ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ  ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದು, ಇದೀಗ ಹೊಸ ಶಂಕೆ ವ್ಯಕ್ತಪಡಿಸಿದ್ದಾರೆ. 

ಕೋಲಾರ (ಮಾ.16):  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಬಂದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ಸಮ್ಮಿಶ್ರ ಸರ್ಕಾರ ರಚನೆ ವೇಳೆ ನನ್ನ ಬಳಿಗೆ ಕಾಂಗ್ರೆಸ್‌ ಪಕ್ಷದವರೇ ರಾಜಕೀಯ ಹೊಂದಾಣಿಕೆಗೆ ಬಂದಿದ್ದರು. ಅದು ಮುಗಿದ ಅಧ್ಯಾಯ. ಕಾಂಗ್ರೆಸ್‌ನವರು ಪದೇ ಪದೆ ಹಳೇ ವಿಚಾರ ಹೇಳುತ್ತಿದ್ದಾರೆ ಎಂದರು. ಜತೆಗೆ, ಜೆಡಿಎಸ್‌ನಿಂದ ಹೊರ ಹೋಗುವವರಿಗೆ ಬಾಗಿಲುಗಳು ತೆರೆದೇ ಇದೆ. ಹೊರ ಹೋಗುವವರು ಹೋಗಬಹುದು. ಇದಕ್ಕೆ ನಾವು ಯಾವುದೇ ಅಡ್ಡಿ ಮಾಡಲ್ಲ ಎಂದು ಪುನರುಚ್ಚರಿಸಿದರು ಕುಮಾರಸ್ವಾಮಿ.

ಸೀಡಿ ಪ್ರಕರಣದ ದಿಕ್ಕು ತಪ್ಪಿಸಲು ಬೆಳಗಾವಿ ಕ್ಯಾತೆ: ಎಚ್‌ಡಿಕೆ ಶಂಕೆ

ಕೋಲಾರ: ಬೆಳಗಾವಿ ಗಡಿ ಗಲಾಟೆಗೂ ರಾಜ್ಯದಲ್ಲಿ ನಡೆಯುತ್ತಿರುವ ರಾಸ ಲೀಲೆ ಸಿ.ಡಿ. ಪ್ರಕರಣಕ್ಕೂ ಸಂಬಂಧ ಇರಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ. ಸಿ.ಡಿ. ಪ್ರಕರಣದ ದಿಕ್ಕು ತಪ್ಪಿಸಲು ಬೆಳಗಾವಿ ಗಡಿಯಲ್ಲಿ ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಮಾತ್ ಕೇಳ್ಬೇಡಿ : ದೇವೇಗೌಡ ಗರಂ

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ಬೆಳಗಾವಿ ಕ್ಯಾತೆ ತೆಗೆದಿರಬಹುದು ಎಂದರು.

ಇದೇ ವೇಳೆ, ಸಿ.ಡಿ. ಪ್ರಕರಣದ ‘ಮಹಾನಾಯಕ’ ಬಿಜೆಪಿಯಲ್ಲೂ ಇರಬಹುದು, ಕಾಂಗ್ರೆಸ್‌ನಲ್ಲೂ ಇರಬಹುದು. ಆದರೆ ನಾನು ಎಲ್ಲೂ ಆ ಮಹಾನಾಯಕನ ಬಗ್ಗೆ ಪ್ರಸ್ತಾಪಿಸಿಯೇ ಇಲ್ಲ. ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಿರುವುದು ಕೇವಲ ನಾಮಕಾವಸ್ಥೆ ಅಷ್ಟೇ. ತನಿಖೆ ಬಗ್ಗೆ ನನಗೆ ಪೂರ್ಣ ನಂಬಿಕೆಯೇ ಇಲ್ಲ ಎಂದರು.