ರಾಜ್ಯದ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಿರುವ ಕೀರ್ತಿ ಎಚ್‌ಡಿಡಿಗೆ
ರಾಜ್ಯದ ಅಭಿವೃದ್ಧಿಗಾಗಿ ಪ್ರಾದೇಶಿಕ ಪಕ್ಷದ ಮೂಲಕ ಇಳಿ ವಯಸ್ಸಿನಲ್ಲಿಯು ಹೋರಾಟ ಮಾಡುತ್ತಿರುವ ಕೀರ್ತಿ ಹೆಚ….ಡಿ ದೇವೇಗೌಡ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಹೇಳಿದರು.
ಪಿರಿಯಾಪಟ್ಟಣ :ರಾಜ್ಯದ ಅಭಿವೃದ್ಧಿಗಾಗಿ ಪ್ರಾದೇಶಿಕ ಪಕ್ಷದ ಮೂಲಕ ಇಳಿ ವಯಸ್ಸಿನಲ್ಲಿಯು ಹೋರಾಟ ಮಾಡುತ್ತಿರುವ ಕೀರ್ತಿ ಹೆಚ್….ಡಿ ದೇವೇಗೌಡ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಹೇಳಿದರು.
ತಾಲೂಕಿನ ಮಲ್ಲಿನಾಥಪುರ ಗ್ರಾಮದ ಬಳಿ ನಡೆದ ಚಿಟ್ಟೆನಹಳ್ಳಿ, ಪೂನಾಡಹಳ್ಳಿ, ಹುಣಸವಾಡಿ ಮತ್ತು ನವಿಲೂರು ಗ್ರಾಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು ಬೆಳೆಗಾರರ ಕಷ್ಟ ಏನೆಂಬುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟವರು ದೇವೇಗೌಡರಾಗಿದ್ದು, ವಿವಿಧ ನೀರಾವರಿ ಯೋಜನೆಗಳ ಮೂಲಕ ರಾಜ್ಯದ ಎಲ್ಲೆಡೆಗೂ ನೀರನ್ನು ಹರಿಸಿದ ಕೀರ್ತಿ ಅವರದ್ದಾಗಿದೆ, ಬಂಗಾರಪ್ಪ, ಗುಂಡೂರಾವ್, ಯಡಿಯೂರಪ್ಪ ಸೇರಿದಂತೆ ಹಲವರು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿದರೂ ಸಹ ಯಶಸ್ವಿಯಾಗಲಿಲ್ಲ, ಈ ಹಿಂದೆ ಹಲವು ಜನಪರ ಯೋಜನೆಗಳನ್ನು ನೀಡಿರುವ ಎಚ್‌ಡಿಕೆ ಅವರನ್ನು ಮುಖ್ಯಮಂತ್ರಿ ಮಾಡಲು ಕಾರ್ಯಕರ್ತರು ಪಣ ತೊಡಬೇಕಿದೆ, ನನ್ನನ್ನು ಮತ್ತು ಕೆ. ಮಹದೇವ್ ಅವರನ್ನು ಇದೊಂದು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿ ಮುಂದಿನ ಚುನಾವಣೆಗಳಲ್ಲಿ ನಾವೇ ರಾಜಕೀಯದಿಂದ ಹೊರ ಉಳಿಯುತ್ತೇವೆ ಎಂದರು.
