ರಾಯಚೂರು: (ಸೆ.18) ನಿನ್ನೆ ತಡರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದ ಚರಂಡಿ ನೀರು ದರ್ಗಾಕ್ಕೆ ನುಗ್ಗಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಭಾರಿ ಮಳೆ ಬಿದ್ದ ಪರಿಣಾಮ ದರ್ಗಾದಲ್ಲಿ ಅರ್ಧ ಅಡಿಯಷ್ಟು ಚರಂಡಿ ನೀರು ನಿಂತಿದೆ.

ದರ್ಗಾದ ಒಳಗಡೆ ಕೊಳಚೆ ನೀರು ನುಗ್ಗಿದ್ದರಿಂದ  ದರ್ಗಾಕ್ಕೆ ಹೋಗಲು ಜನರ ಪರದಾಟ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ವರುಣನ ಅವಕೃಪೆಯಿಂದ ಜನರು ಹರಸಾಹಸ ಪಟ್ಟಿದ್ದಾರೆ.