ಎಚ್‌ಡಿಕೆ ಶೀಘ್ರ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗ್ತಾರೆ: ಸ್ವಾಮೀಜಿ ಭವಿಷ್ಯ

ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇದ್ದು ಶೀಘ್ರ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಸ್ವಾಮೀಜಿ ಓರ್ವರು ಭವಿಷ್ಯ ನುಡಿದಿದ್ದಾರೆ

HD Kumaraswamy Will Become Karnataka CM Soon Says Nanjavadutha Swamiji

ಚನ್ನಪಟ್ಟಣ [ಮಾ.06]: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ನಂಜಾವಧೂತ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಗುರುವಾರ ಇಲ್ಲಿ ನಡೆದ ಬಮೂಲ್‌ ಉತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಅಧಿಕಾರದಲ್ಲಿದ್ದಾಗ ಕುಮಾರಸ್ವಾಮಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂದರು. 

ಆದರೆ, ಅವರ ಜನಪರ ಕಾರ್ಯಕ್ರಮಗಳಿಗೆ ಸರಿಯಾದ ಪ್ರಚಾರ ಸಿಕ್ಕಿಲ್ಲ. ಅವರ ನಾಯಕತ್ವ ಈ ನಾಡಿಗೆ ಬೇಕಿದೆ. ಆದರೆ ಇದೀಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು, ಕುಮಾರಸ್ವಾಮಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ಕೈಹಾಕುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಪ್ರಸ್ತಾಪಿಸಿ ಬಿಎಸ್‌ವೈ ಬಜೆಟನ್ನು ಟೀಕಿಸಿದ ಎಚ್‌ಡಿಕೆ!...

ಈ ಹಿಂದೆಯೂ ಅನೇಕ ಸ್ವಾಮೀಜಿಗಳು ಈ ರೀತಿ ಭವಿಷ್ಯ ನುಡಿದಿದ್ದರು.

Latest Videos
Follow Us:
Download App:
  • android
  • ios