ಮುಳುಗಿದ ಯಲ್ಲಮ್ಮ ದೇವಾಲಯ : ಹಲವೆಡೆ ಸಂಪರ್ಕ ಕಡಿತ

ರಾಜ್ಯ ಪ್ರವಾಹಕ್ಕೆ ನಲುಗುತ್ತಿದೆ. ಜಿಲ್ಲೆಗಳು ಭಾರೀ ಮಳೆಗೆ ತತ್ತರಿಸುತ್ತಿವೆ. ಬಿಟ್ಟು ಬಿಡದೇ ವರುಣ ಆರ್ಭಟಿಸುತ್ತಿದ್ದಾನೆ. ಕಲಬುರಗಿಯಲ್ಲಿ ವಿವಿದ ಹಳ್ಳಿಗಳು ಜಲಾವೃತವಾಗಿವೆ. ಹಲವೆಡೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. 

Heavy Monsoon Rain Continued Villages submerged In Kalaburagi

ಕಲಬುರಗಿ [ಆ.09]: ಒಂದೆಡೆ ರಾಜ್ಯದಲ್ಲಿ ಮಳೆಯ ರುದ್ರನರ್ತನವಾಗುತ್ತಿದ್ದರೆ ಅತ್ತ ಮಹಾರಾಷ್ಟ್ರದಲ್ಲಯೂ ಬಿಟ್ಟು ಬಿಡದೇ ವರುಣ ಆರ್ಭಟಿಸುತ್ತಿದ್ದಾನೆ. 

ಕಲಬುರಗಿಯಲ್ಲಿ ಭಾರೀ ಮಳೆಯಿಂದಾಗಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.  ಮಹರಾಷ್ಟ್ರದಿಂದ 2 ಲಕ್ಷ 65 ಸಾವಿರ ಕ್ಯೂಸೆಕ್ಸ್ ನೀರು ಭೀಮಾ ನದಿಗೆ ಬಿಡಲಾಗಿದೆ. ಇದರ ಪರಿಣಾಮ ಭೀಮಾ ನದಿ ತೀರದ ಕಲಬುರ್ಗಿ ಜಿಲ್ಲೆಯ 21 ಹಳ್ಳಿಗಳಿಗೆ ಮುಳುಗುವ ಭೀತಿಯಲ್ಲಿವೆ. 

ಭಾರೀ ಮಳೆಯಿಂದ ಅಫಜಲ್ಪುರ ತಾಲೂಕಿನ ಮಣ್ಣೂರು ಗ್ರಾಮದ ಭೀಮಾ ನದಿ ತೀರದಲ್ಲಿರುವ ಯಲ್ಲಮ್ಮ ದೇವಸ್ಥಾನ ಮುಳುಗಡೆಯಾಗಿದೆ. ಮಣ್ಣೂರು ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ.

ಪ್ರಸಿದ್ಧ ದತ್ತಾತ್ರೇಯ ಕ್ಷೇತ್ರ ದೇವಲ ಗಾಣಗಾಪುರದಿಂದ ಜೇವರ್ಗಿಗೆ ತೆರಳುವ ಮಾರ್ಗದಲ್ಲಿರುವ ಸೇತುವೆ ಮುಳುಗಡೆಯಾಗಿದ್ದು ಸಂಪರ್ಕ ಕಡಿತಗೊಂಡಿದೆ. ಘತ್ತರಗಾ ದಿಂದ ಮಂದೇವಾಲ ಸಂಪರ್ಕ ಕಡಿತಗೊಂಡಿದೆ.

Latest Videos
Follow Us:
Download App:
  • android
  • ios