Heavy Rain: ಎರಡೇ ಎರಡು ತಾಸು ಸುರಿದ ಮಳೆಗೆ ಕಾಫಿನಾಡು ತತ್ತರ

  • ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರೀ ಮಳೆ
  • ಕೊಪ್ಪ ತಾಲೂಕಿನ ಜಯಪುರ, ಎನ್.ಆರ್.ಪುರದ ಬಾಳೆಹೊನ್ನೂರು ಸುತ್ತಮುತ್ತ ಧಾರಾಕಾರ ಮಳೆ
  • ನೋಡು ನೋಡುತ್ತಿದ್ದಂತೆ ನದಿಗಳಂತಾದ  ರಸ್ತೆಗಳು
  • ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ
Heavy rain fall in Chikkamagaluru it was shaken by the rain NR pura Mudigere

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.31): ಗಣೇಶನ ಆಗಮನದೊಂದಿಗೆ ಭೀಕರ ಮಳೆಗೆ ಕಾಫಿನಾಡು ನಲುಗಿ ಹೋಗಿದೆ.ಮುಸ್ಸಂಜೆ ಆಗ್ತಿದ್ದಂತೆ ಜಿಲ್ಲೆಯ ಹಲವೆಡೆ ರಣ ಭೀಕರ ಮಳೆ ಸುರಿದಿದೆ, ಕೊಪ್ಪ ತಾಲೂಕಿನ ಜಯಪುರದಲ್ಲಿ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ.ನೋಡ ನೋಡುತ್ತಿದ್ದಂತೆ ನದಿಂತಾದ ರಸ್ತೆಗಳ ಕಂಡು ಭೀತಿ ಉಂಟಾಗಿತ್ತು. ಎರಡೇ ಎರಡು ಗಂಟೆ ಸುರಿದ ರಣಮಳೆಗೆ(Heavy rainfall) ಮಲೆನಾಡು (Malenadu) ಅಲ್ಲೋಲ-ಕಲ್ಲೋಲವಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಎನ್.ಆರ್.ಪುರ(N.R.Pura), ಕೊಪ್ಪ(Koppa), ಶೃಂಗೇರಿ(Shringeri)ಯಲ್ಲಿ ಮಳೆಯ ಅಬ್ಬರಕ್ಕೆ ಜನಜೀವನ ನಲುಗಿಹೋಗಿದೆ. ಮನೆಗಳು ಜಲಾವೃತಗೊಂಡಿವೆ. ಮಧ್ಯಾಹ್ನ ಮೂರು ಗಂಟೆಯ ಬಳಿಕ ಆರಂಭವಾದ ಮಳೆ; ಎರಡೇ ಎರಡು ಗಂಟೆಯಲ್ಲಿ ಸುರಿದ ಸುಮಾರು ಏಳು ಇಂಚಿನಷ್ಟು ಮಳೆ ಮಲೆನಾಡಿಗರನ್ನ ಹೈರಾಣಾಗಿಸಿದೆ. 

ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೊಪ್ಪ ತಾಲೂಕಿನ ಜಯಪುರ(Jayapura) ಸುತ್ತಮುತ್ತ ಸುರಿದ ಮಳೆಗೆ ನೀರು ರಸ್ತೆಯಲ್ಲಿ ಎರಡ್ಮೂರು ಅಡಿ ಎತ್ತರದಲ್ಲಿ ನದಿಯಂತೆ ಹರಿದಿದೆ. ಗುಡ್ಡಗಾಡು ಪ್ರದೇಶದಲ್ಲಿ ಧಾರಾಕಾರವಾಗಿ ಸುರಿದ ಮಳೆ ನೀರು ಮಣ್ಣಿನ ಜೊತೆ ನುಗ್ಗಿದ ಪರಿಣಾಮ ಜಯಪುರ ಪಟ್ಟಣದ ಅಕ್ಷರಶಃ ಜಲಾವೃತಗೊಂಡಿದೆ. ಕೊಪ್ಪ ತಾಲೂಕಿನ ದಯಂಬಳ್ಳಿ ಗ್ರಾಮ(Dayamballi Village)ದ ಬಳಿ ಭಾರೀ ಮಳೆಗೆ ಕಳೆದ ನಾಲ್ಕು ದಿನಗಳ ಹಿಂದಷ್ಟೆ ನಾಟಿ ಮಾಡಿದ್ದ ಬತ್ತದ ಗದ್ದೆ ಮಳೆ ನೀರಲ್ಲಿ ಕೊಚ್ಚಿ ಹೋಗಿವೆ. ಹತ್ತಾರು ಎಕರೆ ಕಾಫಿ-ಅಡಿಕೆ ತೋಟ ಕೂಡ ಮಳೆ ನೀರಿನಲ್ಲಿ ಜಲಾವೃತಗೊಂಡಿದೆ. 