ಶಾಸಕ ಕೆ. ಮಹದೇವ್ ಅವರು ಮಾತನಾಡಿ, ಅಭಿವೃದ್ಧಿಯನ್ನೇ ಕಾಣದೆ ಹಾಳು ಹಂಪಿಯಂತಿದ್ದ ಪಿರಿಯಾಪಟ್ಟಣ ತಾಲೂಕನ್ನು ಹೆಚ್ಚು ಅನುದಾನ ತಂದು ಅಭಿವೃದ್ಧಿಯ ಪಥದತ್ತ ಕೊಂಡೊಯ್ದಿದ್ದೇನೆ, ತಾಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಾಜಿ ಶಾಸಕ ಕೇವಲ ಗುದ್ದಲಿ ಪೂಜೆ ನೆರವೇರಿಸಿದರು. ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಮುಖ್ಯಮಂತ್ರಿಗಳು ಸಚಿವರು ಮತ್ತು ಅಧಿಕಾರಿಗಳ ಕಾಲು ಹಿಡಿದು ಅನುದಾನ ತಂದು ಶೇ. 90 ರಷ್ಟುಕಾಮಗಾರಿ ಮುಕ್ತಾಯಗೊಂಡಿದೆ ನನ್ನ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮತ್ತೊಮ್ಮೆ ಚುನಾಯಿಸುವಂತೆ ಕೋರಿದರು.
ಮೈಮುಲ… ಅಧ್ಯಕ್ಷ ಪಿ.ಎಂ. ಪ್ರಸನ್ನ ಅವರು ಮಾತನಾಡಿ, ದೇವೇಗೌಡರು ಕಟ್ಟಿರುವ ಪ್ರಾದೇಶಿಕ ಜೆಡಿಎಸ್‌ನ್ನು ಉಳಿಸಲು ಜೆಡಿಎಸ್ ಕಾರ್ಯಕರ್ತರಾದ ನಾವೆಲ್ಲರೂ ಛಲದಿಂದ ಶ್ರಮಿಸಬೇಕಿದೆ, ಎರಡು ವರ್ಷಗಳ ಕೋವಿಡ್ ಸಂಕಷ್ಟದ ನಡುವೆಯೂ ಶಾಸಕ ಕೆ. ಮಹದೇವ್ ಸಾವಿರ ಕೋಟಿ ರು. ಗಳಿಗೂ ಹೆಚ್ಚಿನ ಅನುದಾನವನ್ನು ತಂದು ತಾಲೂಕನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತಿದ್ದಾರೆ, ವಾಟ್ಸಾಪ್, ಫೇಸ್ ಬುಕ್ ಮತ್ತಿತರ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವು ವಿರೋಧಿಗಳು ಶಾಸಕ ಕೆ. ಮಹದೇವ್ ವಿರುದ್ಧ ಟ್ರೋಲ…ಗಳನ್ನು ಮಾಡುವ ಮೂಲಕ ಅಪಪ್ರಚಾರದಲ್ಲಿ ತೊಡಗಿದ್ದಾರೆ, ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಗ್ರಾಪಂ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಬೈಕ್ ಮೆರವಣಿಗೆ ನಡೆಸಿ ಜೈಕಾರ ಕೂಗುತ್ತಾ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮೈಮುಲ್ ನಿರ್ದೇಶಕ ಎಚ್.ಡಿ. ರಾಜೇಂದ್ರ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್. ರವಿ, ಪುರಸಭೆ ಅಧ್ಯಕ್ಷ ಕೆ. ಮಹೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮಹಿಳಾ ಘಟಕ ಅಧ್ಯಕ್ಷೆ ಪ್ರೀತಿ ಅರಸ್, ಟಿಎಪಿಸಿಎಂಎಸ್ ನಿರ್ದೇಶಕಿ ಸುನಿತಾ ಮಂಜುನಾಥ್, ತಾಪಂ ಮಾಜಿ ಸದಸ್ಯರಾದ ಎಸ್. ರಾಮು, ಎ.ಟಿ. ರಂಗಸ್ವಾಮಿ, ಮಲ್ಲಿಕಾರ್ಜುನ, ರಘುನಾಥ್, ಮುಖಂಡರಾದ ಅಣ್ಣೇಗೌಡ, ಚಂದ್ರಶೇಖರ್, ಹೇಮಂತ್‌ಕುಮಾರ್, ಗೋವಿಂದೇಗೌಡ, ಜಲೇಂದ್ರ, ವೆಂಕಟೇಶ್, ತಿಮ್ಮನಾಯಕ, ದಿನೇಶ್, ಜೆಡಿಎಸ್ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.