Asianet Suvarna News Asianet Suvarna News

ಆಧುನಿಕ ಜೀವನಕ್ಕೆ ವಿದ್ಯುತ್‌ ಅವಶ್ಯಕತೆ ದ್ವಿಗುಣ: ಕೇಂದ್ರ ಸಚಿವ ಖೂಬಾ

ಉಜ್ವಲ ಭವಿಷ್ಯ- ಉಜ್ವಲ ಭಾರತ್‌ ವಿದ್ಯುತ್‌ ಮಹೋತ್ಸವದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ

Union Minister Bhagwanth Khuba Talks over Electricity grg
Author
Bengaluru, First Published Jul 31, 2022, 2:50 PM IST

ಬೀದರ್‌(ಜು.31):  ಮನುಷ್ಯನ ಆಧುನಿಕ ಜೀವನಕ್ಕೆ ನೀರು, ಆಹಾರದಷ್ಟೇ ವಿದ್ಯುತ್‌ ಅವಶ್ಯಕತೆ ಬಹಳ ಇದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು. ಶನಿವಾರ ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಉಜ್ವಲ ಭಾರತ, ಉಜ್ವಲ ಭವಿಷ್ಯ ವಿದ್ಯುತ್‌ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಪವನ ಶಕ್ತಿ, ಸೌರ ಶಕ್ತಿ, ಜಲ ವಿದ್ಯುತ್‌ ಶಕ್ತಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಭಾರತ ಸರ್ಕಾರ ಕೆಲಸ ಮಾಡುತ್ತಿದೆ. ಶೇ. 40ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳಿಂದ 175 ಮೆಗಾವ್ಯಾಟ್‌ ವಿದ್ಯುತ್‌ನ್ನು ಭಾರತ ಉತ್ಪಾದನೆ ಮಾಡುತ್ತಿದೆ. 2030ರ ವೇಳೆಗೆ 500 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ನವೀಕರಿಸಬಹುದಾದ ಇಂಧನಗಳ ಮೂಲದಿಂದ ಉತ್ಪಾದಿಸಲಾಗುವದು. ಭಾರತದಲ್ಲಿ ಈ ಹಿಂದೆ ಎರಡು ಲಕ್ಷ ಮೆ. ವ್ಯಾಟ್‌ ವಿದ್ಯುತ್‌ ಸರಾಸರಿಯಾಗಿ ಉತ್ಪಾದನೆಯಾಗುತ್ತಿತು.್ತ ಈಗ ನಾಲ್ಕು ಲಕ್ಷ ಮೆಗಾವ್ಯಾಟ್‌ ಉತ್ಪಾದನೆಯಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಭಾರತ ಅದ್ಭುತ ಸಾಧನೆಗೈದಿದ್ದು, ಹೆಚ್ಚಿನ ಹೂಡಿಕೆ ಮಾಡಿ ವಿದ್ಯುತ್‌ ಶಕ್ತಿ ಕ್ರೂಡೀಕರಿಸಲಾಗುತ್ತಿದೆ ಎಂದರು.

ಕಳೆದ ಎರಡು ತಿಂಗಳ ಹಿಂದೆ ಪ್ರತಿ ಮನೆಯ ಮೇಲೆ ಸೋಲಾರ ಅಳವಡಿಸಿಕೊಳ್ಳುವ ಕಾರ್ಯಕ್ರಮ ಮಾಡಲಾಗಿತ್ತು. ಪ್ರತಿಯೊಬ್ಬರ ಮನೆಯ ಮೇಲೆ ಸೋಲಾರ್‌ ಅಳವಡಿಸಿಕೊಳ್ಳಬೇಕು ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್‌ 13 ರಿಂದ ಆ.15 ರವರೆಗೆ ಮನೆಯ ಮೇಲೆ ಧ್ವಜ ಹಾರಿಸಿ ಹರ್‌ ಘರ್‌ ತಿರಂಗಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು.

ಬೀದರ್ ನಲ್ಲಿ ಜೆಡಿಎಸ್ ಪಕ್ಷ ಸಂಘಟನೆ; ಈ ಬಾರಿ ಬಿಜೆಪಿ ಆಟ ನಡೆಯಲ್ಲ -ಹೆಚ್‌ಡಿಕೆ

ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ಹಳ್ಳಿಗಳಲ್ಲಿನ ರೈತರಿಗೆ ಕೊಳವೆಬಾವಿ ಕೊರೆದ ಮೇಲೆ ಅವುಗಳಿಗೆ ಬೇಗ ವಿದ್ಯುತ್‌ ಸಂಪರ್ಕ ಕೊಡುವುದಿಲ್ಲ ಹಾಗಾಗಿ ರೈತರಿಗೆ ಸಮಸ್ಯೆಯಾಗುತ್ತದೆ ಇದನ್ನು ಸರಿಪಡಿಸಬೇಕೆಂದು ಜೆಸ್ಕಾಂ ಅ​ಧಿಕಾರಿಗಳಿಗೆ ಹೇಳಿದರು.

ಶಾಸಕ ರಹೀಮ್‌ ಖಾನ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯುತ್‌, ಆಸ್ಪತ್ರೆ, ಪೊಲೀಸ್‌ ಸೇರಿದಂತೆ ಕೆಲವು ಅವಶ್ಯಕ ಇಲಾಖೆಗಳಿದ್ದು ಅವು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಜನರಿಗೆ ಬಹಳ ತೊಂದರೆ ಆಗುತ್ತದೆ. ಕಳೆದ 10 ವರ್ಷಗಳಲ್ಲಿ ಕೆಇಬಿಯಲ್ಲಿ ಬಹಳಷ್ಟುಬದಲಾವಣೆಗಳಾಗಿವೆ. ಮುಂದಿನ ದಿನಮಾನಗಳಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿ ಜನರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ರೌಫೋದ್ದಿನ್‌ ಕಚೇರಿವಾಲೆ, ಬುಡಾ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿಕಾರಿ ಡೆಕ್ಕಾ ಕಿಶೋರಬಾಬು, ಜೆಸ್ಕಾಂ ಬೀದರ್‌ ವೃತ್ತ್ತ ಅ​ಧೀಕ್ಷಕ ಎಂಜಿನಿಯರ್‌ ಸಚಿನ್‌ ಹುಂಡೆಕರ್‌ ಇತರರು ಉಪಸ್ಥಿತರಿದ್ದರು.
 

Follow Us:
Download App:
  • android
  • ios