ಭಾರೀ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಅಡಿಗಟ್ಟಲೇ ನೀರು ನಿಂತ ಪರಿಣಾಮ ವಾಹನ ಸವಾರರು ಗಂಟೆಗಟ್ಟಲೇ ಪರದಾಡಿದ್ದಾರೆ. ಕಳೆದ 15 ದಿನಗಳಿಂದ ಬಿಡುವು ನೀಡಿದ್ದ ವರುಣದೇವ; ಇಂದು ಎರಡೇ ಎರಡು ಗಂಟೆ ಅಬ್ಬರಿಸಿ ಬೊಬ್ಬಿರಿದ ಪರಿಣಾಮ ಮಲೆನಾಡು ಅಕ್ಷರಶಃ ಮುಳುಗಿಹೋಗಿದೆ. ಕೊಪ್ಪ ತಾಲೂಕಿನ ಜಯಪುರ ಸುತ್ತಮುತ್ತ ಮಳೆ ನೀರು ತಗ್ಗುಪ್ರದೇಶಗಳಿಗೆ ನುಗ್ಗಿದ ಪರಿಣಾಮ ನೀರನ್ನ ಹೊರಹಾಕಲು ಸ್ಥಳಿಯರು ಹರಸಾಹಸ ಪಟ್ಟಿದ್ದಾರೆ. ಭಾರೀ ಗಾಳಿ-ಮಳೆಯ ಪರಿಣಾಮ ಗ್ರಾಮೀಣ ಭಾಗದಲ್ಲಿ ಮುಂಜಾಗೃತ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನ ಸ್ಥಗಿತಗೊಳಿಸಲಾಗಿದೆ. ಜಯಪುರದಲ್ಲಿ ಎರಡೇ ಎರಡು ಗಂಟೆಗೆ ಅಂದಾಜು 88 ಮಿ.ಮೀ. ಮಳೆಯಾಗಿದೆ. ಕಳೆದ ಎರಡು ದಶಕಗಳಲ್ಲೇ ಈ ಮಳೆ ದಾಖಲೆ ಮಳೆಯಾಗಿದೆ. ಧಾರಾಕಾರ ಮಳೆಯಿಂದ ಬೆಟ್ಟಗುಡ್ಡಗಳ ಅಂಚಿನ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. 

Karnataka Rain: ಮುಂದಿನ 24 ಘಂಟೆ ರಾಜ್ಯಾದ್ಯಂತ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

 ಮನೆಗಳಿಗೆ ನುಗ್ಗಿದ‌ ನೀರು:

ಮೂಡಿಗೆರೆ(Mudigere)ಯಲ್ಲೂ ಭಾರೀ ಮಳೆ ಸುರಿದು ಮೇಗಲ್‍ಪೇಟೆ(Meghalpete)ಯಲ್ಲಿ ನಾಲ್ಕು ಮನೆಗಳಿಗೆ ನೀರು ನುಗ್ಗಿದೆ. ನೀರು ನುಗ್ಗಿದ ಪರಿಣಾಮ ಮನೆಯವರು ನೀರನ್ನ ಹೊರಹಾಕಲು ಹರಸಾಹನ ಪಟ್ಟಿದ್ದಾರೆ. ಮೆಸ್ಕಾಂ(MESCOM) ಇಲಾಖೆಯಿಂದ ನೀರನ್ನ ನುಗ್ಗಿದ ನೀರು ಮನೆಗಳಿಗೆ ನುಗ್ಗಿದ್ದರಿಂದ ಸ್ಥಳಿಯರು ಮೆಸ್ಕಾಂ ಇಲಾಖೆ ವಿರುದ್ಧ ಅಸಮಾಧಾಣ ಹೊರಹಾಕಿದ್ದಾರೆ.

Latest Videos
Follow Us:
Download App:
  • android
  • ios