ಬಳ್ಳಾರಿ(ಜು.20): ಕಳೆದ ಮೂರ್ನಾಲ್ಕು ದಿನಗಳಿಂದ ಮೋಡದಲ್ಲಿ ಮರೆಯಾಗುತ್ತಿದ್ದ ಮಳೆರಾಯ ನಗರದಲ್ಲಿ ಶನಿವಾರ ರಾತ್ರಿ ಸತತ ಎರಡುವರೆ ತಾಸುಗಳ ಕಾಲ ಸುರಿದು ಬಿಸಿಲೂರನ್ನು ತಂಪಾಗಿಸಿದ!

ರಾತ್ರಿ 9 ಗಂಟೆಗೆ ಗುಡುಗು, ಸಿಡಿಲಿನೊಂದಿಗೆ ಪ್ರವೇಶ ಮಾಡಿದ ವರುಣನ ಆರ್ಭಟದಿಂದ ನಗರದ ಅನೇಕ ತಗ್ಗು ಪ್ರದೇಶಗಳು ನೀರಿನಿಂದ ತುಂಬಿಕೊಂಡವು. ಸಣ್ಣಮಳೆಗೂ ತುಂಬಿಕೊಳ್ಳುವ ನಗರದ ಮೇಲ್ಸೇತುವೆಗಳು ಜನರ ಓಡಾಟಕ್ಕೆ ಅಡಚಣೆಗೊಳಿಸಿದವು. ಇಲ್ಲಿನ ತಹಸೀಲ್ದಾರ್‌ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಉಪ ನೊಂದಣಾಧಿಕಾರಿ ಕಚೇರಿಗಳಲ್ಲಿ ಮಳೆ ನೀರು ತುಂಬಿಕೊಂಡಿದ್ದು ಕಂಡು ಬಂತು.

ಇಲ್ಲಿನ ವಾಜಪೇಯಿ ಬಡಾವಣೆ, ಇಂದಿರಾನಗರ, ದೇವಿನಗರ, ರೂಪನಗುಡಿ ರಸ್ತೆ ಮತ್ತಿತರ ಕಡೆಗಳಲ್ಲಿನ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು. ಮಳೆ-ಗಾಳಿಯಿಂದಾಗಿ ನಗರದ ಅನೇಕ ಭಾಗದ ರಸ್ತೆ ಆಸುಪಾಸಿನ ಮರಗಳು ಉರುಳಿ ಬಿದ್ದಿವೆ. ಯಾವುದೇ ಅನಾಹುತ ಸಂಭವಿಸಿಲ್ಲ. ಇಲ್ಲಿನ ಪಾರ್ವತಿ ನಗರ, ಕುವೆಂಪುನಗರ, ಸಿರುಗುಪ್ಪ ರಸ್ತೆಗಳಲ್ಲಿ ಮರಗಳು ಬಿದ್ದಿದ್ದು, ವಿದ್ಯುತ್‌ ಕಂಬಗಳು ಬಾಗಿವೆ. ಇದರಿಂದ ನಗರದ ಬಹುತೇಕ ಕಡೆಗಳಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ವಿದ್ಯುತ್‌ ಸ್ಥಗಿತಗೊಳಿಸಲಾಗಿತ್ತು.

