ಮುತಾಲಿಕ್ ರನ್ನ ಒದ್ದು ಒಳಗಡೆ ಹಾಕ್ಬೇಕು HD Kumaraswamy

  • ಸಮಾಜದಲ್ಲಿ ಬೆಂಕಿ ಹಚ್ಚುವ ಮುತಾಲಿಕ್ ರನ್ನ ಒದ್ದು ಒಳಗಡೆ ಹಾಕಬೇಕು 
  • ಅದು ಶ್ರೀರಾಮಸೇನೆಯೋ, ರಾವಣ ಸೇನೆಯೋ  ಕುಮಾರಸ್ವಾಮಿ ವ್ಯಂಗ್ಯ. 
  • ಬಿಜೆಪಿ ಸರ್ಕಾರ, ಅಲಿ ಬಾಬಾ ಮತ್ತು 40 ಜನ ಕಳ್ಳರ ಸರ್ಕಾರ ಎಂದ ಹೆಚ್‌ಡಿಕೆ
HD Kumaraswamy slams pramod Muthalik and BJP  gow

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ(ಮೇ.9): ಶ್ರೀರಾಮ ಸೇನೆ ಮುಖಂಡ ಪ್ರಮೋದ್‌ ಮುತಾಲಿಕರನ್ನು ಒದ್ದು ಒಳಗಡೆ ಹಾಕದೇ ಹೋದರೆ ರಾಜ್ಯದಲ್ಲಿ ಸರ್ವಜನಾಂಗದ ಶಾಂತಿಯ ತೋಟ ನೆಲೆಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಅವರು,ಬಾದಾಮಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಸಾಮರಸ್ಯ ಕದಡುವಂತಹ ವಿಷಯಗಳು ಬೃಹದಾಕಾರವಾಗಿ ಬೆಳಯಲಿಕ್ಕೆ ಸರ್ಕಾರ ಮೌನವಾಗಿ ಒಪ್ಪಿಗೆ ಸೂಚಿಸುತ್ತಿದ್ದು, ಇಂತಹ ಕೆಲಸ ನಿಲ್ಲಿಸಬೇಕಾಗಿದೆ ಎಂದ ಅವರು, ಸಮಾಜ ಸಾಮರಸ್ಯ ಹಾಳಾದ ಮೇಲೆ ರಿಪೇರಿ ಮಾಡಲಿಕ್ಕಾಗುತ್ತಾ ಎಂದು ಕುಮಾರಸ್ವಾಮಿ ಸರ್ಕಾರ ಕ್ಕೆ  ಪ್ರಶ್ನೆ ಮಾಡಿದರು. ಅಜಾದ್ ಹಾಗೂ ಹನುಮಾನ್‌ಚಾಲೀಸ್ ಪಠಣದ ವಿಚಾರವಾಗಿ ಮಾತನಾಡಿ,ಇವತ್ತಿನಿಂದ ಶುರುಮಾಡಿದ್ದಾರಾ ಹನುಮಾನ್‌ಚಾಲೀಸ್, ಸುಪ್ರಿಕೋರ್ಟ್ ನಿಗದಿಯಾದ ಸೌಂಡನಂತೆ ಇರಲಿ, ಸರ್ಕಾರ ಇದಕ್ಕೆ ಪರ್ಮಿಷನ್ ಕೊಟ್ಟು ಬಿಡಲಿ. ಇದಕ್ಕೇನು ದೊಡ್ಡ ಪ್ರಚಾರದ ಅವಶ್ಯಕತೆ ಇಲ್ಲ. ಹಿಂದೂತ್ವ ಉಳಿಸೋಕೆ  ಹನುಮಾನ ಚಾಲೀಸ್ ಹೇಳ್ತಿದ್ದಾರೆ ಅಂತ ಏನಿಲ್ಲ, ದಿನಂಪ್ರತಿ ಮನೆಯಲ್ಲಿ ನಾವು ಹೇಳೋಲ್ವೆ. ಏನಾದ್ರೂ ಸಮಸ್ಯೆ ಆದ್ರೆ, ಆರೋಗ್ಯ ತೊಂದರೆ ಆದ್ರೆ ಹನುಮಾನ ಚಾಲೀಸ್ ಪಠಣ  ನಾವು ಮಾಡುತ್ತೇವೆ. ಇದೇನು ದೊಡ್ಡ ಸಾಧನೆ ಏನಿಲ್ಲ ಎಂದರು.

