೆಗಳು, ಒಂದು ಎಮ್ಮೆ ಮಣುಕ ಸಾವನ್ನಪ್ಪಿವೆ. ನಿನ್ನೆ ಸಿಡಿಲಿಗೆ ಇಬ್ಬರು ಬಲಿಯಾಗಿದ್ದು ಇಂದು ಸಿಡಿಲಾರ್ಭಟ ಮುಂದುವರೆದಿದೆ.

heavy rain in vijayapura three death due to lightning strike gvd
Author
First Published Apr 12, 2024, 7:40 PM IST

ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಏ.12): ಜಿಲ್ಲೆಯ ವಿವಿಧ ಭಾಗಗಳಲ್ಲಿ ಶುಕ್ರವಾರ ಸಂಜೆ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಈ ವೇಳೆ ಸಿಡಿಲಿಗೆ ಓರ್ವ ಮಹಿಳೆ ಬಲಿಯಾಗಿ 3 ಮೇಕೆಗಳು, ಒಂದು ಎಮ್ಮೆ ಮಣುಕ ಸಾವನ್ನಪ್ಪಿವೆ. ನಿನ್ನೆ ಸಿಡಿಲಿಗೆ ಇಬ್ಬರು ಬಲಿಯಾಗಿದ್ದು ಇಂದು ಸಿಡಿಲಾರ್ಭಟ ಮುಂದುವರೆದಿದೆ.

ಸಿಡಿಲಿಗೆ ಮಹಿಳೆ ಬಲಿ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಸಿಡಿಲಿಗೆ ಭಾರತಿ ಕೆಂಗನಾಳ(40) ಎಂಬ ಮಹಿಳೆ ಬಲಿಯಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಭಾರತಿ ಕೆಂಗನಾಳ ಮೃತಪಟ್ಟಿದ್ದು, ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ಜರುಗಿದೆ. 

ಜಮೀನಿನಲ್ಲಿದ್ದ ಮೂರು ಮೇಕೆ ಸಾವು: ಅಲ್ಲದೇ ತಿಕೋಟಾ ತಾಲ್ಲೂಕಿನ ದಂದರಗಿ ಗ್ರಾಮದಲ್ಲಿ ಕುಮಾರ್ ಗೊಳಸಂಗಿ ಎಂಬುವರಿಗೆ ಸೇರಿದ ಮೂರು ಮೇಕೆಗಳು ಜಮೀನಿನಲ್ಲಿ ಮರದ ಕೆಳಗೆ ಕಟ್ಟಿದ್ದ ವೇಳೆ  ಸಿಡಿಲು ಬಡಿದು ಸಾವನ್ನಪ್ಪಿವೆ. ಚಡಚಣ ತಾಲ್ಲೂಕಿನ ಶಿರಾಡೋಣ ಗ್ರಾಮದಲ್ಲಿ ಮಹಾದೇವ ರಕಮಾಜಿ ಪಾಂಡ್ರೆ ರವರ ಜಮೀನಿನಲ್ಲಿ ಸಿಡಿಲು ಬಡಿದು ಎಮ್ಮೆ ಮಣಕ ಮೃತಪಟ್ಟಿರುತ್ತದೆ.

ಮಡಿಕೇರಿ ಶಾಸಕರು ಮಂತರ್ ಗೌಡ್ರೋ, ಇಲ್ಲ ಅಪ್ಪ ಎ.ಮಂಜುವೋ: ಮಾಜಿ ಶಾಸಕ ಅಪ್ಪಚ್ಚು ರಂಜನ್ ಪ್ರಶ್ನೆ

ನಿನ್ನೆ ಇಬ್ಬರು ಸಿಡಿಲಿಗೆ ಬಲಿ: ವಿಜಯಪುರ ಜಿಲ್ಲೆಯಲ್ಲಿ ಸಿಡಿಲಾರ್ಭಟ ಮುಂದುವರೆದಿದೆ. ನಿನ್ನೆಯು ಸಹ ಸಿಡಿಲಿನ ಹೊಡೆತಕ್ಕೆ ಇಬ್ಬರು ಸಾವನ್ನಪ್ಪಿದ್ದರು. ಇಂಡಿ ಪಟ್ಟಣದ ಹೊರವಲಯದಲ್ಲಿ ಸಿಡಿಲು ಬಡಿದು ಭೀಮಪ್ಪ ಅವರಾಧಿ 15 ವರ್ಷದ ಬಾಲಕ ಬಲಿಯಾಗಿದ್ದ. ಇನ್ನೂ ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದಲ್ಲಿ 45 ವರ್ಷದ ಸೋಮು ಪಟ್ಟಣಶೆಟ್ಟಿ ಸಾವನ್ನಪ್ಪಿದ್ದರು. ಇಂದು ಸಹ ಮಹಿಳೆ ಸಿಡಿಲಿಗೆ ಬಲಿಯಾಗಿದ್ದು, ಸಿಡಿಲಾರ್ಭಟ ಮುಂದುವರೆದಿದೆ.

Follow Us:
Download App:
  • android
  • ios