ಬಳ್ಳಾರಿ: ಮುದ್ದಾದ ಮಗುವಿಗೆ ಜನ್ಮ ನೀಡಿದ ಕೊರೋನಾ ಸೋಂಕಿತೆ

ಜಿಲ್ಲೆಯ ಮಳೆಯ ಮಾಹಿತಿ

ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸುರಿದ ಮಳೆಯ ಪೈಕಿ ಬಳ್ಳಾರಿಯಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಹಡಗಲಿ ಹಾಗೂ ಹರಪನಹಳ್ಳಿಯಲ್ಲಿ ಮಳೆಯಾಗಿಲ್ಲ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದೆ. ಬಳ್ಳಾರಿ 47.6 ಮಿ.ಮೀ ಮಳೆಯಾಗಿದ್ದು, ಹಗರಿಬೊಮ್ಮನಹಳ್ಳಿ 1.6 ಮಿ.ಮೀ, ಹೊಸಪೇಟೆ 4.4 ಮಿ.ಮೀ, ಕೂಡ್ಲಿಗಿ 7.6 ಮಿ.ಮೀ, ಸಂಡೂರು 15 ಮಿ.ಮೀ ಹಾಗೂ ಸಿರುಗುಪ್ಪ 13 ಮಿ.ಮೀಟರ್‌ ಮಳೆಯಾಗಿದೆ. ಭಾನುವಾರ ಬೆಳಿಗ್ಗೆಯಿಂದ ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣವಿತ್ತು. ಸಂಡೂರು, ಕೂಡ್ಲಿಗಿ, ಸಿರುಗುಪ್ಪ, ಹಡಗಲಿ ಹಾಗೂ ಕೊಟ್ಟೂರು ತಾಲೂಕಿನ ಗ್ರಾಮೀಣ ಭಾಗಗಳ ಅಲ್ಲಲ್ಲಿ ತುಂತುರು ಮಳೆಯಾಗಿದೆ.

ಹಳ್ಳದ ಪ್ರವಾಹಕ್ಕೆ ಕಿತ್ತುಹೋದ ಯಲ್ಲಮ್ಮನ ಹಳ್ಳದ ಸೇತುವೆ

ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸುರಿದ ಮಳೆಯ ಪೈಕಿ ಬಳ್ಳಾರಿಯಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಸಿರುಗುಪ್ಪ ತಾಲೂಕಿನಲ್ಲಿ ಸುರಿದ ಮಳೆಗೆ ರಾರಾವಿ ಗ್ರಾಮದ ಬಳಿ ಇರುವ ಯಲ್ಲಮ್ಮನ ಹಳ್ಳಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಕೊಚ್ಚಿ ಹೋಗಿದೆ.

ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದೆ. ಬಳ್ಳಾರಿ 47.6 ಮಿ.ಮೀ ಮಳೆಯಾಗಿದ್ದು, ಹಗರಿಬೊಮ್ಮನಹಳ್ಳಿ 1.6 ಮಿ.ಮೀ, ಹೊಸಪೇಟೆ 4.4 ಮಿ.ಮೀ, ಕೂಡ್ಲಿಗಿ 7.6 ಮಿ.ಮೀ, ಸಂಡೂರು 15 ಮಿ.ಮೀ ಹಾಗೂ ಸಿರುಗುಪ್ಪ 13 ಮಿ.ಮೀಟರ್‌ ಮಳೆಯಾಗಿದೆ. ಭಾನುವಾರ ಬೆಳಗ್ಗೆಯಿಂದ ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣವಿತ್ತು. ಸಂಡೂರು, ಕೂಡ್ಲಿಗಿ, ಸಿರುಗುಪ್ಪ, ಹಡಗಲಿ ಹಾಗೂ ಕೊಟ್ಟೂರು ತಾಲೂಕಿನ ಗ್ರಾಮೀಣ ಭಾಗಗಳ ಅಲ್ಲಲ್ಲಿ ತುಂತುರು ಮಳೆಯಾಗಿದೆ.

ಸಿರುಗುಪ್ಪ ಮತ್ತು ಆದೋನಿ ನಗರಗಳನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯ ರಾರಾವಿ ಗ್ರಾಮದ ಬಳಿ ಇರುವ ಯಲ್ಲಮ್ಮನ ಹಳ್ಳದ ನೂತನ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಹಳ್ಳಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತು ಮೇಲ್ಭಾಗದಲ್ಲಿ ಹೆಚ್ಚಿನ ಮಳೆಯಾಗಿ ನುಗ್ಗಿ ಬಂದ ನೀರಿನ ಪ್ರವಾಹಕ್ಕೆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದ್ದರಿಂದ ಅಂತಾರಾಜ್ಯ ಸಂಚಾರಕ್ಕೆ ಹಾಗೂ ಈ ರಸ್ತೆ ಸಂಪರ್ಕ ಕಲ್ಪಿಸುವ ಗ್ರಾಮಗಳಿಗೆ ತೊಂದರೆಯಾಗಿ ಸಂಪರ್ಕ ಕಡಿತಗೊಂಡಿದೆ.