Asianet Suvarna News Asianet Suvarna News

ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ ಭಾರೀ ಮಳೆ

*   ಮೈಸೂರಲ್ಲಿ ಮರ ಬಿದ್ದು ರಿಕ್ಷಾ ಚಾಲಕ ಸಾವು
*   ಪ್ರಯಾಣಿಕನಿಗೆ ಸಣ್ಣ ಪುಟ್ಟ ಗಾಯ
*   ಹಳೆ ಮೈಸೂರು ಭಾಗದಲ್ಲಿ ಪ್ರಬಲವಾದ ಮಳೆ 

Heavy Rain in Mysuru and Chamarajanagara  on Sep 30 grg
Author
Bengaluru, First Published Oct 1, 2021, 7:28 AM IST
  • Facebook
  • Twitter
  • Whatsapp

ಮೈಸೂರು/ಚಾಮರಾಜನಗರ(ಅ.01): ರಾಜ್ಯದ ಉತ್ತರ ಭಾಗದಲ್ಲಿ ಕಳೆದ ಕೆಲ ದಿನಗಳ ಕಾಲ ಸುರಿದಿದ್ದ ಮುಂಗಾರು ಮಳೆ(Monsoon Rain) ಗುರುವಾರ ಹಳೆ ಮೈಸೂರು ಭಾಗದಲ್ಲಿ ಪ್ರಬಲವಾಗಿದ್ದು, ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ಆಟೋ ಚಾಲಕನೊಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೈಸೂರು(Mysuru) ನಗರ ಬನ್ನಿಮಂಪಟದ ಹಲೀಂ ನಗರದ ನಿವಾಸಿ ಏಜಾಜ್‌ ಪಾಷ (42)ಮೃತಪಟ್ಟ ಆಟೋ ಚಾಲಕ. ಮೈಸೂರಿನ ಮೈಸೂರು- ಬೆಂಗಳೂರು ರಸ್ತೆಯ ಫೈವ್‌ಲೈಟ್‌ ವೃತ್ತದ ಬಳಿ ಗುರುವಾರ ಸಂಜೆ ಚಲಿಸುತ್ತಿದ್ದ ಆಟೋ ಮೇಲೆ ಮರವೊಂದು ಬುಡ ಸಮೇತ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಜೊತೆಗಿದ್ದ ಪ್ರಯಾಣಿಕನಿಗೆ ಸಣ್ಣ ಪುಟ್ಟಗಾಯದೊಂದಿಗೆ ಪಾರಾಗಿದ್ದಾನೆ.

ಮೈಸೂರು ನಗರ, ಚಾಮರಾಜನಗರ(Chamarajanagara) ಜಿಲ್ಲೆಯ ಕೊಳ್ಳೇಗಾಲ, ಗುಂಡ್ಲುಪೇಟೆ, ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಗಳಲ್ಲಿ ಭಾರೀ ಮಳೆಯಾಗಿದ್ದು, ಪಟ್ಟಣದ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ಶಾಲಾ- ಕಾಲೇಜು ವಿದ್ಯಾರ್ಥಿಗಳು, ಕರ್ತವ್ಯ ಮುಗಿಸಿ ಮನೆಗೆ ಹಿಂತಿರುಗವವರು ರಸ್ತೆಯಲ್ಲಿ ನಿಂತ ಭಾರಿ ನೀರಿನಿಂದ ಸಂಚರಿಸಲಾಗದೇ ಪಡಿಪಾಟಲುಪಟ್ಟರು.

ಭಾರೀ ಮಳೆಗೆ ಚಿತ್ತಾಪುರ ತತ್ತರ: ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಕೆಲವು ದಿನಗಲ ಹಿಂದೆ ಕಲಬುರಗಿ(Kalaburagi) ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಭಾರೀ ಪ್ರಮಾಣದ ಮಳೆಯಾಗಿತ್ತು. ಶನಿವಾರ ರಾತ್ರಿ ಈ ಊರಲ್ಲಿ 117 ಮಿಮಿ ಮಳೆ ಸುರಿದು ಜನಜೀವನ ಪರೇಶಾನ್‌ ಆಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವುದು ಒಂದೆಡೆಯಾದರೆ, ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿದೆಯಲ್ಲದೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಪ್ರದೇಶಗಳಲ್ಲಿ ಮತ್ತು ಹೊಲಗಳಲ್ಲಿ ಮಳೆ ನೀರು ಸಂಗ್ರಹಗೊಂಡಿರುವ ಸನ್ನಿವೇಶಗಳು ಕಂಡುಬಂದಿವೆ. ಇಡೀ ರಾತ್ರಿಯವರೆಗೆ ಎಡಬಿಡದೆ ಒಂದೇ ಸಮನೆ ಮಳೆ(Rain) ಸುರಿಯುವ ಮೂಲಕ ಎಲ್ಲೆಂದರಲ್ಲಿ ಮಳೆ ನೀರು ನದಿಯಂತೆ ಹರಿಯುತ್ತೀರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯನ್ನುಂಟು ಮಾಡಿತ್ತು. 
 

Follow Us:
Download App:
  • android
  • ios