ಸಮಾಜದಲ್ಲಿ  ಬೆಂಕಿ ಇಡತಕ್ಕಂತವರಿದ್ದಾಲ್ಲ, ಟಿವಿ ಮುಂದೆ ಮಾತನಾಡೋರು ಪ್ರಮೋದ ಮುತಾಲಿಕ್ ಅವ್ಯಾವೋ ಇದ್ದಾವಲ್ಲ ಎಂದು ವ್ಯಂಗ್ಯವಾಡಿದ ಕುಮಾರಸ್ವಾಮಿ , ಮೊದಲು ಇಂತವರನ್ನೆಲ್ಲ ಒದ್ದು ಒಳಗಡೆ ಹಾಕದೇ ಇದ್ದರೆ ರಾಜ್ಯದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ನೆಲೆಸಲು ಕಷ್ಟ. ನಮಗೆ ಇದೆಲ್ಲಾ ಬೇಕಾಗಿಲ್ಲ. ಹೋದ ವರ್ಷದ ಬೆಳೆ ವಿಮೆ ದುಡ್ಡೇ ಬಂದಿಲ್ಲ, ಇದಕ್ಕೆ ನಮ್ಮ ಹೋರಾಟ ಇರಬೇಕು ಎಂದರು.

ಇನ್ನು ಏನು ಗಂಟೆ ಬಾರಿಸಿದರೆ ನಿಮಗೆಲ್ಲಾ ಸಿಕ್ಕಿ ಬಿಡುತ್ತಾ ಎಂದು ಲೇವಡಿ ಮಾಡಿದ ಕುಮಾರಸ್ವಾಮಿ ಅವರು, ಇದರ ಮಧ್ಯೆ 120 ರೂ.ಪೆಟ್ರೋಲ್, 100 ಡಿಸೈಲ್, ಸಾವಿರ ರೂಪಾಯಿ ಗ್ಯಾಸ್ ರೇಟ್ ಏರಿಕೆಯಾಗಿದೆ.ಈ ಬಗ್ಗೆ ನೀವ್ಯಾರು ಮಾತನಾಡೋಕೆ ರೆಡಿ‌ ಇಲ್ಲ. ಈ ವಿಷಯ ಹಿಡಿದುಕೊಂಡು ನಾವು ಹೊರಟಿದ್ದೇವೆ. ಜನರು ಸಾಯಿತ್ತಿದ್ದಾರೆ, ಜನರ ಜೀವನ ಜೊತೆ ಆಟಬೇಡಿ. ಇದನ್ನು ಸರಿಪಡಿಸಬೇಕಾಗಿರೋದು ಹೋರಾಟಗಾರರ, ಸಂಘಟನೆಗಳ ಕರ್ತವ್ಯವಾಗಿದೆ ಎಂದರು.

MALAI MAHADESHWARA SANCTUARY ಹುಲಿಸಂರಕ್ಷಿತ ಪ್ರದೇಶವನ್ನಾಗಿಸಲು ಸರ್ಕಾರದ ಮೀನಾಮೇಷ?

