ಮಂಡ್ಯ/ಕೆ.ಆರ್‌.ಪೇಟೆ [ಮಾ.01]:  ಸಚಿವ ನಾರಾಯಣಗೌಡ ಇಬ್ಬಗೆ ನೀತಿ ಅನುಸರಿಸುತ್ತಿದ್ದಾನೆ. ಈ ಹಿಂದೆ ಜೆಡಿಎಸ್‌ನಲ್ಲಿದ್ದಾಗ ಗಣಿಗಾರಿಕೆಗೆ ಪರವಾನಗಿ ನೀಡುವಂತೆ ಗಣಿ ಸಚಿವರಿಗೆ ಪತ್ರ ಬರೆದಿದ್ದರು. ಈಗ ಬಿಜೆಪಿಗೆ ಹೋದ ಮೇಲೆ  ಕ್ರಷರ್‌ ಅಕ್ರಮವಾಗಿದೆ ಎಂದು ಅನುಮತಿ ರದ್ದು ಮಾಡುವಂತೆ ಸೂಚಿಸಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಪೌರಾಡಳಿತ ಸಚಿವರ ವಿರುದ್ಧ ಹರಿಹಾಯ್ದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ ಕಾರ್ಯಕರ್ತರಿಗೆ ನೀಡುತ್ತಿರುವ ಸ್ಯಾಂಪಲ್‌ ಇದು. ನಾನು ಯಾವುದೇ ಕಾರಣಕ್ಕೂ ಹೋರಾಟ ಬಿಡಲ್ಲ. ಕೊನೆವರೆಗೂ ಹೋರಾಟ ಮಾಡುತ್ತೇನೆ. ನಾನು ವೈಯಕ್ತಿಕ ದ್ವೇಷ ಮಾಡಲ್ಲ. ನಾನೇ ಸಿಎಂ ಯಡಿಯೂರಪ್ಪ ಅವರಿಗೆ ಕಾಲ್ ಮಾಡಿ ಹೇಳಿದ್ದೀನಿ. ಹೀಗೆ ಮಾಡೋದು ತಪ್ಪು. ನಾರಾಯಣಗೌಡ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು. ಈ ನಾರಾಯಣಗೌಡ ಬಿಜೆಪಿಗೆ ಹೋದಾಗ ಜೆಡಿಎಸ್… ನಿಷ್ಠಾವಂತ ಕಾರ್ಯಕರ್ತರು ಯಾರೂ ಹೋಗಲಿಲ್ಲ. ಇದೇ ಕಾರಣಕ್ಕೆ ನಾರಾಯಣಗೌಡ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದರು.’

ಮಂತ್ರಿಗಳ ಮಾತು ಕೇಳಿ ಡಿಸಿ ಹೀಗೆ ಮಾಡುತ್ತಿದ್ದಾರೆ. ಈ ಹಿಂದೆ ನಮ್ಮ ಕಾರ್ಯಕರ್ತರ ಜೊತೆ ಚೆನ್ನಾಗಿ ಇದ್ದರು. ನಾನು ಗಣಿ ಮಾಲೀಕರ ಪರ ನಿಲ್ಲಲ್ಲ. ಇಲ್ಲಿ ಎಲ್ಲವೂ ಕಾನೂನು ಪ್ರಕಾರ ಇದೆ. ಅದಕ್ಕಾಗಿ ನಾನು ಈ ಕ್ರಷರ್‌ ಪರವಾಗಿ ನಿಂತಿದ್ದೇನೆ. ಕಾನೂನು ಪ್ರಕಾರ ಇಲ್ಲದಿದ್ರೆ ನಾನು ನಿಲ್ಲುತ್ತಿರಲಿಲ್ಲ ಎಂದರು.

ಬಿಜೆಪಿಗೆ ಹೋದವರು ಮತ್ತೆ ವಾಪಸ್ : ಮಾರ್ಗರೇಟ್ ಹೇಳಿಕೆಗೆ ಗೌಡರ ಉತ್ತರ...

