ಗದಗ: ಕೊರೋನಾ ಸೋಂಕಿನಿಂದ ಮೃತನ ಅಂತ್ಯ ಸಂಸ್ಕಾರಕ್ಕೆ ಸಿಬ್ಬಂದಿ ಹಿಂದೇಟು
* ಗದಗ ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಘಟನೆ
* 45 ನಿಮಿಷ ಆ್ಯಂಬುಲೆನ್ಸ್‌ನಲ್ಲಿಯೇ ಶವ ಇಟ್ಟು ನಿರ್ಲಕ್ಷ್ಯತನ ಪ್ರದರ್ಶನ ಮಾಡಿದ ಸಿಬ್ಬಂದಿ
* ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ನೆರವೇರಿಸಿದ ಗ್ರಾಮದ ಯುವಕರು
ಗದಗ(ಮೇ.22): ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಲು ಸಿಬ್ಬಂದಿಗಳು ಹಿಂದೇಟು ಹಾಕಿರುವಂತಹ ಘಟನೆ ಗದಗ ತಾಲೂಕಿನ ನಾಗ ಸಮುದ್ರ ಗ್ರಾಮದಲ್ಲಿ ನಡೆದಿದೆ.
ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಶವ ಸಂಸ್ಕಾರ ಮಾಡಲು ಆರೋಗ್ಯ ಇಲಾಖೆ ಹಾಗೂ ಗ್ರಾಪಂ ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯ ತೋರಿದರು. ಗ್ರಾಮದ ಯುವಕರೇ ಪಿಪಿಇ ಕಿಟ್ ಧರಿಸಿ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
"
ಕುಟುಂಬದವರ ಹಿಂದೇಟು: ಅಂಜುಮನ್ ಸಮಿತಿ ಸಹಕಾರದಲ್ಲಿ ಅಂತ್ಯಸಂಸ್ಕಾರ
ಮೃತ ವ್ಯಕ್ತಿಯ ಶವ ಗ್ರಾಮಕ್ಕೆ ತಂದು 45 ನಿಮಿಷವಾದರೂ ಸಂಸ್ಕಾರ ಕಾರ್ಯಕ್ಕೆ ಸಿಬ್ಬಂದಿಗಳು ಮುಂದಾಗದೆ ಇರುವಾಗ ಸುಮಾರು 45 ನಿಮಿಷ ಆ್ಯಂಬುಲೆನ್ಸ್‌ನಲ್ಲಿಯೇ ಶವ ಇಟ್ಟು ನಿರ್ಲಕ್ಷ್ಯತನ ಪ್ರದರ್ಶನ ಮಾಡಿದ್ದಾರೆ.
ಹೀಗಾಗಿ ಗ್ರಾಮದ ಯುವಕರೇ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇದರಿಂದ ಆರೋಗ್ಯ ಇಲಾಖೆ ಹಾಗೂ ಗ್ರಾಪಂ ಸಿಬ್ಬಂದಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಯುವಕರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೀಯ ವ್ಯಕ್ತಪಡಿಸಿದರು.