ಬೆಂಗಳೂರು(ಅ. 01) ಕೊರೋನಾ ವಾರಿಯರ್ಸ್ ನಿಧನಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಕಂಬನಿ ಮಿಡಿದಿದ್ದಾರೆ.  ಇಬ್ಬರು ಕೊರೋನಾ ವಾರಿಯರ್ಸ್ ಪೋಟೋ ಶೇರ್ ಮಾಡಿಕೊಂಡಿರುವ ಶ್ರೀರಾಮುಲು ಸೇವೆಯನ್ನು ಸ್ಮರಿಸಿದ್ದಾರೆ. 

ಚಿತ್ರದುರ್ಗ ಜಿಲ್ಲೆಯ ಯಳಗೋಡಿನಲ್ಲಿ ಆಶಾ ಕಾರ್ಯಕರ್ತೆಯಾಗಿ‌ ಕಳೆದ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ರೇಣುಕಮ್ಮ ಅವರು ನ್ಯುಮೋನಿಯ ಹಾಗೂ ಕೋವಿಡ್ ಗೆ ಬಲಿಯತಾಗಿದ್ದರೆ ಅತ್ತ  ಯಾದಗಿರಿ ಜಿಲ್ಲೆಯ ಕೌಳೂರಿನಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗೀತಾ ಅವರು ಇಂದು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. 

ಸ್ಯಾಂಪಲ್ ಕೊಡದಿದ್ದರೂ ವರದಿ ಪಾಸಿಟಿವ್; ಧಂದೆಗೆ ಇಳಿದಿದ್ಯಾ ಇಲಾಖೆ?

ಇಬ್ಬರ ಹೋರಾಟ ಮತ್ತು ಸೇವೆಯನ್ನು ಸ್ಮರಿಸಿದ ಆರೋಗ್ಯ ಸಚಿವರು  ಸರ್ಕಾರ ಘೋಷಣೆ ಮಾಡಿದ ಎಲ್ಲ ಸವಲತ್ತುಗಳನ್ನು ನೀಡುತ್ತೇವೆ. ಪರಿಹಾರವನ್ನು ಕೊರೋನಾ ವಾರಿಯರ್ಸ್ ಕುಟುಂಬಕ್ಕೆ ತಲುಪಿಸಲಾಗುವುದು ಎಂದು ತಿಳಸಿದ್ದಾರೆ.

ಯಾದಗಿರಿ ನಗರದ ನಜರಾತ್ ಕಾಲೊನಿಯಲ್ಲಿ ವಾಸವಾಗಿದ್ದಇವರು ಕಳೆದ 12 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೀತಾ ಕೊರೋನಾ ಸಂದರ್ಭದಲ್ಲಿ ಹಗಲಿರುಳು ಕೋವಿಡ್ ಜಾಗೃತಿ ಮೂಡಿಸುವ ಹಾಗೂ ಕೋವಿಡ್ ತಡೆಗೆ ಕರ್ತವ್ಯ ಪ್ರಜ್ಞೆ ಮೆರೆದಿದ್ದರು. ಕೌಳುರು ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ನಡುವೆ ಕೆಲಸ ಮಾಡಿದ್ದರು.