ಕಲಬುರಗಿ: ಆಸ್ಪತ್ರೆ ದಾಖಲೆಗೆ ಕೊರೋನಾ ಸೋಂಕಿತನೇ ಅಂಗಲಾಚಿದರೂ ಕೇಳೋರಿಲ್ಲ!

ಸೋಂಕು ಕಂಡವರನ್ನೂ ಆಸ್ಪತ್ರೆಗೆ ಕರೆದೊಯ್ಯದ ಆರೋಗ್ಯ ಸಿಬ್ಬಂದಿ| ಕಲಬುರಗಿ ನಗರಗಲ್ಲಿ ಆರೋಗ್ಯ ಇಲಾಖೆಯಿಂದ ಮತ್ತೊಂದು ಅವಾಂತರ ಸೃಷ್ಟಿ|ಸೋಂಕು ಬಂದರೂ ಅವರನ್ನು ಮನೆಯಿಂದ ಆಸ್ಪತ್ರೆಗೆ ಕರೆದೊಯ್ಯದೆ ಆರೋಗ್ಯ ಸಿಬ್ಬಂದಿ ಇಲ್ಲಿಯೂ ಹೊಣೆಗೇಡಿತನ ಮೆರೆದಿದ್ದಾರೆ|

Health Department officers Neglect Coronavirus Patient in Kalaburagi

ಕಲಬುರಗಿ(ಜು.19): ಕೋವಿಡ್‌ ಸೋಂಕಿರುವ ಅಜ್ಜಿ ಕಾಲು ಮುರಿದುಕೊಂಡು ಮನೆಯ 3ನೇ ಮಹಡಿಯಲ್ಲಿದ್ದಾರೆಂದರೂ ಕೆಳಗಿಳಿದು ಬಂದರೆ ಮಾತ್ರ ಕರೆದೊಯ್ಯೋದು, ಇಲ್ದಿದ್ರೆ ಇಲ್ಲೆಂದು ಅಜ್ಜಿಗೆ ಕರೆದೊಯ್ಯದೆ ಜಾಗ ಖಾಲಿ ಮಾಡಿ ಅವಾಂತರ ಹುಟ್ಟು ಹಾಕಿದ್ದ ನಗರದ ಆ್ಯಂಬುಲೆನ್ಸ್‌, ಆರೋಗ್ಯ ಇಲಾಖೆ ಸಿಬ್ಬಂದಿ ಹೊಣೆಗೇಡಿತನ ಮರೆಯುವ ಮುನ್ನವೇ ಮತ್ತೊಂದು ಅಂತಹದ್ದೇ ಪ್ರಕರಣ ಜೆ.ಆರ್‌. ನಗರದಿಂದ ವರದಿಯಾಗಿದೆ.

ಸೋಂಕು ಬಂದರೂ ಅವರನ್ನು ಮನೆಯಿಂದ ಆಸ್ಪತ್ರೆಗೆ ಕರೆದೊಯ್ಯದೆ ಆರೋಗ್ಯ ಸಿಬ್ಬಂದಿ ಇಲ್ಲಿಯೂ ಹೊಣೆಗೇಡಿತನ ಮೆರೆದಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಸಿಬ್ಬಂದಿ ಬೇಜವಾಬ್ದಾರಿತನ ಟೀಕಿಸುತ್ತಿದ್ದಾರೆ. ಸೋಂಕು ಬಂದಿದೆ, ನಿಮಗೆ ಆಸ್ಪತ್ರೆಗೆ ಕರೆದೊಯ್ಯುತ್ತೇವೆ ಎಂದು ಆರೋಗ್ಯ ಸಿಬ್ಬಂದಿಯೇ ರೋಗಿಗೆ ಕರೆ ಮಾಡಿದ್ದರು. ಅದರಂತೆ ದಾರಿ ಕಾದಾಗ ಯಾರೂ ಬರಲೇ ಇಲ್ಲ. 2ನೇ ದಿನವೂ ಯಾರೊಬ್ಬರೂ ಬಾರದೆ ಹೋದಾಗ ಸ್ವತಃ ಸೋಂಕಿತನೇ ಆಸ್ಪತ್ರೆಗೆ ಹೋದರೆ ಅಲ್ಲಿಯೂ ಯಾರೊಬ್ಬರೂ ಪ್ರವೇಶ ಮಾಡಿಕೊಳ್ಳದೆ ಅಲಕ್ಷ್ಯತನ ತೋರಿದುರ ಎನ್ನಲಾಗಿದೆ.

