ಅಪ್ರಾಪ್ತ ಬಾಲಕಿಗೆ ಮುತ್ತಿಟ್ಟವಗೆ 8 ವರ್ಷ ಜೈಲು
ಅಪ್ರಾಪ್ತ ಬಾಲಕಿಗೆ ಮುತ್ತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ 8 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರಕ್ಕೂ ಅಧಿಕ ದಂಡ ವಿಧಿಸಲಾಗಿದೆ.
ಹಾವೇರಿ [ಜ.07]: ಅಪ್ರಾಪ್ತ ಬಾಲಕಿ ಕೆನ್ನೆಗೆ ಮುತ್ತಿಟ್ಟ 24 ವರ್ಷದ ಆರೋಪಿ ಸಂತೋಷ ಶಂಕ್ರಪ್ಪ ಲಮಾಣಿಗೆ ಎಂಟು ವರ್ಷ ಸಜೆ ಹಾಗೂ 25 ಸಾವಿರ ದಂಡ ವಿಧಿಸಿ ಒಂದನೇ ಅಧಿಕ ಜಿಲ್ಲಾ ಸತ್ರ(ಪೋಕ್ಸೋ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಜ.3 ರಂದು ತೀರ್ಪು ನೀಡಿದ್ದಾರೆ.
ರಾಣಿಬೆನ್ನೂರು ತಾಲೂಕು ಹನುಮಾಪುರ ತಾಂಡಾದಲ್ಲಿ 2019 ಆ. 26 ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಸಾಂಸ್ಕೃತಿ ಕಾರ್ಯಕ್ರಮ ನೋಡಿ ಮನೆಗೆ ವಾಪಸ್ ಬರುತ್ತಿದ್ದ ಅಪ್ರಾಪ್ತ ಬಾಲಕಿ ಕೆನ್ನೆಗೆ ಆರೋಪಿ ಸಂತೋಷ ಶಂಕ್ರಪ್ಪ ಲಮಾಣಿ ಮುತ್ತು ಕೊಟ್ಟಿದ್ದರಿಂದ ಬಾಲಕಿ 2019 ಆ.28 ರಂದು ಹನುಮಾಪುರ ತಾಂಡಾದ ಕಾಲವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.
‘ಅತ್ಯಾಚಾರ ಎಸಗಿ ಇಸ್ಲಾಂಗೆ ಮತಾಂತರಕ್ಕೆ ಒತ್ತಡ’...
ರಾಣಿಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರಕ್ಷಕ ಉಪ ನಿರೀಕ್ಷಕರು ಆರೋಪಿಯ ವಿರುದ್ಧ ಸಾಕ್ಷಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾ ಧೀಶರು, ಆರೋಪಗಳು ರುಜುವಾತಾದ ಕಾರಣ ಆರೋಪಿ ಸಂತೋಷ ಶಂಕ್ರಪ್ಪ ಲಮಾಣಿಗೆ ಪೋಕ್ಸೋ ಕಾಯ್ದೆಯಡಿ 5 ವರ್ಷಗಳ ಸಜೆ ಮತ್ತು 15 ಸಾವಿರ ರು. ದಂಡ ಹಾಗೂ ಕಲಂ 354ಲ ಐಪಿಸಿ ಮತ್ತು ಕಲಂ 12 ಪೋಕ್ಸೋ ಕಾಯ್ದೆಯಡಿ ಆರೋಪಿಗೆ 3 ವರ್ಷ ಸಜೆ ಹಾಗೂ 10 ಸಾವಿರ ರು. ದಂಡವಿಧಿಸಲಾಗಿದೆ.
ಲೈಂಗಿಕ ದೌರ್ಜನ್ಯ ಕೇಸ್ ಹಿಂಪಡೆಯದಿದ್ದಕ್ಕೆ ಹಲ್ಲೆ: ಸಂತ್ರಸ್ತೆ ತಾಯಿ ಸಾವು
ಸಂತ್ರಸ್ತೆ ಕುಟುಂಬಕ್ಕೆ ಪರಿಹಾರವಾಗಿ 20 ಸಾವಿರ ರು. ನೀಡಲು ಆದೇಶಿಸಿ ತೀರ್ಪು ನೀಡಲಾಗಿದೆ. ಸರ್ಕಾರದ ಪರವಾಗಿ (ಪೋಕ್ಸೋ) ವಿಶೇಷ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ವಿನಾಯಕ ಎಸ್.ಪಾಟೀಲ ವಾದ ಮಂಡಿಸಿದ್ದರು.