‘36 ಜನರನ್ನೂ ಯಡಿಯೂರಪ್ಪ ಡಿಸಿಎಂ ಮಾಡಲಿ : HDK

ಸಂಕ್ರಾಂತಿ ನಂತರ ಜೆಡಿಎಸ್ ಮುಖಂಡರೆಲ್ಲರೂ ಸಭೆ ಸೇರಲಿದ್ದೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೇ ಸರ್ಕಾರದ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ ಅಸಮಾಧಾನ ಹೊರಹಾಕಿದ್ದಾರೆ.

HD Kumaraswamy Taunts BS Yediyurappa Over Cabinet Expansion

ಹಾಸನ [ಜ.06]: ಇಲ್ಲಸಲ್ಲದ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡದಿರಿ ಎಂದು ಕೆಲವರಲ್ಲಿ ಮನವಿ ಮಾಡಿದ್ದೇನೆ. ಸಂಕ್ರಾಂತಿ ನಂತರ ನಮ್ಮ ಪಕ್ಷದ ಎಲ್ಲರ ಜೊತೆ ಸಭೆ ನಡೆಸುತ್ತೇವೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. 

ಹಾಸನದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಪಕ್ಷ ಕಟ್ಟುವ ಶ್ರಮ ನನಗೆ ಗೊತ್ತಿದೆ ಎಂದು ಹೇಳಿದರು. ಅಲ್ಲದೇ ಹಲವರು ಹಲವು ರೀತಿಯ ಹೇಳಿಕೆ ನೀಡುತ್ತಿದ್ದಾರೆ.  ಜಿ.ಟಿ ದೇವೆಗೌಡರು ಸಹ ಮಾತನಾಡಿದ್ದು, ಅವರು ಪಕ್ಷದಿಂದ ಅನುಕೂಲ ಪಡೆದಿಲ್ಲವೇ ಎಂದು ಪ್ರಶ್ನೆ ಮಾಡಿದರು. 

‘ಬಿಜೆಪಿಯಿಂದ ಹೊರ ಬರಲು ಸಿದ್ಧರಾಗಿದ್ದಾರೆ 15 ಮಂದಿ’...

ಅಲ್ಲದೇ ರಾಮನಗರದ ಹೆಸರನ್ನು ಬದಲಾವಣೆ ಮಾಡುವ ವಿಚಾರದ ಬಗ್ಗೆಯೂ ಮಾತನಾಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಸರ್ಕಾರದ ಮುಂದೆ ಹೆಸರು ಬದಲಾವಣೆ ಪ್ರಸ್ತಾಪ ಇಲ್ಲ ಎಂದಾದಲ್ಲಿ ನವ ಬೆಂಗಳೂರು ಮಾಡುವ ಸುದ್ದಿ ಹರಿಯಬಿಟ್ಟಿದ್ದು ಏಕೆ. ಇದು ಸಣ್ಣತನದ ಸರ್ಕಾರ ಎಂದು ಕಿಡಿ ಕಾರಿದರು. 

'ಶಿವಮೊಗ್ಗ, ದಕ್ಷಿಣ ಕನ್ನಡಕ್ಕೆ ಬೆಂಗಳೂರು ಎಂದು ಹೆಸರಿಡಬಲ್ಲರೇ’?...

ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಸ್ವ ಕ್ಷೇತ್ರದಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡುವುದನ್ನು ವಿವಾದ ಮಾಡಲ್ಲ. ಪಕ್ಷ ಅಧಿಕಾರಕ್ಕೆ ತೆರುವವರೆಗೂ ವಿವಾದ ಮಾಡಲ್ಲ ಎಂದರು. 

ಇನ್ನು ರಾಜ್ಯದಲ್ಲಿ ಇನ್ನಾದರೂ ಸಚಿವ ಸಂಪುಟ ವಿಸ್ತರಣೆ ಆಗಿಲ್ಲ. ಉಪ ಚುನಾವಣೆ ಮುಕ್ತಾಯವಾಗಿ ತಿಂಗಳು ಕಳೆದರೂ ಯಾವುದೇ ರೀತಿಯ ಅಭಿವೃದ್ಧಿಗೂ ಸಹಕಾರಿಯಾದ ಬೆಳವಣಿಗೆಗಳು ಆಗುತ್ತಿಲ್ಲ. ಉಪ ಮುಖ್ಯಮಂತ್ರಿ ನೇಮಕದ ಬಗ್ಗೆ ಚರ್ಚೆ ಮುಂದುವರಿದಿದ್ದು, ಯಡಿಯೂರಪ್ಪ 36 ಜನರನ್ನೂ ಡಿಸಿಎಂ ಮಾಡಿಕೊಳ್ಳಲಿ ಎಂದು ಲೇವಡಿ ಮಾಡಿದರು.

Latest Videos
Follow Us:
Download App:
  • android
  • ios