ಬಿಜೆಪಿ ಸರ್ಕಾರ, ಅಲಿ ಬಾಬಾ ಮತ್ತು 40 ಜನ ಕಳ್ಳರ ಸರ್ಕಾರ: ಇದೇ ಸಮಯದಲ್ಲಿ,ಶಾಸಕ ಯತ್ನಾಳ ಹೇಳಿಕೆ ವಿಚಾರವಾಗಿ ಮಾತನಾಡಿ, ಒಬ್ಬ ಜವಾಬ್ದಾರಿಯುತ ಶಾಸಕ ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು ಆಪಾದನೆ ಮಾಡಿದ್ದಾರೆ. ಕೇಂದ್ರದಲ್ಲಿನ ಬಿಜೆಪಿಯ ಕೆಲ ದಲ್ಲಾಳಿಗಳು ಹಣದ ಮೇಲೆ ಅಧಿಕಾರ ಕೊಡೋದು ಇದೆ. ಪಾಪದ ಹಣದ ಮೂಲಕ ಕೆಲವು ಎಂ ಎಲ್ ಎ ಗಳನ್ನ ತೆಗೆದುಕೊಂಡು ಈ ಸರ್ಕಾರ ಮಾಡಿದ್ದಾರೆ. ಇದು ಪರಿಶುದ್ಧ ಸರ್ಕಾರವಾ,  ಜನ ಇವರನ್ನ ಆಯ್ಕೆ ಮಾಡಿದ್ದಾರಾ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರ ನಡೀತಿರೋದು ನಾಡಿನ ಖಜಾನೆ ಲೂಟಿ ಮಾಡಿ ದೆಹಲಿಗೆ ಕಳಿಸೋಕೆ ಇರೋದು. ನಾನು ಪ್ರಧಾನ ಮಂತ್ರಿಗಳು ಮೇಲೆ ಚರ್ಚೆ ಮಾಡಲ್ಲ,ಅವರನ್ನ ಬಿಟ್ಟು ಕೆಲ ಮುಖಂಡರು, ಚುನಾವಣೆ ತಂತ್ರಕಾರಿಕೆ ಮಾಡೋರು ಇದ್ದಾರಲ್ಲ ಅವರ ಜೊತೆ ಇರೋರು ಪರಿಶುದ್ಧರಿಲ್ಲ ಎಂದು   ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬಿಜೆಪಿ ಅನ್ನೋದು ಭ್ರಷ್ಟ ಜನರ ಸರ್ಕಾರ ಅಂತ ಅನ್ನಬೇಕಾಗಿದೆ. ಆಲಿ ಬಾಬಾ ಮತ್ತು 40 ಮಂದಿ ಕಳ್ಳರ ರೀತಿಯ ಸಚಿವ ಸಂಪುಟ ಇದಾಗಿದೆ. 40 ಮಂದಿ ಕಳ್ಳರ ಸರ್ಕಾರ  ಎಂದು ಲೇವಡಿ ಮಾಡಿದರು, ದಾಖಲೆ ಇದ್ರೆ ಕೊಡಲಿ ಎಂಬ ಪ್ರಹ್ಲಾದ್ ಜೋಷಿ ಹೇಳಿಕೆ ವಿಚಾರವಾಗಿ ಮಾತನಾಡಿ,ನಾನು 2008 ರಿಂದ ಟನ್ ಗಟ್ಟಲೆ ದಾಖಲೆ ಇಟ್ಟೆ,ಆದ್ರೆ ಆ ದಾಖಲೆ ಇಟ್ಟುಕೊಂಡು ಯಾರ್ ಯಾರೋ ದುಡ್ಡು ಮಾಡಿಕೊಂಡರು, ಏನ್ ದಾಖಲೆ ಕೊಟ್ಟು ಈ ಸರ್ಕಾರ ಕ್ಕೆ ಏನ್ ಮಾಡ್ತೀರಿ ಎಂದರು, ನಾನು ಹಿಟ್ ಆಂಡ್ ರನ್ ಮಾಡಿಲ್ಲ, 2008ರಲ್ಲಿ ದಾಖಲೆ ಬಿಡುಗಡೆ ಮಾಡಿದ್ದಕ್ಕೆ ಯಡಿಯೂರಪ್ಪ ರಾಜೀನಾಮೆ ಕೊಡಬೇಕಾಗಿ ಬಂದಿದ್ದು ಎಂದು ನೆನೆಪಿಸಿದರು.

