Asianet Suvarna News Asianet Suvarna News

ಕೊಪ್ಪಳದಲ್ಲಿ ಮಳೆ ಗಾಳಿ ಅವಾಂತರ: ಜನ ಕಂಗಾಲು

ಬಿಸಿಲಿನ ತಾಪಮಾನಕ್ಕೆ ರೋಸಿ ಹೋಗಿದ್ದ ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದೆ. ಇದರ ಮಧ್ಯೆ ಭಾನುವಾರ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಗೆ ಇಲ್ಲೊಂದು ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. 

heavy rain causes problem in koppal district gvd
Author
Bangalore, First Published May 9, 2022, 7:30 PM IST

ವರದಿ: ದೊಡ್ಡೇಶ್ ಯಲಿಗಾರ್, ಏಶಿಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ

ಕೊಪ್ಪಳ (ಮೇ.09): ಬಿಸಿಲಿನ ತಾಪಮಾನಕ್ಕೆ ರೋಸಿ ಹೋಗಿದ್ದ ಕರ್ನಾಟಕದಲ್ಲಿ (Karnataka) ಅಲ್ಲಲ್ಲಿ ಮಳೆಯಾಗುತ್ತಿದೆ. ಇದರ ಮಧ್ಯೆ ಭಾನುವಾರ ರಾತ್ರಿ ಸುರಿದ ಭಾರೀ ಮಳೆ (Rain) ಹಾಗೂ ಬಿರುಗಾಳಿಗೆ ಇಲ್ಲೊಂದು ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಅಷ್ಟಕ್ಕೂ ಯಾವ ಜಿಲ್ಲೆಯಲ್ಲಿ ಮಳೆ ಅವಾಂತರ ಆಗಿರುವುದು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.

ಎಲ್ಲಿ ಮಳೆ-ಗಾಳಿ ಅವಾಂತರ ಆಗಿರುವುದು: ಕೊಪ್ಪಳ (Koppal) ಜಿಲ್ಲೆ ಅಂದರೆ ಸಾಕು ನಮಗೆ ನೆನಪು ಬರುವುದು ಇದು ಬಿಸಿಲು ನಾಡು ಎಂದು. ಈ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತುಂಬಾ ಕಡಿಮೆ. ಜೊತೆಗೆ ಇಲ್ಲಿ ಬರವೇ ಹೆಚ್ಚಾಗಿ ಇರುತ್ತದೆ. ಆದರೆ ಈ ವರ್ಷ ಮಾತ್ರ ಕೊಪ್ಪಳ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದೆ. ಅದೇ ರೀತಿ ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಭಾನುವಾರ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ.

Koppal: ವಿದ್ಯುತ್ ಅವಘಡಕ್ಕೆ ತಾಯಿ, ಮಕ್ಕಳು ಸೇರಿ ಮೂವರ ಬಲಿ

ಏನೇಲ್ಲಾ ಅವಾಂತರಗಳಾಗಿವೆ: ನಿನ್ನೆ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಅದರಲ್ಲಿಯೂ ವಿಶೇಷವಾಗಿ  ಬಾರಿ ಸುಳಿಗಾಳಿಗೆ 100 ಅಧಿಕ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಜೊತೆಗೆ ಸಾವಿರಾರು ಬೇವಿನ, ಜಾಲಿ ಮರಗಳು ಧರೆಗುರುಳಿವೆ.

