Asianet Suvarna News Asianet Suvarna News

ಕರಾವಳಿಯಲ್ಲಿ ಮುಂದುವರೆದ ವರುಣನ ಆರ್ಭಟ

ಕಾರವಾರ ತಾಲೂಕಿನಲ್ಲಿ ಬೆಳಗ್ಗೆ ವೇಳೆ ಜಿಟಿಜಿಟಿ ಮಳೆ| ಕಾರವಾರದ ಬೈತಖೋಲ್‌ ಬಂದರಿಗೆ, ರವೀಂದ್ರನಾಥ ಟ್ಯಾಗೋರ ಕಡಲ ತೀರದಲ್ಲಿ ಲಂಗರು ಹಾಕಿದ ಹೊರ ರಾಜ್ಯ, ಜಿಲ್ಲೆಗಳ ನೂರಾರು ಬೋಟ್‌ಗಳು|   ಸಮುದ್ರ ಪ್ರಕ್ಷುಬ್ಧವಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ| 

Heavy Rain in Uttara Kannada District
Author
Bengaluru, First Published Sep 13, 2020, 9:59 AM IST

ಕಾರವಾರ(ಸೆ.13): ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಶನಿವಾರ ದಿನವಿಡಿ ಮಳೆಯಾಗಿದೆ. ಮಲೆನಾಡಿನ ಕೆಲವು ತಾಲೂಕಿನಲ್ಲಿ ದಿನವಿಡಿ ಸುರಿದಿದೆ. ಭಟ್ಕಳದಲ್ಲಿ ದಿನವಿಡಿ ಜಿಟಿಜಿಟಿ ಮಳೆಯಾಗಿದೆ. ಅಂಕೋಲಾ, ಹೊನ್ನಾವರ ತಾಲೂಕಿನಲ್ಲಿ ಮೋಡಕವಿದ ವಾತಾವಣವಿತ್ತು. ಆಗಾಗ ರಭಸದಿಂದ ಮಳೆಯಾಗಿದೆ. 

ಕಾರವಾರ ತಾಲೂಕಿನಲ್ಲಿ ಬೆಳಗ್ಗೆ ವೇಳೆ ಜಿಟಿಜಿಟಿ ಮಳೆಯಾಗಿದ್ದು, ನಂತರ ಆಗಾಗ ರಭಸದಿಂದ ಮಳೆಯಾಗುತ್ತಿತ್ತು. ಕಾರವಾರದ ಬೈತಖೋಲ್‌ ಬಂದರಿಗೆ, ರವೀಂದ್ರನಾಥ ಟ್ಯಾಗೋರ ಕಡಲ ತೀರದಲ್ಲಿ ಹೊರ ರಾಜ್ಯ, ಜಿಲ್ಲೆಗಳ ನೂರಾರು ಬೋಟ್‌ಗಳು ಬಂದು ಲಂಗರು ಹಾಕಿವೆ. ಹೊನ್ನಾವರ, ಕುಮಟಾ, ಭಟ್ಕಳ ಬಂದರುಗಳು ಕೂಡಾ ಬೋಟ್‌ಗಳಿಂದ ತುಂಬಿವೆ. ಹವಾಮಾನ ಇಲಾಖೆ ಸಮುದ್ರ ಪ್ರಕ್ಷುಬ್ಧವಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ್ದು, ಬೋಟ್‌ಗಳು ಮೀನುಗಾರಿಕೆಗೆ ತೆರಳಿಲ್ಲ.