ಅರ್ಕಾವತಿ ವರದಿ ವಿಚಾರದಲ್ಲಿ ಬಿಜೆಪಿಗೆ ನಾಚಿಕೆಯಾಗಬೇಕು: ಅರ್ಕಾವತಿ ಪ್ರಕರಣ ಕುರಿತು ಕಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅರ್ಕಾವತಿ  ವರದಿ ಇಟ್ಟರೆ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ ಅಂತ ಹೇಳ್ತಿದ್ದಾರೆ, ನಾಚಿಕೆ ಅಗಲ್ವಾ ನಿಮಗೆ, ವರದಿ ಇಟ್ಟುಕೊಂಡು ಪೂಜೆ ಮಾಡ್ತಿದ್ದೀರಾ? ಗಂಟೆ ಇಟ್ಕೊಂಡು ವರದಿ ಪೂಜೆ ಮಾಡ್ತಿದ್ದೀರಾ? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಗಂಟು ಹೊಡಕೊಂಡು ಎಲ್ಲಿ ಇಟ್ಕೊಂಡಿದ್ದೀರಿ ಇದನ್ನು ಇಟ್ಟುಕೊಂಡು ಯಾಕೆ ಸರ್ಕಾರ ನಡೆಸ್ತಿದ್ದೀರಿ  ಎಂದು ತಿರುಗೇಟು ನೀಡಿದ ಕುಮಾರಸ್ವಾಮಿ,  ಅವರು ( ಸಿದ್ದರಾಮಯ್ಯ) ನೀವು ಭ್ರಷ್ಟರು ಅಂತ  ದಿನ ಬಾಯಿಗೆ ಬಂದಂತೆ ಬೈಕೊಂಡು ತಿರುಗುತ್ತಿದ್ದಾರಲ್ಲಪ್ಪ, ನೀವು ಬಿಡಿ ಅದನ್ನ, ಇಟ್ಕೊಂಡು ಎನ್ ಮಾಡ್ತೀರಿ ಎಂದು, ಇಬ್ಬರದು  ಡಬ್ಬಾ  ಹಿಡ್ಕೊಂಡು ಡಬ ಡಬ ಅಂತ ಕೊಟ್ಟವರ ಕಥೆಯಾಗಿದೆ ಎಂದರು.

Ballari ಮಟ್ಕಾ ದಂಧೆಕೋರರ ನಿದ್ದೆಗೆಡಿಸಿದೆ ಗಡಿಪಾರು ಅಸ್ತ್ರ

ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖ: ಮೊದಲಿಂದಲೂ ಕಾಂಗ್ರೆಸ್ ಹೇಗೆ ನಡೀತಿತ್ತು ,ರಾಜ್ಯದಲ್ಲಿರುವ ಹುಲ್ಲುಗಾವಲು ಮೇವು ದೆಹಲಿಗೆ ತೆಗೆದುಕೊಂಡು ಹೋಗುತ್ತಿದ್ದರು. ಈಗ ಬಿಜೆಪಿಯವರು ಅದೇ ಕೆಲಸ ಮಾಡ್ತಿದ್ದಾರೆ  ಎಂದರು. ದೊಡ್ಡ ದೊಡ್ಡ ನಾಯಕರು ಚುನಾವಣೆ ಮಾಡೋಕೆ ಬರ್ತಾರೆ ಅಂತ ಅಶೋಕ್ ಹೇಳ್ತಾರಲ್ಲ. ಅವರಿಗೆಲ್ಲ ಸಂದಾಯ ಆಗಬೇಕಲ್ಲ ಎಂದು ಕಿಡಿಕಾರಿದರು.

