Asianet Suvarna News Asianet Suvarna News

Karnataka Election : 2023ಕ್ಕೆ ಎಚ್ಡಿಕೆ ಕರ್ನಾಟಕದ ಸಿಎಂ

2023ಕ್ಕೆ ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿ ಆಗೋದು ಖಚಿತ. ಕರ್ನಾಟಕ ರಾಜ್ಯದಲ್ಲಿ ಪಂಚರತ್ನ ಯಾತ್ರೆಗೆ ಉತ್ತಮ ಜನಸ್ಪಂದನೆ ಸಿಗುತ್ತಿದೆ. ನಮ್ಮ ಕೊರಟಗೆರೆ ಕ್ಷೇತ್ರದಲ್ಲಿಯೂ ಯಾತ್ರೆಯು ಯಶಸ್ವಿ ಕಂಡಿದೆ ಎಂದು ಮಾಜಿ ಶಾಸಕ ಪಿ.ಆರ್‌.ಸುಧಾಕರಲಾಲ್‌ ತಿಳಿಸಿದರು

HD Kumaraswamy Will Become Karnataka CM In 2023 snr
Author
First Published Dec 19, 2022, 5:31 AM IST

 ಕೊರಟಗೆರೆ (ಡಿ.19):  2023ಕ್ಕೆ ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿ ಆಗೋದು ಖಚಿತ. ಕರ್ನಾಟಕ ರಾಜ್ಯದಲ್ಲಿ ಪಂಚರತ್ನ ಯಾತ್ರೆಗೆ ಉತ್ತಮ ಜನಸ್ಪಂದನೆ ಸಿಗುತ್ತಿದೆ. ನಮ್ಮ ಕೊರಟಗೆರೆ ಕ್ಷೇತ್ರದಲ್ಲಿಯೂ ಯಾತ್ರೆಯು ಯಶಸ್ವಿ ಕಂಡಿದೆ ಎಂದು ಮಾಜಿ ಶಾಸಕ ಪಿ.ಆರ್‌.ಸುಧಾಕರಲಾಲ್‌ ತಿಳಿಸಿದರು.

ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಹುಟ್ಟುಹಬ್ಬದ ಪ್ರಯುಕ್ತ ಜಾತ್ಯತೀತ ಯುವ ಜನತಾದಳ (JDS)  ಮತ್ತು ಅಲ್ಪಸಂಖ್ಯಾತರ ಘಟಕದಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಎಚ್‌ಡಿಕೆ ಕಪ್‌ ಅಂತರಜಿಲ್ಲಾ ಮಟ್ಟದ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಕಟ್ಟೆಗಣಪತಿಗೆ ವಿಶೇಷ ಪೂಜೆ:

ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬದ ಪ್ರಯುಕ್ತ ಕೊರಟಗೆರೆ ಪಟ್ಟಣದ ಕಟ್ಟೆಗಣಪತಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ನಂತರ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂರಾರು ಒಳರೋಗಿಗಳಿಗೆ ಮಾಜಿ ಶಾಸಕ ಪಿ.ಆರ್‌.ಸುಧಾಕರಲಾಲ್‌ ನೇತೃತ್ವದಲ್ಲಿ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಹಾಲು, ಬ್ರೆಡ್‌ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಕೊರಟಗೆರೆ ಕಾರ್ಯಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್‌, ಜೆಡಿಎಸ್‌ ನಗರ ಯುವ ಅಧ್ಯಕ್ಷ ಫಾರುಕ್‌, ಅಲ್ಪಸಂಖ್ಯಾತರ ಘಟಕದ ಯುವ ಅಧ್ಯಕ್ಷ ಅಜ್ಜು, ಉಪಾಧ್ಯಕ್ಷ ಜಬೀವುಲ್ಲಾ, ರಾಜೀಕ್‌ ಅಹಮ್ಮದ್‌, ಮುಖಂಡರಾದ ರಮೇಶ್‌, ಅಮರ್‌, ಕೌಶಿಕ್‌ ಸೇರಿದಂತೆ ಇತರರು ಇದ್ದರು.

