ಕನಕಪುರ [ಮಾ.12]:  ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌ ಡಿ.ಕೆ.​ ಶಿ​ವ​ಕು​ಮಾರ್‌ ತಮ್ಮ ರಾಜ​ಕೀಯ ಜೀವ​ನದಲ್ಲಿ ಚುನಾ​ವ​ಣೆ ಎಂಬ ಪರೀ​ಕ್ಷೆ​ಯಲ್ಲಿ 2 ಬಾರಿ ಸೋತಿ​ದ್ದರೆ, 7 ಬಾರಿ ಗೆಲುವು ಸಾಧಿ​ಸಿ​ದ್ದಾರೆ. ಆ ಎರಡು ಸೋಲನ್ನು ಡಿ.ಕೆ.​ಶಿ​ವ​ಕು​ಮಾರ್‌ ಜೆಡಿ​ಎಸ್‌ ವರಿಷ್ಠ ಎಚ್‌ .ಡಿ.ದೇವೇ​ಗೌಡ ವಿರುದ್ಧ ಅನು​ಭ​ವಿ​ಸಿ​ದ್ದಾ​ರೆ.

ಈಗ ದೇವೇ​ಗೌಡ ಮತ್ತು ಡಿ.ಕೆ.​ಶಿ​ವ​ಕು​ಮಾರ್‌ ನಡುವೆ ರಾಜ​ಕೀಯ ವೈರತ್ವ ಕಡಿ​ಮೆ​ಯಾಗಿ ಗೌರವ ಭಾವನೆ ಮೂಡಿದೆ. ಮೂರು ದಶ​ಕಗಳ ಕಾಲ ದೇವೇ​ಗೌ​ಡ ಅವ​ರನ್ನು ರಾಜ​ಕೀ​ಯ​ವಾಗಿ ಪ್ರತಿ ಹಂತ​ದ​ಲ್ಲಿ​ಯೂ ವಿರೋಧಿ​ಸಿಕೊಂಡು ಬಂದ​ವರು. ಇಬ್ಬರು ರಾಜ​ಕೀ​ಯ​ವಾಗಿ ಒಬ್ಬ​ರ​ನ್ನೊ​ಬ್ಬರು ಮಣಿ​ಸಲು ಹೋರಾಟ ನಡೆ​ಸಿ​ದ​ವರು.

ಟ್ರಬಲ್ ಶೂಟರ್ ಆಗಿದ್ದ ಡಿಕೆಶಿ ನಿದ್ದೆಗೆಡಿಸುತ್ತಿದ್ದದ್ದು ಮಾತ್ರ ಡಿಎಂವಿ!...

1985ರ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಅಂದಿನ ಪ್ರಭಾವಿ ಜನತಾದಳ ನಾಯ​ಕ​ರಾದ ಎಚ್‌ .ಡಿ. ದೇವೇಗೌಡ ಅವರ ವಿರುದ್ಧ ಕಾಂಗ್ರೆಸ್‌ ಪಕ್ಷದಲ್ಲಿ ಉತ್ತಮ ಅಭ್ಯರ್ಥಿ ಸಿಗುವುದು ದುರ್ಲಭವಾದಾಗ ಪಕ್ಷದ ವರಿಷ್ಠರ ಕಣ್ಣು ಡಿ.ಕೆ. ಶಿವಕುಮಾರ್‌ ಮೇಲೆ ಬಿದ್ದಿತು. ಆಗಷ್ಟೇ ರಾಜಕಾರಣದಲ್ಲಿ ಅಂಬೆಗಾಲಿಡುತ್ತಿದ್ದ ಡಿ.ಕೆ. ಶಿವಕುಮಾರ್‌ ಅವರನ್ನು ಎಚ್‌.ಡಿ. ದೇವೇಗೌಡ ಅವರ ವಿರುದ್ಧ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಲಾಯಿತು. ಸಾಕಷ್ಟುಪ್ರಬಲ ಪ್ರತಿರೋಧವನ್ನೇ ತೋರಿದ ಡಿ.ಕೆ. ಶಿವಕುಮಾರ್‌ ಚುನಾವಣೆಯಲ್ಲಿ ದೇವೇಗೌಡರು ಪ್ರಯಾಸದ ಜಯ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

1999ರ ಸಾರ್ವ​ತ್ರಿಕ ಸಂಸತ್‌ ಚುನಾ​ವ​ಣೆಯಲ್ಲಿ ಗೆದ್ದಿದ್ದ ಕಾಂಗ್ರೆಸಿನ ಎಂ.ವಿ. ಚಂದ್ರಶೇಖರ ಮೂರ್ತಿ ಅವರ ಅಕಾ​ಲಿಕ ನಿಧ​ನ​ದಿಂದಾಗಿ ಉಪ​ಚು​ನಾ​ವಣೆ ಎದು​ರಾ​ಯಿತು. 2002ರ ಕ​ನ​ಕ​ಪುರ ಲೋಕ​ಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಜೆಡಿಎಸ್‌ನ ಪ್ರಬಲ ನಾಯಕ ಎಚ್‌.ಡಿ. ದೇವೇಗೌಡರು ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ ವಿರುದ್ಧ ಗೆಲವು ಸಾಧಿಸಿದರು. ಆದರೆ 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ.​ಶಿ​ವ​ಕು​ಮಾರ್‌ ಹೆಣೆದ ರಾಜ​ಕೀಯ ತಂತ್ರ​ಗಾ​ರಿ​ಕೆ​ಯಲ್ಲಿ ಕಾಂಗ್ರೆಸಿನ ತೇಜಸ್ವಿನಿ ಗೌಡ ಎದುರು ದೇವೇಗೌಡರು ಸೋಲು ಅನುಭವಿಸಿದರು.