ಸಿಎಂ ಅವರಿಗೆ ನಾನು ಈ ಎಲ್ಲಾ ದಾಖಲೆ ಕಳಿಸಿದ್ದೇನೆ. ಸಿಎಂ ವಿಶೇಷ ಕರ್ತವ್ಯಾಧಿಕಾರಿ ಲಕ್ಷ್ಮೀ ನಾರಾಯಣ್‌ ಗೂ ಪ್ರಕರಣವನ್ನು ವಿವರಿಸಿದ್ದೇನೆ. ಈ ಡಿಸಿ ಮಂತ್ರಿ ಹಾಗೂ ಮೇಲಾಧಿಕಾರಿಗಳ ಮಾತು ಕೇಳುತ್ತಿದ್ದಾರೆ. ಮಂಡ್ಯ ಡಿಸಿ ವೆಂಕಟೇಶ  ದಕ್ಷ ಅಧಿಕಾರಿ, ಅದರಲ್ಲಿ ಎರಡು ಮಾತಿಲ್ಲ. ಆದರೆ ಕ್ರಷರ್‌ ವಿಷಯದಲ್ಲಿ ಕಾನೂನಿಂತೆ ನಡೆಯುತ್ತಿಲ್ಲ ಎಂದರು.

ನಾನು ಸಿಡಿದೇಳೋದು ಸತ್ಯ ನೀವು ಇನ್ನೂ ಮೂರೂವರೆ ವರ್ಷ ಅಧಿಕಾರ ನಡೆಸಿ ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ ಆದ್ರೆ ಒಬ್ಬ ಕಾರ್ಯಕರ್ತರಿಗೆ ತೊಂದರೆ ಆದರೂ ನಾನು ಸಿಡಿದೋಳೋದು ಸತ್ಯ.ಯಾವ ಸಿಎಂ, ಮಂತ್ರಿ ಬಗ್ಗೆಯೂ ಕೆಟ್ಟದ್ದಾಗಿ ಮಾತಾಡಲ್ಲ. ಅವರು ಮಹಾರಾಷ್ಟ್ರದಿಂದ ಬಂದವರು. ಮೊನ್ನೆ ಒಂದು ವಿಚಾರ ನೋಡಿದ್ದೇನೆ. ನಾರಾಯಣಗೌಡರ ಮುಖ ಬಯಲಾಗಿದೆ ಎಂದರು.

ಅಧಿವೇಶನದ ಬಳಿಕ ಹೋರಾಟ:

ಬಿಜೆಪಿ ಸರ್ಕಾರದ ಮಂತ್ರಿಗಳು ನಮ್ಮ ಪಕ್ಷದವರಿಗೆ ಯಾರ್ಯಾರಿಗೆ ತೊಂದರೆ ಕೊಡ್ತಿದ್ದಾರೆ ಎಲ್ಲವನ್ನೂ ಪಟ್ಟಿಮಾಡುತ್ತಿದ್ದೇನೆ. ಮುಂದೊಂದು ದಿನ ಕೆ.ಆರ್‌ .ಪೇಟೆ ಪಟ್ಟಣದಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ. ಜಿಲ್ಲೆಯ ರಾಜಕಾರಣದ ಏಳು-ಬೀಳು ಸ್ಮರಿಸಿದ ಗೌಡರು. ಕೋರ್ಟ್‌ ಆದೇಶಕ್ಕೆ ತಕ್ಕಂತೆ ಸಿಎಂ ನಡೆದುಕೊಳ್ಳಬೇಕು. ಆಗ ಅವರನ್ನ ಗೌರವದಿಂದ ಕಾಣುತ್ತೇವೆ. ಲ್ಲವಾದರೆ ಸದನದ ಒಳ, ಹೊರಗೆ ಹೋರಾಟ. ಎರಡೂ ಸದನದ ಒಳಗೆ ಶಾಸಕರು, ಹೊರಗೆ ನಾವು ಹೋರಾಟ ಮಾಡ್ತೇವೆ ಎಂದು ಎಚ್ಚರಿಸಿದರು.