ಕೊರೋನಾ ವಿರುದ್ಧ ಹೋರಾಟ: 'ಮಾಸ್ಕ್‌ ಧರಿಸದವರಿಗೆ ಸರ್ಕಾರಿ ಕಚೇರಿಗಳಿಗೆ ಪ್ರವೇಶವಿಲ್ಲ'

ಶಿರಸಿ ತಾಲೂಕಿನ ಬಹುತೇಕ ಕಡೆ ದಿನವಿಡಿ ಜಿಟಿಜಿಟಿ ಮಳೆಯಾಗಿದೆ. ಯಲ್ಲಾಪುರ, ಸಿದ್ದಾಪುರ, ಮುಂಡಗೋಡ ತಾಲೂಕಿನಲ್ಲೂ ಜಿಟಿಜಿಟಿ ಮಳೆ ಮುಂದುವರೆದಿದೆ. ಜೊಯಿಡಾ, ದಾಂಡೇಲಿ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.
ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಮುಂದಿನ 24 ಗಂಟೆ ಅವಧಿಯಲ್ಲಿ ತಾಲೂಕುಗಳಲ್ಲಿ ಸುರಿದ ಮಳೆಯ ಪ್ರಮಾಣ ಇಂತಿದೆ. ಅಂಕೋಲಾ 36.0 ಮಿ.ಮೀ, ಭಟ್ಕಳ 145. ಮಿ.ಮೀ, ಹಳಿಯಾಳ 6.0 ಮಿ.ಮೀ, ಹೊನ್ನಾವರ 79.0 ಮಿ.ಮೀ, ಕಾರವಾರ 55.8 ಮಿ.ಮಿ, ಕುಮಟಾ 63.6 ಮಿ.ಮೀ, ಮುಂಡಗೋಡ 10.4 ಮಿ.ಮೀ, ಸಿದ್ದಾಪುರ 42.4 ಮಿ.ಮೀ, ಶಿರಸಿ 36.0 ಮಿ.ಮೀ, ಜೊಯಿಡಾ 5.6 ಮಿ.ಮೀ, ಯಲ್ಲಾಪುರ 6.6 ಮಿ.ಮೀ. ಮಳೆಯಾಗಿದೆ.

ಜಲಾಶಯ ಮಟ್ಟ:

ಕದ್ರಾ:

34.50ಮೀ (ಗರಿಷ್ಠ), 30.70 ಮೀ (ಇಂದಿನ ಮಟ್ಟ), 4357 ಕ್ಯುಸೆಕ್‌ (ಒಳಹರಿವು) 3237 ಕ್ಯುಸೆಕ್‌ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗ), 70.25 ಮೀ. (ಇ.ಮಟ್ಟ), 3633 ಕ್ಯುಸೆಕ್‌ (ಒಳ ಹರಿವು) 3927 ಕ್ಯುಸೆಕ್‌ (ಹೊರಹರಿವು) ಸೂಪಾ: 564.00 ಮೀ (ಗ), 554.87 ಮೀ (ಇ. ಮಟ್ಟ), 2587.314 ಕ್ಯುಸೆಕ್‌ (ಒಳ ಹರಿವು), ಹೊರ ಹರಿವು ಇಲ್ಲ.

ತಟ್ಟಿಹಳ್ಳ:

468.38ಮೀ (ಗ), 465.70 ಮೀ (ಇ.ಮಟ್ಟ), 298 ಕ್ಯುಸೆಕ್‌ (ಒಳ ಹರಿವು) 1998 ಕ್ಯುಸೆಕ್‌ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 435.52 ಮೀ (ಇ. ಮಟ್ಟ), 2742 ಕ್ಯುಸೆಕ್‌ (ಒಳ ಹರಿವು) 2697 ಕ್ಯುಸೆಕ್‌ (ಹೊರ ಹರಿವು) ಗೇರುಸೊಪ್ಪ: 55.00 ಮೀ. (ಗ), 49.91 ಮೀ. (ಇ.ಮಟ್ಟ) 3520 ಕ್ಯುಸೆಕ್‌ (ಒಳ ಹರಿವು) 4712 ಕ್ಯುಸೆಕ್‌ (ಹೊರ ಹರಿವು) ಲಿಂಗನಮಕ್ಕಿ: 1819.00 ಅಡಿ (ಗ), 1808.35 ಅಡಿ (ಇ.ಮಟ್ಟ) 16467 ಕ್ಯುಸೆಕ್‌ (ಒಳ ಹರಿವು) 2420.18 ಕ್ಯುಸೆಕ್‌ (ಹೊರ ಹರಿವು).

Follow Us:
Download App:
  • android
  • ios