ಕಾನ್ಪುರ[ಜ.18]: ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದ ಯುವತಿಯ ತಾಯಿಯ ಮೇಲೆ ಗುಂಪೊಂದು ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

2018ರಲ್ಲಿ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 6 ಮಂದಿ ದುರುಳರು ಇತ್ತೀಚೆಗಷ್ಟೇ ಜಾಮೀನು ಪಡೆ ದುಕೊಂಡಿದ್ದರು. ಕಳೆದ ವಾರ ಆ ವ್ಯಕ್ತಿಗಳು ಸಂತ್ರಸ್ತೆ ಯ ಮನೆಗೆ ಬಂದು ಪ್ರಕರಣವನ್ನು ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದಳು. ಆದರೆ, ಅದಕ್ಕೆ ನಿರಾಕರಿಸಿದ್ದರಿಂದ ಕುಟುಂಬ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಬೈಲಹೊಂಗಲ ಬಳಿ ಲಾರಿ-ಬುಲೆರೊ ಡಿಕ್ಕಿ: ತಾಯಿ ಮಗ ಸೇರಿ ಮೂವರ ಸಾವು

ಬಳಿಕ ಕುಟುಂಬ ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಂತ್ರಸ್ತ ಯುವತಿಯ ತಾಯಿ ಸಾವಿಗೀಡಾಗಿದ್ದಾಳೆ. ಹಲ್ಲೆಯ ವಿಡಿಯೋ ತುಣುಕೊಂಡು ಲಭ್ಯವಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.