ಚಿಕ್ಕಮಗಳೂರಲ್ಲಿ ಮಳೆ ಅಬ್ಬರ: ಓಮ್ನಿ ಮೇಲೆ ಬಿದ್ದ ಮರ, ತಪ್ಪಿದ ಭಾರೀ ಅನಾಹುತ..!

ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಚಿಕ್ಕಮಗಳೂರು-ಶೃಂಗೇರಿ ಮಾರ್ಗ ಕೂಡ ಕೆಲ ಕಾಲ ಬಂದ್ ಆಗಿತ್ತು. ಇನ್ನು ಮೂಡಿಗೆರೆ ತಾಲೂಕಿನ ಹಾಂದಿ ಬಳಿ ಕಾಫಿಗಿಡದ ಬಡ್ಡೆಗಳನ್ನ ಸಾಗಿಸುತ್ತಿದ್ದ ಲಾರಿಯೊಂದು ಎದುರಿಂದ ಬಂದ ಕಾರಿಗೆ ಸೈಡ್ ಕೊಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಚಾಲಕ ಸೇರಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Heavy Rain in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಮೇ.23): ಮನೆ ಮುಂದೆ ನಿಲ್ಲಿಸಿದ್ದ ಓಮ್ನಿ ಮೇಲೆ ಬೃಹತ್ ಮರ ಬಿದ್ದು ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕುಂಚೇಬೈಲು ಗ್ರಾಮದ ಬಳಿ ನಡೆದಿದೆ. ಕಂಚೇಬೈಲು ಗ್ರಾಮದ ಪ್ರದೀಪ್ ಎಂಬುವರು ತಮ್ಮ ತೋಟಕ್ಕೆ ಕೂಲಿಕಾರ್ಮಿಕರನ್ನ ಕರೆದುಕೊಂಡು ಹೋಗಿ, ವಾಪಸ್ ಕರೆತರಲು ಓಮ್ನಿಯನ್ನ ಬಳಸುತ್ತಿದ್ದರು. ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಊಟಕ್ಕೆ ಬಂದಾಗ ಮನೆ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರಿನ ಮೇಳೆ ಬೃಹತ್ ಮರ ಬಿದ್ದು ಓಮ್ನಿ ಕಾರು ಜಖಂಗೊಂಡಿದೆ. ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ಪಾರಾಗಿದೆ. 

ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಚಿಕ್ಕಮಗಳೂರು-ಶೃಂಗೇರಿ ಮಾರ್ಗ ಕೂಡ ಕೆಲ ಕಾಲ ಬಂದ್ ಆಗಿತ್ತು. ಇನ್ನು ಮೂಡಿಗೆರೆ ತಾಲೂಕಿನ ಹಾಂದಿ ಬಳಿ ಕಾಫಿಗಿಡದ ಬಡ್ಡೆಗಳನ್ನ ಸಾಗಿಸುತ್ತಿದ್ದ ಲಾರಿಯೊಂದು ಎದುರಿಂದ ಬಂದ ಕಾರಿಗೆ ಸೈಡ್ ಕೊಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಚಾಲಕ ಸೇರಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕ್ಕಮಗಳೂರಿನಿಂದ ಬೆಂಗಳೂರಿಗೆ 6 ಎಲೆಕ್ಟ್ರಿಕ್ ಬಸ್ ಆರಂಭ

ಮಲೆನಾಡಿನಲ್ಲೂ  ಮಳೆ ಅಬ್ಬರ 

ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು ಶೃಂಗೇರಿ, ಎನ್.ಆರ್.ಪುರ, ಕೊಪ್ಪ, ಮೂಡಿಗೆರೆ ಹಾಗೂ ಕಳಸದಲ್ಲಿ ಮಳೆ ಸುರಿದಿದೆ. ಕೊಪ್ಪ ತಾಲೂಕಿನ ಜಯಪುರ ಗ್ರಾಮದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೆನಾಡಿನಾದ್ಯಂತ ಗುಡುಗು-ಸಿಡಿಲಿನ ಅಬ್ಬರದ ಗಾಳಿ-ಮಳೆಗೆ ಮಲೆನಾಡು ಅಕ್ಷರಶಃ ಕಂಗಾಲಾಗಿದೆ. ಗಾಳಿ-ಮಳೆಗೆ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲೇ ಮರಗಳು ವಿದ್ಯುತ್ ತಂತಿ ಮೇಲೆ ಮುರಿದು ಬಿದ್ದಿರುವುದರಿಂದ ಮಲೆನಾಡಿನ ಕುಗ್ರಾಮಗಳು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.

ಅಧೀನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ : 

ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧೀನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಸೂಚಿಸಿದ್ದಾರೆ. ತಹಸೀಲ್ದಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕೇಸ್ವಾನ್‌ನಲ್ಲಿ ವೀಡಿಯೊ ಸಂವಾದದ ಮೂಲಕ ಅಧೀನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ  ನೀಡಿದ್ದಾರೆ.ಈಗಾಗಲೇ ಮೇ 21 ರಂದು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಭಾರಿ ಮಳೆಯಾಗಿದ್ದು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮಾನವ ಹಾನಿ, ಬೆಳೆ ಹಾನಿ ಹಾಗೂ ಪಶುಗಳ ಹಾನಿ ಬಗ್ಗೆ ಕೂಡಲೇ ವರದಿ ನೀಡಬೇಕು ಜೊತೆಗೆ ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದರು. 

ಸಿ.ಟಿ ರವಿ ಗೆ ಮತ್ತೊಂದು ಶಾಕ್ ನೀಡಲು ಶಾಸಕ ಹೆಚ್ ಡಿ ತಮ್ಮಯ್ಯ ತೆರೆಮರೆಯಲ್ಲಿ ಕಸರತ್ತು!

ಕಡೂರು ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, 14 ಮನೆಗಳಿಗೆ ಹಾನಿಯಾಗಿದೆಯಲ್ಲದೇ, ಮೂರು ಎಕ್ಟೇರ್‌ನಲ್ಲಿ ತೆಂಗು, 2.5 ಎಕ್ಟೇರ್‌ನಲ್ಲಿ ಬಾಳೆ ನಾಶವಾಗಿದೆ. ಬೀರೂರು ವಿಭಾಗದಲ್ಲಿ 10.9 ಎಕ್ಟೇರ್ ಪ್ರದೇಶದಲ್ಲಿ ತರಕಾರಿ ಬೆಳೆ ನಾಶವಾಗಿದೆ. ಇವುಗಳಿಗೆ ಪರಿಹಾರ ನೀಡುವ ಸಂಬಂಧ ಕ್ರಮ ವಹಿಸಬೇಕು ಎಂದು ಹೇಳಿದರು. ಕಡೂರು ತಹಸೀಲ್ದಾರ್ ಮಾಹಿತಿ ನೀಡಿ  ಹಾನಿಯಾಗಿರುವ 14 ಮನೆಗಳು ತೋಟದಲ್ಲಿ ನಿರ್ಮಿಸಿರುವ ಮನೆಗಳಾಗಿದ್ದು, ಈ ಮನೆಗಳಿಗೆ ತಹಡಿನ ಶೀಟ್‌ಗಳನ್ನು ಹಾಕಲಾಗಿದೆ. ಇವು ಗಾಳಿಯಲ್ಲಿ ಹಾರಿ ಹೋಗಿದ್ದು, ಮನೆಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು. ಮಳೆ ಹೆಚ್ಚಾಗುತ್ತಿರುವುದರಿಂದ ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರುಗಳು ಹಾಗೂ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಳೆಯಿಂದಾಗುವ ಹಾನಿಯ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. 

ಕುಟುಂಬಸ್ಥರಿಗೆ 5 ಲಕ್ಷ ಪರಿಹಾರದ ಚೆಕ್ ವಿತರಣೆ : 

ಮೇ 21  ರಂದು ಮೂಡಿಗೆರೆ ತಾಲ್ಲೂಕಿನ ಚಿಕ್ಕಹಳ್ಳ ಗ್ರಾಮದಲ್ಲಿ  ಬಿರುಗಾಳಿ ಮತ್ತು ಮಳೆಯಿಂದ ಹೋಂ ಸ್ಟೇ ಮಾಲೀಕ ವೇಣುಗೋಪಾಲ್ ಮೃತ ಪಟ್ಟಿದ್ದರು.ಭಾರೀ ಗಾಳಿಯಿಂದ ಸ್ಕೂಟಿ ಮೇಲೆ ಮರ ಬಿದ್ದ ಪರಿಣಾಮ ಮೂಡಿಗೆರೆ ಪಟ್ಟಣದ ನಿವಾಸಿ ವೇಣುಗೋಪಾಲ್ ಸ್ಥಳದಲ್ಲಿ ಮೃತಪಟ್ಟಿದ್ದರು. ಮೂಡಿಗೆರೆ ಪಟ್ಟಣದಲ್ಲಿರುವ ಮೃತ ನಿವಾಸಕ್ಕೆ ಇಂದು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಭೇಟಿ ನೀಡಿ ಸ್ವಾಂತನ ಹೇಳಿದರು. ಅಲ್ಲದೆ ಮೃತರ ಕುಟುಂಬಕ್ಕೆ ಪರಿಹಾರವನ್ನು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಇಂದು ವಿತರಣೆ ಮಾಡಿದರು. ಸರ್ಕಾರಿಂದ 5 ಲಕ್ಷ ಮಂಜೂರಾಗಿದ್ದು, ಪರಿಹಾರ ಪತ್ರವನ್ನು ಮೃತರ ಪತ್ನಿ ಕೆ.ಜಿ. ರಾಧಾ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ. ಪ್ರಭು, ಉಪವಿಭಾಗಾಧಿಕಾರಿ ರಾಜೇಶ್ ಇದ್ದರು.

Latest Videos
Follow Us:
Download App:
  • android
  • ios