ಕಾಂಗ್ರೆಸ್ 70 ದಾಟಲ್ಲ

ಬೆಂಗಳೂರು(ಜು.03):  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಜೆಡಿಎಸ್‌ಗೆ ಹೆಚ್ಚು ಸ್ಥಾನ ಬರುತ್ತದೆಯೇ ಹೊರತು ಕೆಳಗಿರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಪಕ್ಷ 70 ಸ್ಥಾನ ದಾಟಲ್ಲ. ನಾನು ಚಾಲೆಂಜ್‌ ಮಾಡುತ್ತೇನೆ ಎಂದೂ ಅವರು ಹೇಳಿದ್ದಾರೆ.

ಶನಿವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ 130 ಸ್ಥಾನ ಬರುತ್ತದೆಂಬ ಆಂತರಿಕ ಸಮೀಕ್ಷೆಯು ಪ್ಲಾಂಟೆಡ್‌ ಸಮೀಕ್ಷೆ. ಅವರ ಶಕ್ತಿ ಇರುವುದು 60-65 ಸ್ಥಾನ ಅಷ್ಟೇ. 2013ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಇನ್ನೊಂದು ಪಕ್ಷ ಮಾಡದಿದ್ದರೆ ಸಿದ್ದರಾಮಯ್ಯ ಅಂದು ಮುಖ್ಯಮಂತ್ರಿಯಾಗುತ್ತಿರಲಿಲ್ಲ. ಅವರು ಯಡಿಯೂರಪ್ಪ ಅವರನ್ನು ನೆನಪಿಸಿಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ 70 ಸ್ಥಾನ ದಾಟುವುದಿಲ್ಲ. ಈ ಬಗ್ಗೆ ನಾನು ಚಾಲೆಂಜ್‌ ಮಾಡುತ್ತೇನೆ ಎಂದು ಹೇಳಿದರು.

ದೇವೇಗೌಡ್ರ ಬಗ್ಗೆ ಅವಹೇಳನ ಮಾತು, ರಾಜಣ್ಣಗೆ ಖಡಕ್ ಎಚ್ಚರಿಕೆ ಕೊಟ್ಟ ಎಚ್‌ಡಿಕೆ

ತಾಕತ್ತಿದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ- ಇಬ್ರಾಹಿಂ:

ನಿಮಗೆ ತಾಕತ್ತಿದ್ದರೆ ಮುಂದಿನ ಮುಖ್ಯಮಂತ್ರಿ ಯಾರೆಂದು ಈಗಲೇ ಘೋಷಣೆ ಮಾಡಿ ಎಂದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸವಾಲು ಹಾಕಿದರು.

ಯಡಿಯೂರಪ್ಪ ನಡೆ ಆಧರಿಸಿ ಕಾಂಗ್ರೆಸ್‌ ಹೆಜ್ಜೆ: ಕುಮಾರಸ್ವಾಮಿ

ಈವರೆಗೆ ಕಾಂಗ್ರೆಸ್‌ನವರು ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಿಲ್ಲ. ಬಿಜೆಪಿಯವರು ಸಹ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಹೇಳಿಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅಭ್ಯರ್ಥಿ ಎಂದು ನಾವು ಹೇಳಿದ್ದೇವೆ. ನಿಮಗೆ ತಾಕತ್‌ ಇದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿ ಎಂದರು.

ದೇವೇಗೌಡ ಬಗ್ಗೆ ಮಾತನಾಡಿರುವ ರಾಜಣ್ಣ ಕ್ಷಮೆ ಕೇಳುತ್ತಾರೆ ಎಂದು ಭಾವಿಸಿದ್ದೆ. ಆದರೆ, ಅವರು ಉಲ್ಟಾಮಾತನಾಡಿದ್ದಾರೆ. ರಾಜಣ್ಣ ಅವರು ಕ್ಷಮೆ ಕೇಳಬೇಕು. ನಾಳೆ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು. ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ನಾವು ಹೊಣೆಯಲ್ಲ ಎಂದು ಪರೋಪಕ್ಷವಾಗಿ ರಾಜಣ್ಣ ಅವರಿಗೆ ಎಚ್ಚರಿಕೆ ನೀಡಿದರು.

Follow Us:
Download App:
  • android
  • ios