ಹುಬ್ಬಳ್ಳಿ [ಆ.08]: ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹಲವು ಜಿಲ್ಲೆಗಳು ಜಲಾವೃತವಾಗುತ್ತಿದೆ. ಪ್ರವಾಹ ಪರಿಸ್ಥಿತಿ ಎದುರಾಗಿ ಜನರು ತತ್ತರಿಸುತ್ತಿದ್ದಾರೆ. 

ಹುಬ್ಬಳ್ಳಿಯಲ್ಲಿಯೂ ಕೂಡ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಇಲ್ಲಿನ ಬೆಣ್ಣಿಹಳ್ಳದಲ್ಲಿ ನೀರು ಉಕ್ಕಿ ಹರಿಯುತ್ತಿದೆ. 

ಪ್ರವಾಹ ಪರಿಸ್ಥಿಯಿ ನಿರ್ಮಾಣವಾಗಿದ್ದು, ನದಿಯಲ್ಲಿ ಸಿಲುಕಿ ಸ್ವಾಮೀಜಿಯೋರ್ವರು ರಕ್ಷಣೆಗೆ ಮೊರೆಯಿಟ್ಟಿದ್ದಾರೆ. ಪ್ರವಾಹದಲ್ಲಿ ಸಿಲುಕಿದ ಹೆಬಸೂರು ಗ್ರಾಮದ ಸಿದ್ದಯ್ಯ  ಅಜ್ಜ ಸ್ವಾಮೀಜಿ ಹಾಗೂ ಕೆಲ ಭಕ್ತರು ನೆರವಿಗೆ ಮೊರೆ ಇಟ್ಟಿದ್ದಾರೆ. 

ಮಠದ ಸುತ್ತಲು ನೀರು ತುಂಬಿಕೊಂಡು ಹೊರಬರಲಾಗದೆ ಪರದಾಡುತ್ತಿದ್ದು, ಮಠದ ಸುತ್ತಲು ಭಾರೀ ಪ್ರಮಾಣದಲ್ಲಿ ನೀರು ನಿಂತಿದೆ. ಆಳವಾದ ಕಂದಕ ನಿರ್ಮಾಣವಾದ ಹಿನ್ನೆಲೆ ದ್ವೀಪ ಪ್ರದೇಶದಂತಾಗಿದೆ.