Asianet Suvarna News Asianet Suvarna News

Tumakur : ಆಭಾ ಯೋಜನೆಯಡಿ ಎಲ್ಲರಿಗೂ ಆರೋಗ್ಯ ಸೇವೆ

ಆರೋಗ್ಯ ಕ್ಷೇತ್ರವನ್ನು ಮತ್ತಷ್ಟುಡಿಜಿಟಲೀಕರಣಗೊಳಿಸುವ ಸಲುವಾಗಿ ಮತ್ತು ದೇಶದ ಪ್ರತಿಯೊಬ್ಬ ಪ್ರಜೆಗೂ ಸಕಾಲದಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಅಕೌಂಟ್‌ (ಆಭಾ) ಯೋಜನೆಯಡಿ ದೇಶದ ಯಾವುದೇ ನೋಂದಾಯಿತ ಆಸ್ಪತ್ರೆಗಳಲ್ಲಿ ವಾರ್ಷಿಕ 5 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್‌ ತಿಳಿಸಿದರು.

Healthcare for all under Aaba Yojana snr
Author
First Published Dec 15, 2022, 4:49 AM IST

  ತುಮಕೂರು (ಡಿ. 15):  ಆರೋಗ್ಯ ಕ್ಷೇತ್ರವನ್ನು ಮತ್ತಷ್ಟುಡಿಜಿಟಲೀಕರಣಗೊಳಿಸುವ ಸಲುವಾಗಿ ಮತ್ತು ದೇಶದ ಪ್ರತಿಯೊಬ್ಬ ಪ್ರಜೆಗೂ ಸಕಾಲದಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಅಕೌಂಟ್‌ (ಆಭಾ) ಯೋಜನೆಯಡಿ ದೇಶದ ಯಾವುದೇ ನೋಂದಾಯಿತ ಆಸ್ಪತ್ರೆಗಳಲ್ಲಿ ವಾರ್ಷಿಕ 5 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್‌ ತಿಳಿಸಿದರು.

ಆರೋಗ್ಯ ಇಲಾಖೆ (Health Department)  ವತಿಯಿಂದ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದ ಆಭಾ ಕಾರ್ಡ್‌ (Aaba Card)  ನೋಂದಣಿ ಕಾರ‍್ಯಕ್ರಮದಲ್ಲಿ ಮಾತನಾಡಿದರು. ದೇಶಾದ್ಯಂತ ನೋಂದಾಯಿತ ಆಸ್ಪತ್ರೆಗಳಲ್ಲಿ ಯಾವುದೇ ಶುಲ್ಕವಿಲ್ಲದೆ ಬಿಪಿಎಲ್‌ ಕಾರ್ಡುದಾರರು ಈ ಸೌಲಭ್ಯ ಪಡೆದುಕೊಳ್ಳಬಹುದು, ರೋಗಿಯ ಸಂಪೂರ್ಣ ಚಿಕಿತ್ಸಾ ವಿವರಗಳು ಆಭಾ ನಂಬರ್‌ನಿಂದ ತಿಳಿದು ಬರಲಿದೆ ಎಂದರು.

ಬಿಪಿಎಲ್‌ ಕಾರ್ಡುದಾರರಿಗೆ 5 ಲಕ್ಷದವರೆಗೆ ಉಚಿತ ಸೇವೆ ಮತ್ತು ಎಪಿಎಲ್‌ ಕಾರ್ಡುದಾರರಿಗೆ ಚಿಕಿತ್ಸಾ ವೆಚ್ಚದಲ್ಲಿ 30ರಷ್ಟುರಿಯಾಯಿತಿ ಮೂಲಕ ಒಟ್ಟು ವಾರ್ಷಿಕ 1.5 ಲಕ್ಷದವರೆಗೆ ಚಿಕಿತ್ಸೆ ನೀಡಲಿದ್ದು, ಆಧಾರ್‌ ಕಾರ್ಡ್‌ ಪ್ರತಿ, ಆಧಾರ್‌ಗೆ ನೋಂದಣಿಯಾಗಿರುವ ನಂಬರಿನ ಮೊಬೈಲ್‌ ಅಥವಾ ಬಯೋಮೆಟ್ರಿಕ್‌ ಮುಖಾಂತರ ಅಥವಾ ರೇಷನ್‌ ಕಾರ್ಡ್‌ ಮುಖಾಂತರ ನೋಂದಣಿ ಮಾಡಲಾಗುವುದು ಎಂದು ಅವರು ವಿವರಿಸಿದರು.

