Asianet Suvarna News Asianet Suvarna News

ಮಂಡ್ಯ: ಮಗುವಿಗೆ ಕುಮಾರಸ್ವಾಮಿ ಎಂದು ಹೆಸರಿಟ್ಟ ಹೆಚ್‌ಡಿಕೆ

ಮಳವಳ್ಳಿ ಕ್ಷೇತ್ರದ ಬಿ.ಜಿ.ಪುರ ಗ್ರಾಮದ ಮಹೇಶ್‌ ಎಂಬುವರ ತಂಗಿ ರಾಣಿ ತಮ್ಮ ಮಗುವಿಗೆ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ನಾಮಕರಣ ಮಾಡಿಸಿದ್ದು ವಿಶೇಷವಾಗಿತ್ತು

HD Kumaraswamy Named the Baby Kumaraswamy in Mandya grg
Author
First Published Dec 21, 2022, 3:39 AM IST

ಮಂಡ್ಯ(ಡಿ.21):  ಮಳವಳ್ಳಿ ತಾಲೂಕಿನಲ್ಲಿ ನಡೆದ ಪಂಚರತ್ನ ರಥಯಾತ್ರೆ ವೇಳೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೇಲಿನ ಅಭಿಮಾನ ಅಪರೂಪದ ಸನ್ನಿವೇಶವೊಂದಕ್ಕೆ ಸಾಕ್ಷಿಯಾಯಿತು.

ಮಳವಳ್ಳಿ ಕ್ಷೇತ್ರದ ಬಿ.ಜಿ.ಪುರ ಗ್ರಾಮದ ಮಹೇಶ್‌ ಎಂಬುವರ ತಂಗಿ ರಾಣಿ ತಮ್ಮ ಮಗುವಿಗೆ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ನಾಮಕರಣ ಮಾಡಿಸಿದ್ದು ವಿಶೇಷವಾಗಿತ್ತು. ಮುದ್ದಾದ ಮಗುವನ್ನು ಕೈಗೆತ್ತಿಕೊಂಡ ಎಚ್‌.ಡಿ.ಕುಮಾರಸ್ವಾಮಿ ಆ ಮಗುವಿಗೆ ಕುಮಾರಸ್ವಾಮಿ ಎಂದು ನಾಮಕರಣ ಮಾಡಿದರು.

MANDYA: ದೇವೇಗೌಡರ ಬೆನ್ನಿಗೆ ಚೂರಿ ಹಾಕೋಲ್ಲ: ಶಾಸಕ ಸಿ.ಎಸ್‌.ಪುಟ್ಟರಾಜು

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ಕಂದನಿಗೆ ನಾಮಕರಣ ಮಾಡಿಸಿದ ಸಂಭ್ರಮ ತಾಯಿಯಲ್ಲಿ ಮನೆ ಮಾಡಿತ್ತು. ಮಗುವಿಗೆ ನಾಮಕರಣ ಮಾಡುವ ವೇಳೆ ಮಹೇಶ್‌ ಮನೆಯಲ್ಲಿ ಹಾಗೂ ಬಿ.ಜಿ.ಪುರದಲ್ಲಿ ಹಬ್ಬದ ವಾತಾವರಣ ನೆಲೆಸಿತ್ತು. ಎಚ್‌.ಡಿ.ಕುಮಾರಸ್ವಾಮಿ ಅವರು ತಾಯಿ, ಮಗುವಿಗೆ ಶುಭ ಕೋರಿದರು.

Follow Us:
Download App:
  • android
  • ios