ಮೊಬೈಲ್ ಟಾವರ್ ನೆಟ್‌ವರ್ಕ್ ಸ್ಥಗಿತ: ಭಾನುವಾರ ರಾತ್ರಿ ಸುರಿದ ಮಳಡ ಹಾಗೂ ಬಿರುಗಾಳಿಗೆ ಕೇವಲ ವಿದ್ಯುತ್ ಕಂಬ ಜೊತೆಗೆ ಮರಗಿಡಗಳು ಬಿಳುವುದರ ಜೊತೆಗೆ ಮೊಬೈಲ್ ಟವರ್ ನೆಟ್‌ವರ್ಕ್ ಕೂಡ ಸ್ಥಗಿತವಾಗಿದೆ. ಕೊಪ್ಪಳ ತಾಲೂಕಿನ ಮೋರನಾಳ ಮತ್ತೂರು ಗ್ರಾಮದಲ್ಲಿ ವಿದ್ಯುತ್ ಸ್ಥಗಿತದ ಹಿನ್ನಲೆಯಲ್ಲಿ ಮೊಬೈಲ್ ಟವರ್ ನೆಟ್‌ವರ್ಕ್ ಸ್ಥಗಿತಗೊಂಡಿದೆ. ಇದರಿಂದಾಗಿ ಜನರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಹಾಗೂ ಬಿರುಗಾಳಿ ಬಿಸುತ್ತಿದೆ. ಇದರಿಂದ ಜನರು ಪಡಬಾರದ ಕಷ್ಟಪಡುತ್ತಿದ್ದಾರೆ. ಗಾಳಿ ಬಂದರೆ ಸಾಕು ಯಾಕಪ್ಪಾ ಈ ಗಾಳಿ ಬರುತ್ತೆ ಎಂದು ಭಯಪಡುವ ಪರಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕದಲ್ಲಿ ಬೇಸಿಗೆ ಮಳೆ ಆರ್ಭಟ: ರಾಜ್ಯದ ಕೆಲಭಾಗಗಳಲ್ಲಿ ಅಕಾಲಿಕ ಮಳೆ ಮುಂದುವರಿದಿದ್ದು ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ಕೆಲಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗುವುದರೊಂದಿಗೆ ಕೃಷಿಗೂ ಅಪಾರ ನಷ್ಟವಾಗಿದೆ. ಒಟ್ಟಾರೆ 9 ಮನೆಗಳು ಕುಸಿದಿದ್ದು, 20ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಪ್ಪಳ ಜಿಲ್ಲೆಯ ಕಾರಟಗಿ, ಕನಕಗಿರಿ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಭತ್ತ ಮತ್ತು ತೋಟಗಾರಿಕಾ ಬೆಳೆಗಳಿಗೆ ತೀವ್ರ ಹಾನಿ ಸಂಭವಿಸಿದೆ. ಹೂವಿನಹಡಗಲಿ ಮತ್ತು ಹಿರೇಹಡಗಲಿಗಳಲ್ಲಿ ಭತ್ತ, ಬಾಳೆ, ದಾಳಿಂಬೆ ಹಾಗೂ ಪಪ್ಪಾಯಿ ಬೆಳೆಗಳು ಗಾಳಿಮಳೆಗೆ ನಾಶವಾಗಿವೆ. 

ಕೊಪ್ಪಳದ 60 ಗ್ರಾಮ ಎಣ್ಣೆ ಮುಕ್ತ, ಮಾರಿದ್ರೆ ಬೀಳುತ್ತೆ ದಂಡ

9 ಮನೆಗಳು ಕುಸಿದಿದ್ದು 50ಕ್ಕೂ ಹೆಚ್ಚು ಗಿಡ ಮರಗಳು ನೆಲಕ್ಕುರಳಿವೆ. ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ 100ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು, 10ಕ್ಕೂ ಹೆಚ್ಚು ವಿದ್ಯುತ್‌ ಪರಿವರ್ತಕಗಳಿಗೆ ಹಾನಿಯಾಗಿವೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಆಲಿಕಲ್ಲು ಮಳೆ ಗಾಳಿಗೆ 40ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಕಟಾವಿನ ಹಂತಕ್ಕೆ ಬಂದಿರುವ ದಾಳಿಂಬೆ, ಮಾವು ಬೆಳೆ ನೆಲಕ್ಕಪ್ಪಳಿಸಿವೆ. ಇದರೊಂದಿಗೆ ಮೈಸೂರು ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ಶುಕ್ರವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆ ಬಿದ್ದಿದೆ. ಕೊಡಗಿನ ಕೆಲವೆಡೆಯೂ ತುಂತುರು ಮಳೆಯಾಗಿದೆ.

Follow Us:
Download App:
  • android
  • ios