ಧಾರವಾಡ[ಜು. 03]   ಹೆತ್ತ ಮಗುವಿನ ಮೇಲಿನ ಮಮತೆ ತಾಯಿಗೆ ಮರೆಯಾಗಲು ಸಾಧ್ಯವೇ? ಅನಾರೋಗ್ಯದ ಕಾರಣಕ್ಕೆ ಸ್ವಂತ ಮಗು ಮಾರಾಟ ಮಾಡಿಕೊಂಡಿದ್ದ ತಾಯಿಯ ಕರುಳು ಇದೀಗ ಮಗುವಿಗಾಗಿ ಪರಿತಪಿಸುತ್ತಿದೆ.

ಅನಾರೋಗ್ಯದ ಕಾರಣದಿಂದ ಹೆತ್ತ ಮಗುವನ್ನು ಮಾರಾಟ ಮಾಡಿ ನಂತರ ಮಗುವಿನ ನೆನಪಾಗಿ ನನ್ನ ಮಗು ಮರಳಿ ಕೊಡಿಸಿ ಎಂದು ತಾಯಿಯೊಬ್ಬರು ಮಕ್ಕಳ ರಕ್ಷಣಾ ಘಟಕಕ್ಕೆ ಮೊರೆ ಹೋಗಿದ್ದಾರೆ.

ಗೌಳಿಗಲ್ಲಿಯ ನಿವಾಸಿಯೊಬ್ಬರಗೆ ಜುಲೈ 2ರಂದು ಹೆರಿಗೆಯಾಗಿದ್ದು ತನ್ನ ನವಜಾತ ಗಂಡು ಶಿಶುವನ್ನು ಅನಾರೋಗ್ಯದ ಕಾರಣದಿಂದ ಮಧ್ಯವರ್ತಿಗಳಿಂದ ಸೈದಾಪುರದವರೊಬ್ಬರಿಗೆ  25 ಸಾವಿರ ರೂ. ಗೆ ಮಾರಾಟ ಮಾಡಿದ್ದರು. ನಂತರ ಬುಧವಾರ ಮಗುವಿನ ಮೇಲೆ ಪ್ರೀತಿ ಬಂದು ತನ್ನ ಮಗುವನ್ನು ಮರಳಿ ಕೊಡಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ವಿನಂತಿಸಿಕೊಡಿದ್ದಾಳೆ.