ಶಾಲೆಗಳಲ್ಲಿ ಮಕ್ಕಳ ಅಪೌಷ್ಟಿಕತೆ, ರಕ್ತಹೀನತೆ ಪರೀಕ್ಷೆ ಮಾಡಿ: ಸಚಿವ ಸುಧಾಕರ್‌ ಸೂಚನೆ

ಹಿರಿಯ ಪತ್ರಕರ್ತ ಹಾಗೂ ಕೆಯುಡ್ಲ್ಯುಜೆ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್‌ ಮಾತನಾಡಿ, ಸರ್ಕಾರ ಜನಸಾಮಾನ್ಯರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ವಿವಿಧ ಇಲಾಖೆಗಳ ಮೂಲಕ ಜಾರಿಗೊಳಿಸಿ ಅನುಷ್ಠಾನಗೊಳಿಸುತ್ತಿದ್ದು, ಅದರಂತೆ ಆರೋಗ್ಯ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿರುವ ಆಭಾ ಕಾರ್ಡ್‌ ಸಹ ಜನಸಾಮಾನ್ಯರಿಗೆ ಬಹಳ ಅನುಕೂಲಕರವಾದ ಯೋಜನೆಯಾಗಿದೆ. ಈ ಯೋಜನೆಯನ್ನು ಇಂದು ಜಿಲ್ಲೆಯ ಪತ್ರಕರ್ತರಿಗೂ ಸಹ ವಿಸ್ತರಿಸುತ್ತಿದ್ದು ಜಿಲ್ಲೆಯ ಪತ್ರಕರ್ತರಿಗೆ ಬಹಳ ಅನುಕೂಲವಾಗಲಿದೆ. ಸರ್ಕಾರದ ಯೋಜನೆಗಳನ್ನು ನಾವುಗಳು ಸದ್ಭಳಕೆ ಮಾಡಿಕೊಳ್ಳಬೇಕಿದ್ದು ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ನೋಂದಣಿ ಅಭಿಯಾನದಲ್ಲಿ ಭಾಗವಹಿಸಿ ನೋಂದಣಿ ಮಾಡಿಸಿಕೊಳ್ಳುವಂತೆ ಕರೆ ನೀಡಿದರು.

10 ವರ್ಷದಲ್ಲಿ ಮಾನಸಿಕ ರೋಗಿಗಳು ಹೆಚ್ಚಳ: ಸಚಿವ ಸುಧಾಕರ್‌ ಕಳವಳ

ಆಭಾ ನೋಂದಣಿಯನ್ನು ತಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸಹ ಪತ್ರಕರ್ತರು ಮಾಡಿಸಿಕೊಳ್ಳಬಹುದು. ಸರ್ಕಾರದ ಮಟ್ಟದಲ್ಲಿ ಆರೋಗ್ಯ ಸೌಲಭ್ಯ ಇದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲದಿದ್ದಲ್ಲಿ ರೋಗಿ ಬಯಸಿದ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಜಿಲ್ಲಾಸ್ಪತ್ರೆ ಅಥವಾ ತಾಲೂಕು ಆಸ್ಪತ್ರೆಗಳಿಂದ ರೆಫರ್‌ ಮಾಡಲಾಗುವುದು. ಆದರೆ ತುರ್ತು ಸಂದರ್ಭಗಳಲ್ಲಿ ಎಲ್ಲಾ ಆಸ್ಪತ್ರೆಗಳು ರೆಫರೆನ್ಸ್‌ ಪತ್ರವಿಲ್ಲದೆ ರೋಗಿಯನ್ನು ದಾಖಲಿಸಬೇಕು.