ಕಲಬುರಗಿ: ಕೊರೋನಾ ಸೋಂಕಿತ ಮನೆಗೆ ಜನರ ದಿಗ್ಭಂಧನ, ಪಿಎಸ್‌ಐ ಸಾಂತ್ವನ

ಕೊನೆಗೆ ಸೋಂಕಿತನನ್ನು ಜಿಮ್ಸ್‌ ಆಸ್ಪತ್ರೆಗೆ ಸಂಬಂಧಿಕರು ಕರೆತಂದರೂ ಅಲ್ಲಿ ಯಾರೊಬ್ಬರೂ ಸ್ಪಂದಿಸಲಿಲ್ಲ. ಅಲ್ಲಿ ಕೂಡ ಆತನನ್ನು ಆಸ್ಪತ್ರೆಗೆ ಸೇರಿಸದೆ ನಿರ್ಲಕ್ಷ್ಯ ತೋರಲಾಯ್ತು. ತನ್ನನ್ನು ಎಲ್ಲಾದ್ರು ದಾಖಲು ಮಾಡಿ ಚಿಕಿತ್ಸೆ ಕೊಡಿಸಿ ಅಂತ ಸೋಂಕಿತ ಮನವಿ ಮಾಡಿದರೂ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ಪ್ರಕರಣದಲ್ಲಿನ ಗೊಂದಲದ ಬಗ್ಗೆ ಕೇಳಿದರೆ ಆರೋಗ್ಯ ಸಿಬ್ಬಂದಿ ಯಾರೂ ಹೊಣೆ ಹೊರುತ್ತಿಲ್ಲ. ಒಬ್ಬರ ಮೇಲೆ ಮತ್ತೊಬ್ಬರು ಹಾಕುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಧೋರಣೆಗೆ ಸೋಂಕಿತನ ಕುಟುಂಬ ಆಕ್ರೋಶ ಹೊರಹಾಕಿದೆ. ಸೋಂಕಿತನಿಗೆ 40 ವರ್ಷ, ಸೋಂಕು ಬಂದಿದೆ, ಕರೆದೊಯ್ಯುತ್ತೇವೆಂದು ಹೇಳಿದವರು ಹೀಗೆ ಮಾಡುತ್ತಿದ್ದಾರೆ, ನಮಗೆ ಹೇಳಿದರು ಯಾಕೆ? ಹೀಗೇಕೆ? ಎಂದು ಸೋಂಕಿತನ ಮನೆಯವರು ಆಕ್ರೋಶಕ್ಕೊಳಗಾಗಿ ಜಿಮ್ಸ್‌ನಲ್ಲಿ ಕೂಗಾಡಿದ್ದಾರೆ. ಯಾರೂ ಬಾರದೆ ಹೋದಾಗ ನಾವೇ ಆಸ್ಪತ್ರೆಗೆ ಬಂದಿದ್ದೂರ ಪ್ರವೇಶಕ್ಕೆ ಮೀನಮೇಷ ಎಣಿಸಲಾಗುತ್ತಿದೆ ಎಂದೂ ಕುಟುಂಬದವರು ರೇಗಿದರು. ಬಹುಹೊತ್ತು ಈ ವಾಗ್ವಾದ ನಡೆದಾದ ನಂತರ ಆಸ್ಪತ್ರೆ ಪ್ರವೇಶ ದೊರಕಿತು ಎಂದು ಗೊತ್ತಾಗಿದೆ.
 

Latest Videos
Follow Us:
Download App:
  • android
  • ios