ಹರ್ ಘರ್ ತಿರಂಗಾ ಬದಲಿಗೆ ಹರ್ ಘರ್ ಪೇಡ್ ಪೌದಾ ಅಭಿಯಾನ ಮಾಡುವಂತೆ ಮೋದಿಗೆ ಮನವಿ
ಆಜಾದೀ ಕಾ ಅಮೃತ್ ಮಹೋತ್ಸವದ ಈ ಸಂದರ್ಭದಲ್ಲಿ ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಹರ್ ಘರ್ ತಿರಂಗಾ ಅಭಿಯಾನ ಜೋರಾಗಿದೆ. ಇದರ ಮಧ್ಯೆ ಪೋರಿಯೊಬ್ಬಳು ಹರ್ ಘರ್ ಪೇಡ್ ಪೌದಾ ಅಭಿಯಾನ ಮಾಡುವಂತೆ ಪ್ರಧಾನಿಗೆ ಪತ್ರ ಬರೆದಿದ್ದಾಳೆ.
ಹಾವೇರಿ, (ಆಗಸ್ಟ್.13): ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದೆ. ಅಮೃತ ಮಹೋತ್ಸವದಅಂಗವಾಗಿ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಅದರಂತೆ ಪ್ರಧಾನಿ ಕರೆಗೆ ಸ್ಪಂದಿಸಿರುವ ಕನ್ನಡಿಗರು, ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿದ್ದಾರೆ.
ಇದರ ಮಧ್ಯೆ ಹರ್ ಘರ್ ತಿರಂಗಾ ಬದಲಿಗೆ ಹರ್ ಘರ್ ಪೇಡ್ ಪೌದಾ ಅಭಿಯಾನ ಮಾಡುವಂತೆ ಹಾವೇರಿಯ ಪೋರಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾಳೆ.ಹೌದು..... ಯು.ಕೆ ಜಿ ಸೆಂಟ್ ಅನ್ನೆ ಸ್ಕೂಲ್ ವಿದ್ಯಾರ್ಥಿನಿ ಸಾಧ್ಯ ಸಿಂಗ್ ಜೀವನ್ ಸಿಂಗ್ ರಜಪೂತ್ ಎನ್ನುವ ಪೋರಿ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾಳೆ.
ಹರ್ ಘರ್ ತಿರಂಗಾ: ಮಸೀದಿ ಮೇಲೂ ಹಾರಿದ ರಾಷ್ಟ್ರಧ್ವಜ
ಪ್ರತಿ ಮನೆಮನೆಗೆ ಗಿಡ ಕೊಡಿ, ಗಿಡಗಳನ್ನು ಬೆಳೆಸಿದರೆ ಅವು ಹೂವು ಹಣ್ಣು ಕೊಡುತ್ತವೆ. ಗಿಡ ಗಿಡಗಳಿಂದ ಆಕ್ಸಿಜನ್ ಸಿಗುತ್ತದೆ. ಪರಿಸರ ರಕ್ಷಣೆಗೆ ಅನುಕೂಲ ಆಗುತ್ತದೆ . ಹೀಗಾಗಿ ಹರ್ ಘರ್ ಪೇಡ್ ಪೌದಾ ಅಭಿಯಾನ ಶುರು ಮಾಡುವಂತೆ ಸಾಧ್ಯ ಸಿಂಗ್ ಜೀವನ್ ಸಿಂಗ್ ರಜಪೂತ್ ಎನ್ನುವ ಬಾಲಕಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾಳೆ.
ದೇಶದೆಲ್ಲೆಡೆ ಹರ್ ಘರ್ ತಿರಂಗಾ ಹಮ್ಮಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನ ಶ್ಲಾಘಿಸಿ ಹಾವೇರಿಯ 4 ವರ್ಷದ ಬಾಲಕಿ ಸಾದ್ಯಸಿಂಗ್ ರಜಪುತ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾಳೆ. ಮೋದಿಯವರಿಗೆ ಬರೆದಿರುವ ಪತ್ತವನ್ನ ಹಾವೇರಿಯ ಅಂಚೆ ಇಲಾಖೆ ಮೂಲಕ ಪೋಸ್ಟ್ ಮಾಡಿದ್ದಾಳೆ. ಹರ್ ಘರ್ ತಿರಂಗಾ ಅಭಿಯಾನವನ್ನ ಬೆಂಬಲಿಸಿ ನಾಲ್ಕು ವರ್ಷದ ಬಾಲಕಿ ಪತ್ತ ಬರೆದಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮಸೀದಿ ಮೇಲೆ ಹಾರಾಡಿದ ತ್ರಿವರ್ಣ ಧ್ವಜ
ಹೌದು....ವಿಜಯಪುರ ಜಿಲ್ಲೆಯ ಗೋಕಾಕ ನಗರದ ಅಂಬೇಡ್ಕರ್ ಗಲ್ಲಿಯ ಈದ್ಗಾ ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಾಡಿದೆ. ಇಂದು(ಶನಿವಾರ) ಮುಸ್ಲಿಂ ಜಮಾತ್ ಕಮಿಟಿ ಮಸೀದಿಯ ಮೇಲೆ ಧ್ವಜಾರೋಹಣ ಮಾಡಿದೆ. ಇದು ಅಚ್ಚರಿಗೆ ಕಾರಣವಾಗಿದೆ.
ಮಸೀದಿಗಳ ಮೇಲೆ ರಾಷ್ಟ್ರಧ್ವಜ ಏರಿಸಿದ ಉದಾಹರಣೆಗಳೇ ಇಲ್ಲ. ಆದ್ರೆ, ಇದೀಗ ಪ್ರಧಾನ ನರೇಂದ್ರ ಮೋದಿ ಅವರು ಹರ್ ಘರ್ ತಿರಂಗ ಅಭಿಯಾನಕ್ಕೆ ಕರೆಕೊಟ್ಟ ಬೆನ್ನಲ್ಲೇ ಗೋಕಾಕ್ ಮಸೀದಿ ಮೇಲೆ ತ್ರಿವರ್ಣ ಕಟ್ಟಿರುವುದು ಸಂತಸದ ಸಂಗತಿಯಾಗಿದೆ.