Asianet Suvarna News Asianet Suvarna News

Bidar: ಭಾರೀ ಮಳೆಗೆ ಮದನೂರು ಗ್ರಾಮದ ಜನ ತತ್ತರ

ಗಡಿ ಜಿಲ್ಲೆಯ ಬೀದರ್‌ನ ಕಮಲನಗರ ತಾಲೂಕಿನಲ್ಲಿ ಭಾರಿ ಮಳೆ ಸುರಿದು ಹಲವೆಡೆ ಅವಾಂತರ ಸೃಷ್ಟಿಸಿದೆ. ಸಾಯಂಕಾಲ ಸಮಯದಲ್ಲಿ ಧಾರಾಕಾರ ಮಳೆಗೆ ಮದನೂರು ಗ್ರಾಮದ ಊರಿಗೆ ಹೋಗುವ ರಸ್ತೆಗಳು ತೊರೆಯಂತಾಗಿ ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿತ್ತು. 

Heavy Rain at Madanuru Village In Bidar gvd
Author
Bangalore, First Published Jul 31, 2022, 10:33 PM IST

ವರದಿ: ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೀದರ್

ಬೀದರ್ (ಜು.31): ಗಡಿ ಜಿಲ್ಲೆಯ ಬೀದರ್‌ನ ಕಮಲನಗರ ತಾಲೂಕಿನಲ್ಲಿ ಭಾರಿ ಮಳೆ ಸುರಿದು ಹಲವೆಡೆ ಅವಾಂತರ ಸೃಷ್ಟಿಸಿದೆ. ಸಾಯಂಕಾಲ ಸಮಯದಲ್ಲಿ ಧಾರಾಕಾರ ಮಳೆಗೆ ಮದನೂರು ಗ್ರಾಮದ ಊರಿಗೆ ಹೋಗುವ ರಸ್ತೆಗಳು ತೊರೆಯಂತಾಗಿ ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಇನ್ನು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ  ಅಪೂರ್ಣವಾಗಿದ್ದಕ್ಕೆ  ರಸ್ತೆಗಳಲ್ಲಾ ಜಲಾವೃತಗೊಂಡು ಹಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿ ಭಾರಿ ಮನೆಯಲ್ಲಿರುವ ದವಸ ಧಾನ್ಯಗಳು ಹಾನಿಯಾಗುವಂತೆ ಮಾಡಿದೆ. 

ಕಮಲ ನಗರದಿಂದ ಮದನೂರು ಸೇರಿದಂತೆ ಬೇರೆ ಬೇರೆ ಗ್ರಾಮಕ್ಕೆ ತೆರಳಲು ಜನರ ಪರದಾಟಬೇಕಾದಂತ ಪರಿಸ್ಥಿತಿ ಮಳೆರಾಯನ ಅವಾಂತರಕ್ಕೆ ನಿರ್ಮಾಣಗೊಂಡಿತ್ತು. ಇದೀಗ ಮತ್ತೊಮ್ಮೆ ಜಿಲ್ಲೆಯ ಒಂದೇ ಭಾಗದಲ್ಲಿ ಭಾರಿ ಮಳೆ ಸುರಿದಿದೆ. ಕಳೆದ ಎರಡು ವಾರಗಳ ಹಿಂದೆ ಸುಮಾರು ಒಂದು ವಾರಗಳ ಕಾಲ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಆರ್ಭಟ ಜೋರಾಗಿತ್ತು. ಈ ವೇಳೆ ಜಿಲ್ಲೆಯ ಕೆಲವೇ ಕೆಲ ಭಾಗಗಳಲ್ಲಿ 120 ರಿಂದ 150 ಮಿ.ಮೀವರೆಗೂ ಮಳೆಯಾಗಿತ್ತು. ಇದರಿಂದ ಸಾಕಷ್ಟು ಕಡೆ ಜನ ಜೀವನ ಅಸ್ತವ್ಯಸ್ತಗೊಂಡು ಜನರ ಪರದಾಡುವಂತೆ ಮಾಡಿತ್ತು. 