ಡಾ. ವೀಣಾ ಜಿಲ್ಲಾ ಶಸ್ತ್ರ ಚಿಕಿತ್ಸಕಿ

ಬಡವರ ರಕ್ಷಣೆಗೆ ನಮ್ಮ ಕ್ಲಿನಿನ್

* ಸರ್ಕಾರ ಏಕಕಾಲಕ್ಕೆ 114 ನಮ್ಮ ಕ್ಲಿನಿಕ್‌ಗಳಿಗೆ ಚಾಲನೆ ನೀಡುತ್ತಿದೆ. ಇದರ ವಿಶೇಷತೆಯೇನು?
ಡಿ.14ರ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ನಮ್ಮ ಕ್ಲಿನಿಕ್‌’ಗಳನ್ನು ಉದ್ಘಾಟಿಸಲಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 438 ಕ್ಲಿನಿಕ್‌ಗಳನ್ನು ತೆರೆಯಲು ಯೋಜನೆ ರೂಪಿಸಿದ್ದು, ಇದಕ್ಕಾಗಿ ಒಟ್ಟು 150 ಕೋಟಿ ರು. ಖರ್ಚಾಗಲಿದೆ. ಆರಂಭಿಕ ಹಂತದಲ್ಲಿ 114 ಕ್ಲಿನಿಕ್‌ಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಜನವರಿ ಅಂತ್ಯಕ್ಕೆ ಎಲ್ಲವೂ ಕಾರ್ಯನಿರ್ವಹಿಸಲಿವೆ. ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಹಂತದ ಆರೋಗ್ಯ ಸೇವೆಗಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಈಗಾಗಲೇ ಇವೆ. ಆದರೆ ಬಡ ಜನರು, ಕೂಲಿ ಕಾರ್ಮಿಕರು, ಹಮಾಲಿಗಳು, ವಲಸೆ ಹೋಗುವವರು ನಿಯಮಿತವಾಗಿ ಬಂದು ಆರೋಗ್ಯ ತಪಾಸಣೆ ಮಾಡಿಸುತ್ತಿಲ್ಲ. ಇಂತಹ ವರ್ಗದ ಜನರು ಆರೋಗ್ಯ ತೀವ್ರವಾಗಿ ಹದಗೆಟ್ಟಾಗ ಮಾತ್ರ ಆಸ್ಪತ್ರೆಗೆ ಹೋಗುತ್ತಾರೆ. ಇಂತಹ ಬಡ ಜನರು ವಾಸಿಸುವ ಪ್ರದೇಶಕ್ಕೆ ಸಮೀಪದಲ್ಲೇ ಗುಣಮಟ್ಟದ ಆರೋಗ್ಯ ಸೇವೆಗಳು ಸಿಗಬೇಕು. ಇದಕ್ಕಾಗಿ ನಮ್ಮ ಕ್ಲಿನಿಕ್‌ ಯೋಜನೆ ಜಾರಿ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮನ್ನು ಕಾಮನ್‌ ಮ್ಯಾನ್‌ ಎಂದೇ ಹೇಳಿಕೊಳ್ಳುತ್ತಾರೆ. ಅವರು ಸಾಮಾನ್ಯರಲ್ಲೇ ಸಾಮಾನ್ಯ ವ್ಯಕ್ತಿಯಾಗಿ ಚಿಂತನೆ ನಡೆಸಿದ್ದರಿಂದಲೇ ಇಂತಹ ವಿಶೇಷ ಯೋಜನೆ ರೂಪುಗೊಳ್ಳಲು ಸಾಧ್ಯವಾಗಿದೆ.

* ಕ್ಲಿನಿಕ್‌ಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವಾಗ ಆರಂಭವಾಗುತ್ತವೆ?
ಬೆಂಗಳೂರು ಕೋಟ್ಯಂತರ ಜನರಿಗೆ ಆಶ್ರಯ ನೀಡಿದೆ. ಇಲ್ಲಿ ಎಲ್ಲ ವರ್ಗದ ಜನರೂ ಇದ್ದಾರೆ. ಇದರಲ್ಲಿ ಕೊಳಗೇರಿಗಳು ಸೇರಿವೆ. ಬಡ ಜನರು, ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿವೆ. ಇವೆಲ್ಲವನ್ನೂ ಒಂದೇ ಬಾರಿಗೆ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಇದು ಸಾಧ್ಯವಾಗದೆ ಇದ್ದರೆ ಜನವರಿ ಎರಡನೇ ವಾರದೊಳಗೆ ಕನಿಷ್ಠ 150 ನಮ್ಮ ಕ್ಲಿನಿಕ್‌ಗಳು ಬೆಂಗಳೂರಿನಲ್ಲಿ ಜನರ ಸೇವೆಗೆ ಲಭ್ಯವಿರಲಿವೆ.

Follow Us:
Download App:
  • android
  • ios