ಕೆಲವೇ ತಿಂಗಳಲ್ಲಿ ನಿವೃತ್ತಿ ಆಗಬೇಕಿದ್ದ ಯೋಧ ಹೃದಯಾಘಾತದಿಂದ ಸಾವು!

ಕೆಲವೇ ತಿಂಗಳಲ್ಲಿ ನಿವೃತ್ತಿ ಹೊಂದಿ ಮನೆಗೆ ಬರಬೇಕಿದ್ದ ಯೋಧ ಮಲ್ಲಿಕಾರ್ಜುನ ಸುತ್ತೂರುಮಠ ಹೃದಯಾಘಾತದಿಂದ ಸಾವು. ವಿಧಿ ಎಷ್ಟು ಕ್ರೂರಿ!

haveri soldier supposed  retire in a few months died heart attack rav

ಹಾವೇರಿ ( ಜುಲೈ 23) : ಸಾವು ಎಷ್ಟು ಅನಿರೀಕ್ಷಿತ,‌ ಕೆಲವೊಮ್ಮೆ ಈ ಜೀವನ ನೀರಿನ‌ ಮೇಲಿನ ಗುಳ್ಳೆ ಅಂತ ನಶ್ವರತೆಯ ಭಾವ ಆವರಿಸಿಕೊಂಡು ಬಿಡುತ್ತೆ. ಹೌದು ಸಾವು ಹೇಳಿಕೇಳಿ ಬರೋದಿಲ್ಲ. ಯಾವ ಕ್ಷಣದಲ್ಲಿ ಬೇಕಾದರೂ ಬರಬಹುದು. ಕೆಲವರ ಸಾವಿಗೆ ಕಾರಣಗಳೇ ಇರೋದಿಲ್ಲ. ದಾರಿಯಲ್ಲಿ ಹೊರಟವನ ಮೇಲೆ ಮರದ ಕೊಂಬೆ ಮುರಿದುಬಿಳುವುದು, ಎಚ್ಚರಿಕೆಯಿಂದ ಬೈಕ್ ಮೇಲೆ ಹೊರಟಿದ್ದವನಿಗೆ ಕುಡಿದ ಮತ್ತಿನಲ್ಲಿ ಚಲಾಯಿಸಿಕೊಂಡ ಬಂದ ಲಾರಿ ಚಾಲಕ ಡಿಕ್ಕಿ ಹೊಡೆಯುವುದು, ಮನೆಯಿಂದ ಆಫೀಸ್‌ಗೆ ಹೊರಟ ಐದೇ ನಿಮಿಷದಲ್ಲಿ ಅಪಘಾತದಲ್ಲಿ ಸಾಯುವುದು, ಮದುವೆ ಸಂಭ್ರಮದಲ್ಲಿ ವರನಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗುವುದು, ಮುಂದಿನ ವರ ಊರಿಗೆ ಬರುತ್ತೇನೆಂದು ಹೇಳಿದ ಮಗ, ಹೆಣವಾಗಿ ಬರುವುದು.. ಇದೆಲ್ಲ ಸಾವು ಎಷ್ಟೊಂದು ಅನಿರಿಕ್ಷಿತ ಅನ್ನಿಸದೇ ಇರಲಾರದು. ಅಂಥದ್ದೇ ಘಟನೆಯೊಂದು ಇಲ್ಲಿದೆ; 19 ವರ್ಷ ದೇಶಸೇವೆಗಾಗಿ ಜೀವನ ಮುಡಿಪಿಟ್ಟು ಶತ್ರುಗಳಿಗೆ ಎದೆಯೊಡ್ಡಿ ದೇಶ ಸೇವೆ ಮಾಡಿದ್ದ ಯೋಧರೊಬ್ಬರು ಯೋಧರೊಬ್ಬರು ಇನ್ನು ಕೆಲವೇ ತಿಂಗಳುಗಳಲ್ಲಿ ನಿವೃತ್ತಿಯಾಗಿ ಊರಿಗೆ ವಾಪಸ್ ಆಗುವವರಿದ್ದರು. ಪುಟ್ಟ ಸಂಸಾರ, ದೇಶ ಸೇವೆ ಮಾಡಿದ ಹೆಮ್ಮೆ, ಹುಟ್ಟಿದ ಊರಿಗೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ಮರಳುವೆ ಎನ್ನುವ ಸಂತಸ. ಆದರೆ ಆ ವಿಧಿಗೆ ಕರುಣಯೇ ಇಲ್ಲ.

   19 ವರ್ಷ 7 ತಿಂಗಳ ಸೇವೆ ಸಲ್ಲಿಸಿ ಇನ್ನೈದು ತಿಂಗಳಲ್ಲಿ ಸ್ವಗ್ರಾಮಕ್ಕೆ ಮರಳುತ್ತೇನೆಂದ ಯೋಧನ ಸಾವು  ಅಕ್ಷರಶಃ ಈ ಗ್ರಾಮಸ್ಥರನ್ನುಶೋಕ‌ಸಾಗರದಲ್ಲಿ ಮುಳುಗಿಸಿದೆ.ಪಂಜಾಬ್(Punjab) ರಾಜ್ಯದ ಪಠಾಣ ಕೋಟ್(Pathankot) ಪ್ರಾಂತ್ಯದಲ್ಲಿ BSF ಯೋಧರಾಗಿ ಕರ್ತವ್ಯ  ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನಯ್ಯ ಸುತ್ತೂರಮಠ(Mallikarjunaiah Suttoorumath)ನಿಧನರಾಗಿದ್ದಾರೆ.ಹಾವೇರಿ(Haveri) ಜಿಲ್ಲೆ ಗುತ್ತಲ ಪಟ್ಟಣ(Guttal town)ದ ಸಮೀಪದ ಎಂ. ಜಿ ತಿಮ್ಮಾಪುರ(M.G.Timmapur)  ಗ್ರಾಮದ ನಿವಾಸಿ   ಮಲ್ಲಿಕಾರ್ಜುನಯ್ಯ ಸುತ್ತೂರಮಠ  ಕಳೆದ  ಗುರುವಾರ ತಡರಾತ್ರಿ ಹೃದಯಾಘಾತ(Heart attack)ದಿಂದ  ನಿಧನರಾಗಿದ್ದಾರೆ.ಇಂದು ತಿಮ್ಮಾಪುರ ಗ್ರಾಮದಲ್ಲಿ ಅವರ ಸ್ವಂತ  ಜಮೀನಿನಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಯೋಧನ ಪಾರ್ಥೀವ ಶರೀರವನ್ನ ಮೆರವಣಿಗೆ ಮಾಡಿ ನಂತರ ಅಂತ್ಯಕ್ರಿಯೆ ಮಾಡಲಾಗುತ್ತೆ. ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಸೇರಿರೋ ಗ್ರಾಮಸ್ಥರು, ಕಂಬನಿ ಮಿಡಿದಿದ್ದಾರೆ.

Latest Videos
Follow Us:
Download App:
  • android
  • ios