Asianet Suvarna News Asianet Suvarna News

ಅಲ್ಲಾನ ದಯೆಯಿಂದ ನಾನು ಪಾಸ್‌ ಆದ್ರೆ 2023ರಲ್ಲಿ ನಮ್ಮದೇ ಸರ್ಕಾರ: ಎಚ್ಡಿಕೆ

ಖಾದ್ರಿ ಸಾಹೇಬರನ್ನು ನಿಲ್ಲಿಸಲು ತಿರ್ಮಾನಿಸಿದ್ದು, ದೇವರು ಕೊಟ್ಟ ಪ್ರೇರಣೆ| ಯಾರು ಏನೇ ಅಂದರೂ ನಾವು ನಮ್ಮ ಜಾತ್ಯತೀತ ತತ್ವಗಳಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತೇವೆ| ಮುಸ್ಲಿಂ ಸಮಾಜದ ಅಭ್ಯರ್ಥಿಯನ್ನು ನಿಲ್ಲಿಸಿದರೆ ಆ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ: ಕುಮಾರಸ್ವಾಮಿ| 

HD Kumaraswamy Talks Over Basavakalyana Byelection grg
Author
Bengaluru, First Published Apr 9, 2021, 11:41 AM IST

ಬೀದರ್‌(ಏ.09): ಅಲ್ಲಾನ ದಯೆಯಿಂದ ಬಸವಕಲ್ಯಾಣ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಜಯಗಳಿಸಿದರೆ 2023ರಲ್ಲಿ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಜಿಲ್ಲೆಯ ಬಸವಕಲ್ಯಾಣದ ಜಮಾಅತೆ ಇಸ್ಲಾಮೀ ಹಿಂದ್‌ ಮಸೀದಿಯಲ್ಲಿ, ಜೆಡಿಎಸ್‌ ಅಭ್ಯರ್ಥಿ ಸೈಯದ್‌ ಯಸ್ರಾಬ್‌ ಅಲಿ ಖಾದ್ರಿ ಪರ ಪ್ರಚಾರ ನಡೆಸಿ ಮಾತನಾಡಿ, ಕಾಂಗ್ರೆಸ್‌ನ ಸ್ನೇಹಿತರು ನಮ್ಮ ಮೇಲೆ ಬಿಜೆಪಿಯ ‘ಬಿ’ ಟೀಮ್‌ ಅನ್ನೋ ಗೂಬೆ ಕೂರಿಸಿ ಪಕ್ಷದ ಬಗ್ಗೆ ಕೆಟ್ಟ ವಾತಾವರಣ ಸೃಷ್ಟಿಸಿದ್ದಾರೆ. ಯಾರು ಏನೇ ಅಂದರೂ ನಾವು ನಮ್ಮ ಜಾತ್ಯತೀತ ತತ್ವಗಳಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತೇವೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇನೆ. ಖಾದ್ರಿ ಸಾಹೇಬರನ್ನು ನಿಲ್ಲಿಸಲು ತಿರ್ಮಾನಿಸಿದ್ದು, ದೇವರು ಕೊಟ್ಟ ಪ್ರೇರಣೆ. ಮುಸ್ಲಿಂ ಸಮಾಜದ ಅಭ್ಯರ್ಥಿಯನ್ನು ನಿಲ್ಲಿಸಿದರೆ ಆ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ. ಕಲಬುರಗಿಯ ಇನಾಮ್ದಾರ್‌ ಅವರನ್ನು ನಾನು ವಿಚಾರಿಸಿದಾಗ ಅವರು ಖಾದ್ರಿ ಸಾಹೇಬರ ಹೆಸರು ಹೇಳಿದ್ದರು. ಅದೇ ಕಾರಣಕ್ಕಾಗಿ ಖಾದ್ರಿ ಸಾಹೇಬರಲ್ಲಿ ಮನವಿ ಮಾಡಿದಾಗ ಅವರು ಸಮಯ ತೆಗೆದುಕೊಂಡು ಅಭ್ಯರ್ಥಿಯಾಗಲು ಒಪ್ಪಿಕೊಂಡರು ಎಂದು ಕುಮಾರಸ್ವಾಮಿ ಹೇಳಿದರು.

'ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಾಯಿಸಿದ್ದೇ ಬಿಜೆಪಿ ಸಾಧನೆ'

ಇದು ನಮ್ಮ ಪಕ್ಷಕ್ಕೆ ಪ್ರತಿಷ್ಠೆಯ ಚುನಾವಣೆ. ಮುಸ್ಲಿಂ ಸಮಾಜದ ಮತಗಳನ್ನು ಒಡೆದು ಯಾವುದೋ ಒಂದು ಪಕ್ಷವನ್ನು ಗೆಲ್ಲಿಸಲು ನಾನು ಇಲ್ಲಿಗೆ ಬಂದಿಲ್ಲ. ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಬಂದಿದ್ದೇನೆ ಎಂದರು.
 

Follow Us:
Download App:
  • android
  • ios