ನಾನು ಹಿಟ್ ಆಂಡ್ ರನ್ ಮಾಡಿಲ್ಲ: ಇದೇ ಸಮಯದಲ್ಲಿ, ಪಿಎಸ್ ಐ ಅಕ್ರಮ ಹಗರಣ ವಿಚಾರ,ಆರೋಪದಲ್ಲಿ ಎಚ್ ಡಿಕೆ ಹಿಟ್ ಆ್ಯಂಡ್ ರನ್ ಮಾಡುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ,ನಾನು ಹಿಟ್ ಆ್ಯಂಡ್ ರನ್ ಮಾಡ್ತಿಲ್ಲ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ಯಾವ್ನೋ ಇನ್ಸ್ಪೆಕ್ಟರ್, ಡಿವೈಎಸ್ ಪಿ ಅಮಾನತ್ತಲ್ಲ ಮಾಡೋದು, ನೀವು ಅರೆಸ್ಟ್ ಮಾಡಿಬಿಟ್ಟು ತನಿಖೆ ನಡೆಸೋದು,ಈ ಹಗರಣ ಎಷ್ಟು ದಿನ ನಡಿಸ್ತಿರಿ, ಮುಗಿಸಿ ಬಿಡ್ತಿರಿ ಎಂದರು.

ಡ್ರಗ್ಸ್ ವಿಚಾರ ಏನ್ ಮಾಡಿದ್ರಪ್ಪ, ಒಂದು ತಿಂಗಳ ವಿಚಾರನೆ ಮಾಡಿದ್ರಲ್ಲ,ಬೆಂಗಳೂರಿನ ರೇವೂ ಪಾರ್ಟಿನಲ್ಲಿ ಏನ್ ನಡಿದಿದೆ.  ಡ್ರಗ್ಸ್ ಸಪ್ಲಾಯ್ ನಡಿತಿತ್ತು ಅರೆಸ್ಟ್ ಮಾಡಿದ್ದಿವಿ ಅಂತಾ ಹೇಳ್ತಿರಿ. ಡ್ರಗ್ ತನಿಖೆ ನಡೆಸಿ ಏನ್ ಮಾಡಿದ್ರಿ ಎಂದು ಸರ್ಕಾರ ಪ್ರಶ್ನೆ ಮಾಡಿದ ಕುಮಾರಸ್ವಾಮಿ ಅವರು, ಪಿಎಸ್ಐ ಹಗರಣದಲ್ಲಿ ಪ್ರಭಾವಿ ಮಗನ ಭಾಗಿರುವ ಬಗ್ಗೆ ಕೆಣಕಿದರು, ಪ್ರಭಾವ ಮಗ ಯಾರು ಎಂದು ಕೇಳಿದಾಗ, ಅದನ್ನ ಹೇಳುವ ಕಾಲ ಬರುತ್ತೆ, ಅವನ ಹೆಸರು ಹೇಳಿ ಏನ್ ಉಪಯೋಗ ಹೇಳಿ, ಅದನ್ನ ಸರಿ ಪಡಿಸುವ ತಾಕತ್ತು ಇದೇಯಾ?  ಗೃಹ ಸಚಿವರಿಗೆ ಆ ಶಕ್ತಿ ಇದೀಯಾ?  ಬಿಜೆಪಿಯನ್ನ ಹತ್ತಿರದಿಂದ ನೋಡಿದವನು ನಾನು, ಬಿಜೆಪಿಗರು ಕೊನೆ ಕ್ಷಣದ ವರೆಗೂ ಅಧಿಕಾರ ಬಿಡುವುದಿಲ್ಲ, ಬಿಜೆಪಿಗರಿಗೆ ಒಂದೊಂದು ಕ್ಷಣ ಅಧಿಕಾರವಿದ್ದಷ್ಟು ಪೆಟ್ಟಿಗೆ ತುಂಬುತ್ತೆ, ಅದಕ್ಕೆ ಸರ್ಕಾರ ನಡೆಸ್ತಾರೆ. ಸರ್ಕಾರ ಬಿದ್ರೂ ಪರವಾಗಿಲ್ಲ ಅಂತಾ ಹಗರಣದ ಕಿಂಗ್ ಪಿನ್ ಹಿಡಿತಾರಾ ಎಂದು ಕುಮಾರಸ್ವಾಮಿ ಪ್ರಶ್ನೆ  ಮಾಡಿದರು.

Latest Videos
Follow Us:
Download App:
  • android
  • ios