ಆಧುನಿಕ ಜೀವನಕ್ಕೆ ವಿದ್ಯುತ್‌ ಅವಶ್ಯಕತೆ ದ್ವಿಗುಣ: ಕೇಂದ್ರ ಸಚಿವ ಖೂಬಾ

ಇಂದು ಕೂಡ ಬೆಳಿಗ್ಗೆ ಮೋಡಗಳು ಕಾಣದೇ ಇದ್ದರೂ ಏಕಾಏಕಿ ಮಧ್ಯಾಹ್ನದಲ್ಲಿ ಆಕಾಶದಲ್ಲಿ ಮೋಡಗಳು ತುಂಬಿಕೊಂಡ ಸಂಜೆ ಮಳೆ ಸಿಂಚನ ಆರಂಭಗೊಂಡಿತ್ತು. ಈ ವೇಳೆ ಮತ್ತೊಮ್ಮೆ ಕಮಲನಗರ ತಾಲೂಕಿನ ಕೆಲ ಭಾಗದಲ್ಲಿ ಭಾರಿ ಮಳೆಯಾಗಿದೆ. ಅದರಲ್ಲೂ ಮದನೂರು ಗ್ರಾಮದಲ್ಲಿ ವರುಣನ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದರು.  ಗ್ರಾಮದ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ಅಡ್ಡಿಯಾದರೇ ಮತ್ತೊದೆಡೆ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಮನೆಯ ಸಾಮಗ್ರಿಗಳು ಹಾನಿಯಾವಂತೆ ಮಾಡಿದೆ.  ಇನ್ನು ಔರಾದ್ ಮತ್ತು ಕಲಮನಗರ ತಾಲೂಕುಗಳಲ್ಲಿ ನಿರಂತರ ಮಳೆಯಿಂದ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ನೀರು ನಿಂತುಕೊಂಡು ಮುಂಗಾರು- ಹಂಗಾಮಿ ಬೆಳೆಗಳು ಕೊಳೆತು ಹೋಗುವ ಸ್ಥಿತಿಗೆ ಬಂದಿವೆ. 

ಬೀದರ್ ನಲ್ಲಿ ಜೆಡಿಎಸ್ ಪಕ್ಷ ಸಂಘಟನೆ; ಈ ಬಾರಿ ಬಿಜೆಪಿ ಆಟ ನಡೆಯಲ್ಲ -ಹೆಚ್‌ಡಿಕೆ

ಒಂದು ವಾರದ ನಿರಂತರ ಮಳೆಯ ಬಳಿಕ ಎರಡು ದಿನ ಶಾಂತವಾಗಿದ್ದ ಮಳೆರಾಯ ಮತ್ತೆ ಎರಡು ದಿನ ಆರ್ಭಟಿಸಿದ್ದು, ಈಗ ಮತ್ತೆ ಮೇಲಿಂದ ಮೇಲೆ ಬಂದು ಹೋಗುತ್ತಿರುವ ಮಳೆಯಿಂದ ಹಳ್ಳ-ಕೊಳ್ಳ, ನದಿಗಳು, ತಗ್ಗು ಪ್ರದೇಶದಲ್ಲಿರುವ ಹೊಲ- ಗದ್ದೆಗಳಲ್ಲಿ ನಿಂತ ಮಳೆ ನೀರು ಬೇರೆ ಕಡೆ ಹರಿದುಕೊಂಡು ಹೋಗದೇ ಹೊಲಗಳಲ್ಲೇ ನಿಂತುಕೊಂಡಿದಕ್ಕೆ ಸೋಯಾ, ತೊಗರಿ, ಉದ್ದು- ಹೆಸರು ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ಕೊಳೆತು ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ರೈತರ ಕಣ್ಣಲ್ಲಿ ನೀರು ತರಿಸಿದೆ. ಸದ್ಯ ರಾಜ್ಯ ಸರ್ಕಾರ ಇದೀಗ ರೈತರ ನೆರವಿಗೆ ಬರಬೇಕಾಗಿದೆ.

Follow Us:
Download App:
  • android
  • ios